Monday, July 8, 2024

ಹಾವುಗಳ ಗೂಡಲ್ಲಿ ಸೈನಿಕರಿಗೆ ತರಬೇತಿ

ನಮ್ಮ ದೇಶದ ಒಳಗಾಗಲಿ, ಹೊರಗಾಗಲಿ, ಎಲ್ಲಿ ಏನೇ ಆದ್ರೂ ಕೂಡ ಥಟ್ ಅಂತ ನಮ್ಮ ಸಹಾಯಕ್ಕೆ ಬರೋದು ನಮ್ಮ ಸೈನಿಕರು. ದೊಡ್ಡ ಗಲಭೆಯ ಹುಟ್ಟಡಗಿಸೋದಕ್ಕೂ ಅವರೇ ಬೇಕು. ಗಡಿಯಲ್ಲಿ ಶತ್ರುಗಳು ಕಣ್ತಪ್ಪಿಸಿ ಒಳಗೆ ನುಸುಳಿ ಬರದಂತ ಕಾವಲು ಕಾಯೋದಕ್ಕೂ ಅವರೇ ಬೇಕು. ಅಕ್ಕಪಕ್ಕದ ಶತ್ರುಗಳು ಗಡಿ ಮೀರಿ ಮುನ್ನುಗ್ಗಿ ಬಂದಾಗ ಅವರನ್ನು ಎದುರಿಸಿ ನಿಂತು ಸೆದೆ ಬಡಿಯೋದಕ್ಕೂ ನಮಗೆ ನಮ್ಮ ಸೈನಿಕರೇ ಬೇಕು. ತೀರಾ ಇತ್ತೀಚೆಗೆ ಚೀನಾ-ಭಾರತದ ನಡುವೆ ಗಲ್ವಾನ್ ಗಡಿಯಲ್ಲಿ ಚಿಂಗಿ ಸೈನಿಕರು ಗಡಿ ರೇಖೆ ದಾಟಿ, ನಮ್ಮ ನೆಲದೊಳಗೆ ಬಂದು ಗಲಾಟೆ ಮಾಡುತ್ತಿದ್ದರಲ್ಲಾ ಆಗ, ನಮ್ಮ ಸೈನಿಕರು ಅವರನ್ನು ಹೇಗೆ ಹೊಡೆದು ಮಣ್ಣು ಮುಕ್ಕಿಸಿದ್ರಲ್ವಾ.

ಸಾಮಾನ್ಯವಾಗಿ ಎರಡೂ ದೇಶಗಳ ಗಡಿಗಳ ನಡುವೆ ಒಂದು ಐದುನೂರು ಮೀಟರ್ ಉದ್ದದ ಪ್ರದೇಶವನ್ನು ಹಾಗೆ ಮುಕ್ತವಾಗಿ ಬಿಟ್ಟಿರುತ್ತಾರೆ. ನಮ್ಮಲ್ಲಿ ಬಡಾವಣೆಗಳನ್ನು ನಿರ್ಮಿಸುವಾಗ ಮನೆಗಳ ನಡುವೆ ಕನ್ಸರ್ವೆನ್ಸಿ ಜಾಗ ಬಿಟ್ಟಿರುತ್ತಾರಲ್ಲಾ ಥೇಟ್​ ಇದೂ ಕೂಡ ಅದೇ ರಿತಿಯಲ್ಲೇ.. ಇದನ್ನೂಒಂದು ರೀತಿಯಲ್ಲಿ ಕನ್ಸರ್ವೆನ್ಸಿ ಅಂತಾ ಹೇಳಬಹುದು. ಆ ಜಾಗವನ್ನು ಜೀರೋ ಏರಿಯಾ ಅಥವಾ ಶೂನ್ಯ ಪ್ರದೇಶ ಅಂತಾ ಕರೆಯುತ್ತಾರೆ. ಇದು ಮುಕ್ತ ಪ್ರದೇಶ. ಇದು ಯಾವುದೇ ದೇಶಕ್ಕೆ ಸೇರದ ಜಾಗ. ಈ ಜಾಗದಲ್ಲಿ ಎರಡೂ ದೇಶಗಳ ಸೈನಿಕರು ಪೆಟ್ರೋಲಿಂಗ್ ಮಾಡುತ್ತಿರುತ್ತಾರೆ. ಆದರೆ, ಪೆಟ್ರೋಲಿಂಗ್ ಮಾಡುವಾಗ ಇಲ್ಲಿ ಸೈನಿಕರು ಯಾವುದೇ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಹಾಗಂತ ಜಿನೆವಾ ಕನ್ವೆನ್ಷನ್​​ ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಆಷಾಡ ಮಾಸದ ವಾರಾಹಿ ನವರಾತ್ರಿಯಲ್ಲಿ ದೇವಿಯ ಆರಾಧನೆ ವಿಶೇಷತೆ ಏನು ಗೊತ್ತಾ?

