Sunday, September 29, 2024

ಉ. ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯಲ್ಲೆಯಾದ್ಯಂತ ಇಂದು ಸಹ ಮಳೆ ಮುಂದುವರೆದಿದೆ. ಮಲೆನಾಡು ಭಾಗದ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಹೆಚ್ಚಿನ ಮಳೆಯಾಗುತಿದ್ದರೇ ಕರಾವಳಿ ಭಾಗದ ಕಾರವಾರ, ಅಂಕೋಲ, ಭಟ್ಕಳ, ಹೊನ್ನಾವರ ಭಾಗದಲ್ಲಿ ಅಲ್ಪ ಮಳೆಯಾಗುತಿದ್ದು ಗಾಳಿ ಸಮುದ್ರದ ಆರ್ಭಟ ಹೆಚ್ಚಾಗಿದೆ.

ಮಳೆಯಿಂದಾಗಿ ಕಾರವಾರದಲ್ಲಿ ನಗರಸಭೆಯ ನಿರ್ಲಕ್ಷದಿಂದಾಗಿ ಮಾಲಾದೇವಿ ನಗರದಲ್ಲಿ ಚರಂಡಿಗೆ ಕಸ ಕಟ್ಟಿಕೊಂಡು ಮಳೆಯ ನೀರು ಹೊರ ಹೋಗದೇ ಮಾಲಾದೇವಿ ನಗರದ ನಾಲ್ಕು ಮನೆಗಳು ಜಲಾವೃತವಾಗಿದೆ.

ಇದನ್ನೂ ಓದಿ: ಮೃತ ರೇಣುಕಾಸ್ವಾಮಿ ಕುಟುಂಬದ ಬೆಂಬಲಕ್ಕೆ ನಿಂತ ನಟ ಧೃವಾ ಸರ್ಜಾ ಅಭಿಮಾನಿಗಳು

ಇನ್ನು ಕಾರವಾರ ನಗರದ ಟನಲ್ ಬಳಿ ಸಹ ನೀರು ನಿಂತು ಸವಾರರಿಗೆ ಸಂಚಾರಕ್ಕೆ ಸಮಸ್ಯೆ ತಂದೊಡ್ಡಿದೆ. ಇದೇ ವೇಳೆ ಜಿಲ್ಲೆಯಾಧ್ಯಾಂತ ಆರೆಂಜ್ ಅಲರ್ಟ ಇದ್ದು ಜೂನ್ 29 ರ ವರಗೂ ಹೆಚ್ಚಿನ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

RELATED ARTICLES

Related Articles

TRENDING ARTICLES