Sunday, September 29, 2024

ದರ್ಶನ್​ ಬಳಿ ಇರುವ 2 US ಮೇಡ್​ ಗನ್ ವಶಕ್ಕೆ ಪಡೆಯುವಂತೆ ಸೂಚನೆ!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ2 ಆರೋಪಿ ದರ್ಶನ್‌ ಜೈಲುಪಾಲಾಗಿದ್ದು ಈ ನಡುವೆ ದರ್ಶನ್‌ ಬಳಿ ಇರುವ ಎರಡು US ಮೇಡ್​ ಗನ್​ಗಳನ್ನು ವಶಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್​ ಆಯುಕ್ತರಾದ ದಯಾನಂದ್​ ಸೂಚನೆ ನೀಡಿದ್ದಾರೆ.

ಲೋಕಸಭಾ ಚುನಾವಣಾ ಸಂದರ್ಭದಲ್ಲು ಲೈಸೆನ್ಸ್ ಪಡೆದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕು. ಆದರೆ ಗಣ್ಯ ವ್ಯಕ್ತಿಗಳು ಅನಿವಾರ್ಯದ ಕುರಿತು ದಾಖಲೆ ನೀಡಿ ಶಸ್ತ್ರಾಸ್ತ್ರ ವಾಪಸ್ ನೀಡುವಿಕೆಯಿಂದ ವಿನಾಯಿತಿ ಪಡೆಯಬಹುದಾಗಿದೆ. ನಿವೃತ್ತ ನ್ಯಾಯಾಧೀಶರು, ಐಎಎಸ್, ಐಪಿಎಸ್ ಅಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್‌ಗಳು, ಬ್ಯುಸಿನೆಸ್ ಮನ್‍ಗಳು, ಶಾಸಕರು, ಪರಿಷತ್ ಸದಸ್ಯರು ಸೇರಿ ಹಿರಿಯ ರಾಜಕಾರಣಿಗಳಿಗೆ ಮಾತ್ರ ವಿನಾಯಿತಿ ನೀಡಬಹುದು. ಇವರನ್ನು ಹೊರತುಪಡಿಸಿ ಉಳಿದವರ ಎಲ್ಲರ ಬಳಿಯಿರುವ ಶಸ್ತ್ರಾಸ್ತ್ರಗಳನ್ನು ಆಯಾ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ವಶಕ್ಕೆ ಪಡೆಯಬೇಕೆಂಬ ನಿಯಮವಿದೆ.

ಇದನ್ನೂ ಓದಿ: ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್: ಆಟೋ ಮೀಟರ್​ ದರ ಏರಿಸುವಂತೆ ಚಾಲಕರ ಒತ್ತಾಯ

ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಶಸ್ತ್ರಾಸ್ತ್ರ ಠೇವಣಿ ಸ್ಕ್ರೀನಿಂಗ್ ಕಮಿಟಿಯ ಅಧ್ಯಕ್ಷರಾಗಿದ್ದು, ಬೆಂಗಳೂರು ನಗರದ್ಯಾಂತ 7,830 ಗನ್ ಲೈಸೆನ್ಸ್ ಪರವಾನಗಿದಾರರಿದ್ದಾರೆ. ನಗರದ 277 ಜನರಿಗೆ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ನೀಡಲಾಗಿದ್ದು, ಅತಿ ಗಣ್ಯರಿಗೆ ನೀಡುವ ವಿನಾಯಿತಿಯಲ್ಲಿ ನಟ ದರ್ಶನ್ ಮತ್ತು ಪ್ರದೋಷ್‍ಗೆ ಸಹ ವಿನಾಯಿತಿ ನೀಡಿ ಕಳೆದ ಮಾರ್ಚ್ 27ರಂದು ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಆದೇಶ ನೀಡಿದ್ದರು.

ಇದೀಗ ನಟ ದರ್ಶನ್ ಮತ್ತು ಪ್ರದೋಷ್ ಬಳಿಯಿದ್ದ ಲೈಸನ್ಟ್‌ ಪಿಸ್ತೂಲ್‌ಗಳನ್ನು ವಶಕ್ಕೆ ಪಡೆಯುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ತನಿಖಾಧಿಕಾರಿಗಳು ಆರ್‌ಆರ್ ನಗರ ಮತ್ತು ಗಿರಿನಗರ ಪೊಲೀಸರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES