ಕಾಸರಗೋಡು: ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿ ಭಾರೀ ಪಟಾಕಿ ಸ್ಫೋಟ ಸಂಭವಿಸಿದ್ದು. ಕಾಸರಗೋಡಿನ ನೀಲೇಶ್ವರ ವೀರೇರ್ಕಾವು ದೇವಸ್ಥಾನದಲ್ಲಿ ನಿನ್ನೆ ಮಧ್ಯರಾತ್ರಿ ಸ್ಫೋಟ ಸಂಭವಿಸಿ ಸುಮಾರು 154ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನೀಲೇಶ್ವರದ ದೇವಸ್ಥಾನದಲ್ಲಿ ತೈಯ್ಯಂ ಉತ್ಸವ ನಡೆಯುವುದಕ್ಕೂ ಮುನ್ನ ಸಿಡಿಮದ್ದು ಸ್ಫೋಟವಾಗಿದ್ದು. ಪಟಾಕಿ ದಾಸ್ತಾನಿಟ್ಟ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡು ದುರಂತ ಸಂಭವಿಸಿದೆ. ಉತ್ಸವ ಹಿನ್ನಲೆ ದೇವಸ್ಥಾನದಲ್ಲಿ ಸಾವಿರಾರು ಜನರು ಸೇರಿದ್ದರು. ಈ ಸಂದರ್ಭದಲ್ಲಿ ಪಟಾಕಿ ತುಂಬಿದ್ದ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡು ಒಮ್ಮಲೆ ಭಾರೀ ಸ್ಪೋಟ ಸಂಭವಿಸಿದೆ.
ಒಮ್ಮಿಂದೊಮ್ಮೆಲೇ ಪಟಾಕಿ ಸ್ಫೋಟಗೊಂಡ ಹಿನ್ನಲೆ ಜನರಿಗೆ ಸುಟ್ಟ ಗಾಯಗಾಳಾಗಿದ್ದು. 150ಕ್ಕು ಹೆಚ್ಚು ಜನರಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧಿಸಿ ದೇವಸ್ಥಾನ ಕಮಿಟಿ ಅಧ್ಯಕ್ಷ ಮತ್ತು ಸೆಕ್ರೆಟರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು. ನೀಲೇಶ್ವರ ಪೊಲೀಸರಿಂದ ತೀವ್ರ ತನಿಖೆ ನಡೆಸಲಾಗುತ್ತಿದೆ. ಸ್ಫೋಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಟಾಕಿ ದುರಂತದಲ್ಲಿ 97 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು. 8 ಮಂದಿ 80 ಶೇ. ಸುಟ್ಟು ಹೋಗಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ದುರಂತದಲ್ಲಿ ಗಾಯಗೊಂಡವರನ್ನು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ 18, ಕಣ್ಣೂರು ಎಂಐಎಂ ಆಸ್ಪತ್ರೆಯಲ್ಲಿ 18, ಕಾಞಂಗಾಡ್ ಐಶಾಲ್ ಆಸ್ಪತ್ರೆಯಲ್ಲಿ 17, ಕಾಞಂಗಾಡ್ ಜಿಲ್ಲಾಸ್ಪತ್ರೆಯಲ್ಲಿ 16, ಸಂಜೀವಿನಿ ಆಸ್ಪತ್ರೆಯಲ್ಲಿ 10, ಕಣ್ಣೂರು ಮೆಡಿಕಲ್ ಕಾಲೇಜಿನಲ್ಲಿ 5 ಜನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಮಾಡುತ್ತಿದ್ದಾರೆ. ಒಟ್ಟು 154 ಜನ ಗಾಯಗೊಂಡಿದ್ದಾರೆಂದು ಕಾಸರಗೋಡು ಜಿಲ್ಲಾಧಿಕಾರಿ ಇಂಬಾಸೇಕರ್ ಮಾಹಿ