Saturday, September 21, 2024

ಗೃಹಲಕ್ಷ್ಮಿ ಯೋಜನೆಗೆ ಗ್ರಹಣ: 2 ತಿಂಗಳಿಂದ ಹಣ ಪಾವತಿ ಸ್ಥಗಿತ

ಬೆಂಗಳೂರು: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಗ್ರಹಣ ಹಿಡಿದಿದೆ. 1.28 ಕೋಟಿ ಮನೆ ಯಜಮಾನಿಯರ ಖಾತೆಗೆ ಹಣ ಸಂದಾಯವಾಗುತ್ತಿಲ್ಲ. ಕಳೆದ 2 ತಿಂಗಳಿನಿಂದ 2,000 ಹಣ ಬರ್ತಿಲ್ಲ ಎಂದು ಮಹಿಳೆಯರು ಗೋಳಾಡುತ್ತಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಹಣವನ್ನ ಯಾಕೆ ಹಾಕ್ತಿಲ್ಲ ಎಂಬ ಪ್ರಶ್ನೆ ಮೂಡಿದೆ. ಭಾಗ್ಯದ ‘ಗ್ಯಾರಂಟಿ’ಗಾಗಿ ಮಹಿಳೆಯರು ಕಾಯುತ್ತಿದ್ದಾರೆ. ಕೆಲವರಿಗೆ 2 ತಿಂಗಳು, ಇನ್ನು ಹಲವರಿಗೆ 4 ತಿಂಗಳ ಹಣ ಬಾಕಿಯಿದೆ. ಒಂದೇ ಬಾರಿಗೆ DBT ಮಾಡುತ್ತಾ ಸಿದ್ದರಾಮಯ್ಯ ಸರ್ಕಾರ ಎನ್ನೋ ಅನುಮಾನ ಮೂಡಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಆಗಸ್ಟ್​​ 1ರಿಂದ 7ನೇ ವೇತನ ಆಯೋಗ ಜಾರಿ

ಹಣ ಯಜಮಾನಿಯರ ಖಾತೆಗೆ ಬಾರದಿರಲು ತಾಂತ್ರಿಕ ದೋಷನಾ.. ಅಕೌಂಟ್‌ ಖಾಲಿನಾ.. ಎಂಬ ಅನುಮಾನ ಶುರುವಾಗಿದೆ. ಹಣವಿಲ್ಲದೆ ಗ್ಯಾರಂಟಿಗೆ ಕೊಕ್ಕೆ ಹಾಕ್ತಿದ್ಯಾ ಅನ್ನೋ ಡೌಟ್ ಶುರುವಾಗಿದೆ. ಸದ್ಯ ಸರ್ಕಾರದ ವಿರುದ್ಧ ನಾರಿಯರು ಆಕ್ರೋಶ ಹೊರಹಾಕ್ತಿದ್ದಾರೆ.

ರಾಜ್ಯ ಸರ್ಕಾರವು ಕಳೆದ ಲೋಕಸಭಾ ಚುನಾವಣೆಯ ವೇಳೆ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಹಣ ಹಾಕಿದ್ದೇ ಕೊನೆ ಬಳಿಕ ಯಾರ ಖಾತೆಗೂ ಹಣ ಸಂದಾಯವಾಗಿಲ್ಲ, ಇದೇ ವೇಳೆ ಖಾತೆಗೆ ಹಣ ಸಂದಾಯವಾಗಿದೆಯೇ ಮನೆಯ ಯಜಮಾನಿಯರು ನಿತ್ಯ ಬ್ಯಾಂಕ್​ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಹೈರಾಣಾಗಿದ್ದಾರೆ.

RELATED ARTICLES

Related Articles

TRENDING ARTICLES