Saturday, September 21, 2024

ಚಿನ್ನ ಪ್ರಿಯರಿಗೆ ಬಿಗ್​ ಶಾಕ್​​​​; ಗರಿಷ್ಠ ಮಟ್ಟಕ್ಕೆ ಏರಿದ ಬಂಗಾರದ ಬೆಲೆ

ಚಿನ್ನದ ಬೆಲೆಯಲ್ಲಿ ಮತ್ತೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಚಿನ್ನ ಪ್ರಿಯರಿಗೆ ಮತ್ತೆ ಶಾಕ್​ ಎದುರಾಗಿದೆ.
ಚಿನ್ನದ ಬೆಲೆ ಕಳೆದ ಎರಡು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ 1 ಸಾವಿರದ 200 ರೂಪಾಯಿ ಏರಿಕೆ ಆಗಿದೆ. ಪ್ರಸ್ತುತ 10 ಗ್ರಾಂ ಬಂಗಾರದ ಬೆಲೆ 75 ಸಾವಿರದ 550 ರೂಪಾಯಿ ಇದೆ.

ಗಮನಿಸಿ: ನಾಗಮಂಗಲ ಗಲಭೆ ಪ್ರಕರಣ; ಕಾನೂನು ಪ್ರಕಾರವೇ ಎಫ್​​​ಐಆರ್​: ಪರಮೇಶ್ವರ್

ಇನ್ನು ಬೆಳ್ಳಿ ಬೆಲೆಯೂ ಸಹ ನಾಲ್ಕು ದಿನದಲ್ಲಿ 5 ಸಾವಿರದ 200 ರೂಪಾಯಿ ಏರಿಕೆ ಆಗಿದೆ. ಹೀಗಾಗಿ ಒಂದು ಕೆಜಿ ಬೆಳ್ಳಿಗೆ 89 ಸಾವಿರ ರೂಪಾಯಿ ಇದೆ. ಅಮೆರಿಕದ ಫೆಡರಲ್​ ರಿಸರ್ಸ್​​ ಬ್ಯಾಂಕ್​​ ಬಡ್ಡಿ ದರ ಕಡಿತಗೊಳಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಡಾಲರ್​ ಮೌಲ್ಯ ಕಡಿಮೆ ಆಗಲಿದೆ. ಮತ್ತೊಂದೆಡೆ ಭಾರತದಲ್ಲಿ ಹಬ್ಬದ ಋತು ಇರುವುದರಿಂದ ಬೆಲೆ ಏರಿಕೆ ಆಗಿದೆ ಅಂತಾ ತಜ್ಞರು ಅಂದಾಜಿಸಿದ್ದಾರೆ.

RELATED ARTICLES

Related Articles

TRENDING ARTICLES