Sunday, September 29, 2024

ರೈಲ್ವೇ ಪೊಲೀಸರ ಕಾರ್ಯಾಚರಣೆ: 30 ಕೆಜಿಗೂ ಅಧಿಕ ಗಾಂಜಾ ವಶಕ್ಕೆ

ಬೆಂಗಳೂರು: ಬೆಂಗಳೂರು ರೈಲ್ವೇ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ರೈಲಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಬಂಧನವಾಗಿದ್ದು ಬಂಧಿತನಿಂದ 30 ಕೆಜಿಗೂ ಅಧಿಕ ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದೆ.

ತ್ರಿಪುರದ ಅಗರ್ತಲಾ ಮೂಲದ ದೀಪನ್​ ದಾಸ್​ (20) ಬಂಧಿತ ಆರೋಪಿ, ಇನ್ನುಳಿದ ಇಬ್ಬರು ಆರೋಪಿಗಳಾದ ಸುಮನ್​, ಬಿಸ್ವಜಿತ್​ ಪರಾರಿಯಾಗಿದ್ದಾರೆ. ಬಂಧಿತನಿಂದ 32 ಕೆಜಿ, 888 ಗ್ರಾಂ ಗಾಂಜಾವನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಬೈಯಪ್ಪನಹಳ್ಳಿ ರೈಲ್ವೇ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್: ಆಟೋ ಮೀಟರ್​ ದರ ಏರಿಸುವಂತೆ ಚಾಲಕರ ಒತ್ತಾಯ

ಬಂಧಿತ ದೀಪನ್​ ದಾಸ್,​ ರೈಲ್ವೆಯಲ್ಲಿ ಬೆಡ್​ ರೋಲರ್ ಆಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ, ರೈಲಿನಲ್ಲಿ ಬೆಡ್​ಶೀಟ್​, ತಲೆದಿಂಬು ಇತರೆ ವಸ್ತುಗಳಿಗಾಗಿ ಬೇರೆ ಕಂಪಾರ್ಟ್​ಮೆಂಟ್​ ಇರುತ್ತಿತ್ತು. ಈ ದಿಂಬು ಮತ್ತು ಬೆಡ್​ ಶೀಟ್​ಗಳಲ್ಲಿ ಗಾಂಜಾ ಇಟ್ಟು ಸಾಗಾಟ ಮಾಡುತ್ತಿದ್ದ. ಆರೋಪಿಗಳು ಅಗರ್ತಾಲ to SMVT ಎಕ್ಸ್ ಪ್ರೆಸ್ ರೈಲಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರು.

ಈ ಕುರಿತು ಖಚಿತ ಮಾಹಿತಿ ಮೇರೆಗೆ ಬೆಂಗಳುರು ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ದೀಪನ್​ ದಾಸ್​ನನ್ನು ಬಂಧಿಸಿದ್ದಾರೆ. ದೀಪನ್ ದಾಸ್ ಸಿಕ್ಕಿಬೀಳುತ್ತಿದ್ದಂತೆ ಮತ್ತಿಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಸದ್ಯ ಬೈಯಪ್ಪನಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES

Related Articles

TRENDING ARTICLES