ಅವತ್ತು ಚೀನಿ ಸೈನಿಕರು ಮುಳ್ಳು ಬಡಿಗೆಗಳನ್ನು ಹಿಡಿದುಕೊಂಡು ಈ ಜೀರೋ ಲ್ಯಾಂಡ್​ ನ್ನು ದಾಟಿ ನಮ್ಮ ದೇಶದ ಗಡಿಕಡೆಗೆ ಬಂದುಬಿಟ್ಟಿದ್ದರು. ಅಂತಹಾ ಸಂದರ್ಭದಲ್ಲಿ, ನಮ್ಮ ನಮ್ಮ ವೀರ ಯೋಧರು . ಆ ಚೀನಿ ಸೈನಿಕರನ್ನು ಬರಿಗೈಲಿ ಎದುರಿಸಿದ್ರಲ್ಲಾ, ಕೇವಲ ಮುಷ್ಟಿ ಪ್ರಹಾರ ಮಾಡಿಯೇ ಹಲವಾರು ಚೀನಿ ಸೈನಿಕರನ್ನು ಹೊಡೆದು ಉರುಳಿಸಿಬಿಟ್ಟಿದ್ದರು.

ನಮ್ಮ ಸೈನಿಕರಿಗೆ ಇಷ್ಟೊಂದು ತಾಕತ್ತು ಬಂದಿದ್ದಾದರೂ ಹೇಗೆ.. ಆಶ್ಚರ್ಯ ಆಗತ್ತೆ. ಮಿಲಿಟರಿ ಟ್ರೈನಿಂಗ್ ಅಂದ್ರೆ ಹಾಗೆ.. ನಮ್ಮ ಸೈನಿಕರು ಎಂತಹಾ ಸನ್ನಿವೇಶವನ್ನಾದರೂ ಎದುರಿಸಬೇಕು. ಆ ರೀತಿ ಟ್ರೈನಿಂಗ್ ಕೊಡುತ್ತಾರೆ. ದಟ್ಟ ಕಾಡು ಇರಬಹುದು. ಕೆಸರು ಮಯವಾದ ಪ್ರದೇಶವೇ ಇರಬಹದು. ಮರುಭೂಮಿಯೇ ಆಗಬಹುದು ಅಥವಾ ಹಿಮಾಚ್ಛಾದಿತ ಪ್ರದೇಶವೇ ಇರಬಹುದು. ಎಂತಹಾ ಕಡೆಯಲ್ಲದರೂ ತಮ್ಮ ಜೀವವನ್ನೂ ಉಳಿಸಿಕೊಂಡು ದೇಶವನ್ನೂ ರಕ್ಷಿಸಬೇಕಲ್ವಾ ಹಾಗಾಗಿಯೇ ನಮ್ಮ ಸೈನಿಕರು ಸೊಪ್ಪು ಸೆದೆ, ಕ್ರಿಮಿ ಕೀಟ ಯಾವುದನ್ನಾದರೂ ತಿಂದು ಜೀವ ಉಳಿಸಿಕೊಳ್ಳಬೇಕು. ಅತ್ಯಂತ ಭಯಂಕರ ಹಿಂಸ ಜಂತುಗಳ ನಡುವೆ ಇದ್ದರೂ ಸ್ಥೈರ್ಯ ಕಳೆದುಕೊಳ್ಳದಂತೆ ಇರೋದು ಹೇಗೆ ಅನ್ನೋದನ್ನು ತರಬೇತಿ ಅವಧಿಯಲ್ಲಿ ನಮ್ಮ ಸೈನಿಕರಿಗೆ ಕಲಿಸುತ್ತಾರಂತೆ.. ಅದರಲ್ಲೂ ಎನ್ ಎಸ್ ಜಿ ಯೋಧರ ತರಬೇತಿಯ ಸಂದರ್ಭದಲ್ಲಿ ವಿಶಸರ್ಪಗಳಿರುವ ಕಡೆಯಲ್ಲಿ ಅವರನ್ನು ನಿಲ್ಲಿಸಿಬಿಡುತ್ತಾರಂತೆ. ಬುಸುಗುಟ್ಟುವ ಹಾವುಗಳು ಮೈಮೇಲೆಲ್ಲಾ ಹರಿದಾಡುತ್ತಿದ್ದರೂ ಸಹ, ಅವರು ಅಲುಗಾಡದೆ ಹೆದರದೆ ನಿಲ್ಲಬೇಕು. ಒಂದು ಸ್ವಲ್ಪ ಆಚೀಚೆ ಕದಲಿದರೂ ಹಾವುಗಳು ಕಚ್ಚುತ್ತವೆ. ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಗಂಟೆಗಟ್ಟಲೆ ಅಲುಗಾಡದೆ ಉಸಿರುಬಿಗಿಹಿಡಿದು ನಿಲ್ಲೋದನ್ನು ಕಲಿಸೋದಕ್ಕೆ ಇಂತಹಾ ತರಬೇತಿ ನೀಡುತ್ತಾರಂತೆ.. ಈ ದೃಷ್ಯಗಳನ್ನು ನೋಡುತ್ತಿದ್ದರೆ ಮೈ ಜುಂ ಎನಿಸುತ್ತದೆ. ಇಂತಹಾ ಕಠಿಣ ತರಬೇತಿ ಪಡೆದು, ದೇಶವನ್ನು ರಕ್ಷಿಸುತ್ತಿರುವ ನಮ್ಮ ವೀರಸೈನಿಕರಿಗೊಂದು ಸೆಲ್ಯೂಟ್​

RELATED ARTICLES

Related Articles

TRENDING ARTICLES