Saturday, September 28, 2024

3 ಡಿಸಿಎಂ ಹುದ್ದೆ: ಹೈಕಮಾಂಡ್ ನಿರ್ಣಯಕ್ಕೆ ನಾವು ಬದ್ಧ- ಕೆ.ಎನ್.ರಾಜಣ್ಣ

ಬಾಗಲಕೋಟೆ: ಮತ್ತೆ ಮೂವರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಸಂಬಂಧ ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಯಾವಾಗ್ಲೂ ಅಧಿಕಾರ ಹಂಚಿಕೊಂಡಾಗ, ಎಲ್ಲಾ ಸಮುದಾಯಗಳಿಗೂ ಆ ಪಕ್ಷದ ಮೇಲೆ ಪ್ರೀತಿ ವಿಶ್ವಾಸ ಬರುತ್ತೆ. ಲಿಂಗಾಯತ, ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತ ಸಮುದಾಯಗಳಿಗೆ ಒಬ್ಬ ಡಿಸಿಎಂ ಮಾಡಬೇಕು.

ಈ ಹಿಂದೆ ಬಿಜೆಪಿಯವರು ಮಾಡಿರುವ ಉದಾಹರಣೆ ಇದೆ. ಡಿಸಿಎಂ ಮಾಡಿದ ತಕ್ಷಣ ಅವ್ರಿಗೇನು ಹೊಸ ಬೇರೆ ಸೌಲಭ್ಯಗಳಿಲ್ಲ. ಕ್ಯಾಬಿನೆಟ್ ಮಂತ್ರಿಗೆ ಇರುವಷ್ಟೇ ಸೌಲಭ್ಯ ಇರುತ್ತೆ. ಆ ಸಮುದಾಯದ ಜನರಲ್ಲಿ ನಮ್ಮ ಸಮುದಾಯಕ್ಕೂ ಒಂದು ಪ್ರಾತಿನಿಧ್ಯ ದೊರೆತಿದೆ, ಆ ದೃಷ್ಠಿಯಲ್ಲಿ ನಮಗೂ ಕೂಡ ಹೆಮ್ಮೆ ಅನ್ನುವ ಭಾವ ಬರುತ್ತೆ. ಅಂತಿಮವಾಗಿ ಹೈಕಮಾಂಡ್ ಮಾಡುವ ನಿರ್ಣಯಕ್ಕೆ ನಾವು ಬದ್ಧ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಇದನ್ನೂ ಓದಿ: Power TV Impact: ಸಲಿಂಗ ಪ್ರಕರಣ​​​; ಡಾ.ಸೂರಜ್‌ ರೇವಣ್ಣ ಅರೆಸ್ಟ್​​​​​

ನನ್ನ ಅಭಿಪ್ರಾಯ ಏನೂ ಕೇಳಿ ಡಿಸಿಎಂ ‌ಮಾಡಲ್ಲ- ಪರಂ:

ಹೆಚ್ಚುವರಿ ಡಿಸಿಎಂ ಮಾಡಬೇಕು ಅಂತ ಸಚಿವ ಕೆ.ಎನ್.ರಾಜಣ್ಣ, ಸಚಿವ ಜಮೀರ್ ಅಹಮದ್ ಖಾನ್ ಹೇಳಿಕೆ ವಿಚಾರಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೆಚ್ಚುವರಿ ಡಿಸಿಎಂ ಮಾಡಿದ್ರೆ ತಪ್ಪಿಲ್ಲ ಅಂತ ಅವರ ಅಭಿಪ್ರಾಯ ಹೇಳಿದ್ದಾರೆ. ನನ್ನ ಅಭಿಪ್ರಾಯ ಏನೂ ಕೇಳಿ ಡಿಸಿಎಂ ‌ಮಾಡಲ್ಲ. ತಮ್ಮ ಅಭಿಪ್ರಾಯಕ್ಕೆ ಮನ್ನಣೆ ಸಿಗಲ್ಲ ಅಂತಾ ಪರೋಕ್ಷವಾಗಿ ಪರಮೇಶ್ವರ್ ಅಸಮಧಾನ ಹೊರಹಾಕಿದರು.

RELATED ARTICLES

Related Articles

TRENDING ARTICLES