Saturday, September 21, 2024

ವಿರಾಟ್​ ಕೊಹ್ಲಿ ಮಾಲಿಕತ್ವದ ಪಬ್​ ವಿರುದ್ದ FIR ದಾಖಲು

ಬೆಂಗಳೂರು: ಟೀಂ ಇಂಡಿಯಾ ಆಟಗಾರ ವಿರಾಟ್​ ಕೊಹ್ಲಿ ಸಹ ಮಾಲಿಕತ್ವದ ಪಬ್​ ಮೇಲೆ FIR ದಾಖಲಾಗಿದೆ.

ನಗರದ ಕಸ್ತೂರಬಾ ರಸ್ತೆಯಲ್ಲಿರುವ ಒನ್​ 8 ಕಮ್ಯೂನ್​ ಪಬ್ ಮೇಲೆ FIR ದಾಖಲಾಗಿದೆ​. ಈ ಪಬ್​ಗೆ ಕ್ರಿಕೆಟಿಗ ವಿರಾಟ್​ ಕೊಹ್ಲಿ ಕೂಡ ಸಹ ಮಾಲಿಕರಾಗಿದ್ದಾರೆ. ನಿಯಮ ಮೀರಿ ತಡರಾತ್ರಿಯ ವರೆಗೆ ಪಬ್​ ತೆರೆದ ಆರೋಪದಡಿಯಲ್ಲಿ FIR ದಾಖಲಾಗಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಬಿಎಂಟಿಸಿ ಬಸ್​ ಬೆಂಕಿಗಾಹುತಿ!

ಜುಲೈ 6 ರಂದು ಮಧ್ಯರಾತ್ರಿ 1.20ರ ವರೆಗೆ ಒನ್​ 8 ಕಮ್ಯೂನ್​ ಪಬ್​ ತೆರೆದಿತ್ತು, ಇದು ಬಿಬಿಎಂಪಿ ಹಾಗು ಅಬಕಾರಿ ಇಲಾಖೆ ನಿಯಮಗಳನ್ನು ಮೀರಿ ಪಬ್​ ನಡೆಸಲಾಗಿತ್ತು. ಈ ಕುರಿತು ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್​ ಸಿಬ್ಬಂದಿ ಪರಿಶೀಲನೆ ವೇಳೆ ಬೆಳಕಿಗೆ ಬಂದಿತ್ತು ಈ ಹಿನ್ನೆಲೆ ಪಬ್​ ವಿರುದ್ದ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ FIR ದಾಖಲಾಗಿದೆ.

RELATED ARTICLES

Related Articles

TRENDING ARTICLES