Saturday, September 28, 2024

ಕೊಲೆ ಆರೋಪದ ಜೊತೆ ದರ್ಶನ್‌ಗೆ IT ಸಂಕಷ್ಟ

ಬೆಂಗಳೂರು: ಈಗಾಗಲೇ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್​ ಗೆ ಇದೀಗ ಐಟಿ ಸಂಕಷ್ಟ ಎದುರಾಗಿದೆ ಎನ್ನಲಾಗುತ್ತಿದೆ.

ನಟ ದರ್ಶನ್​ ತಮ್ಮ ಮನೆಯಲ್ಲಿರಿಸಿದ್ದ 37ಲಕ್ಷ ಹಣ, ಮತ್ತು ಆರೋಪಿಗಳಿಗೆ ನೀಡಿದ್ದ 30 ಲಕ್ಷ ಹಣದ ಮೂಲ ಪತ್ತೆಗೆ ಅಧಿಕಾರಿಗಳು ಇದೀಗ ಮುಂದಾಗಿದ್ದಾರೆ. ಆದಾಯ ತೆರಿಗೆ ಇಲಾಖೆ ನಟ ದರ್ಶನ್ ಬೆನ್ನು ಹತ್ತೋ ಸಾಧ್ಯತೆಯಿದೆ.

ಕೊಲೆ ಆರೋಪಿ ನಟ ದರ್ಶನ್ ಮನೆಯಲ್ಲಿ 37 ಲಕ್ಷ ನಗದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಕೊಲೆ ನಂತರ ಸರಂಡರ್ ಆಗಲು 30ಲಕ್ಷ ನಗದು ನೀಡಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿ ಎರಡು ಲಕ್ಷದವರೆಗೂ ನಗದನ್ನ ಇಟ್ಟು ಕೊಳ್ಳಬಹುದು. ಆದರೇ, ದರ್ಶನ್ ಸುಮಾರು 37 ಲಕ್ಷ ಹಣ ಇಟ್ಟುಕೊಂಡಿರೋದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಆದಾಯ ತೆರಿಗೆ ಅಧಿಕಾರಿಗಳಿಗೆ ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರು ಪತ್ರ ಬರೆಯಲಿದ್ದಾರೆ.

ಇದನ್ನೂ ಓದಿ: ನಟ ದರ್ಶನ್​​ ನಂಬಿ ಸಿನಿಮಾಗೆ ಹಣ ಹಾಕಿದ್ದ ನಿರ್ಮಾಪಕರಿಗೆ 30 ಕೋಟಿ ಸಂಕಷ್ಟ!

ದರ್ಶನ್ ಸಿನಿಮಾ ಅಡ್ವಾನ್ಸ್, ಅಥವಾ ಸಿನಿಮಾ ಹಣ ಅಂತ ಹೇಳಿದ್ದರು ಇಷ್ಟು ಕ್ಯಾಶ್ ಯಾಕೆ ಇಟ್ಟುಕೊಂಡಿದ್ದರು. ಆ ಹಣಕ್ಕೆ ಟ್ಯಾಕ್ಸ್ ಕಟ್ಟಿದ್ದಾರಾ ಅಂತ ಐಟಿ ಅಧಿಕಾರಿಗಳು ಪರಿಶಿಲನೆ ಮಾಡಲಿದ್ದಾರೆ.
ಒಂದು ವೇಳೆ ಟ್ಯಾಕ್ಸ್ ಕಟ್ಟಿಲ್ಲ ಎಂದು ತಿಳಿದು ಬಂದರೆ ದರ್ಶನ್ ಜೊತೆಗೆ ದರ್ಶನ್ ಹಣ ನೀಡಿದವರಿಗೂ ಸಂಕಷ್ಟ ಎದುರಾಗಲಿದೆ.

ಮೋಹನ್ ರಾಜ್ ಎಂಬ ವ್ಯಕ್ತಿ ದರ್ಶನ್​​ಗೆ ಹಣ ನೀಡಿರೋ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸದ್ಯ ಈ ಮೋಹನ್ ರಾಜ್ ಗೂ ನೋಟೀಸ್ ನೀಡಿ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES