Saturday, September 28, 2024

ಸಿ.ಪಿ.ಯೋಗೇಶ್ವರ್‌ ತಲೆ ಕೆಟ್ಟಂತೆ ಮಾತಾಡ್ತಾರೆ: ಶಾಸಕ ಬಾಲಕೃಷ್ಣ

ಬೆಂಗಳೂರು: ಚನ್ನಪಟ್ಟಣದಿಂದ ಡಿಕೆ ಶಿವಕುಮಾರ್ ರಾಜಕೀಯ ಅಧ್ಯಾಯ ಮುಕ್ತಾಯ ಎಂಬ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಹೇಳಿಕೆಗೆ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.

ಯೋಗೇಶ್ವರ್ ಮಾತಿಗೆ ಅಷ್ಟೊಂದು ಬೆಲೆ ಕೊಡೋದು ಸೂಕ್ತ ಅಲ್ಲ, ಅವರು ತಲೆಕೆಟ್ಟ ರೀತಿಯಲ್ಲಿ ಮಾತನಾಡುತ್ತಾರೆ. ಚುನಾವಣೆ ಬಗ್ಗೆ ಭಯ ಇದ್ರೆ ಚುನಾವಣಾ ಆಯೋಗಕ್ಕೆ ದೂರು ನೀಡಲಿ, ಸುಮ್ಮನೆ ಅನುಕಂಪ ಗಿಟ್ಟಿಸಿಕೊಳ್ಳಲು ಮಾತನಾಡ್ತಿದ್ದಾರೆ ಇದೆಲ್ಲಾ ಅವರ ರಾಜಕೀಯ ಗಿಮಿಕ್ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಗೌಡ ಸಹೋದರನ ದರ್ಪ!

ಇನ್ನು, ರಾಜಕೀಯ ಅಧ್ಯಾಯ ಮುಗಿಯೋದು ನಮ್ಮದಾ ಅಥವಾ ಅವರದ್ದಾ ಎಂಬುದನ್ನ ಚುನಾವಣೆಯಲ್ಲಿ ನೋಡೋಣ, ಅವರು ಕೆಲಸ ಮಾಡಿ ಜನರ ಬಳಿ ಓಟ್ ಕೇಳಲ್ಲ. ಚನ್ನಪಟ್ಟಣ ಬೈಎಲೆಕ್ಷನ್ ಅಭ್ಯರ್ಥಿ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿದ್ದಾರೆ.

‘ಟಿಕೆಟ್ ಬದಲಾವಣೆ ‌ಮಾಡುವುದು ಸರಿಯಲ್ಲ’

ಚನ್ನಪಟ್ಟಣದಲ್ಲಿ ಡಿಸಿಎಂ ಡಿ‌.ಕೆ.ಶಿವಕುಮಾರ್ ಸ್ಫರ್ಧೆ ವಿಚಾರಕ್ಕೆ ಸಂಬಂಧಪಟ್ಟಂತೆ, ಸತೀಶ್​​ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ, ಚುನಾವಣೆಗೆ ಇನ್ನೂ ಆರು ತಿಂಗಳು ಇದೆ, ಅಭ್ಯರ್ಥಿ ಇಲ್ಲ ಅಂತ ಹೇಳಲು ಆಗಲ್ಲ, ಯಾರಾದರೂ ಅಭ್ಯರ್ಥಿಯಾಗ್ತಾರೆ ಎಂದಿದ್ದಾರೆ.

ಶಿಗ್ಗಾಂವಿಯಲ್ಲಿ ಬೇರೆ ಸಮುದಾಯಗಳು ಟಿಕೆಟ್ ಕೇಳುವುದು ತಪ್ಪಲ್ಲ, ಮುಂಚೆಯಿಂದ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡ್ತಾ ಇದ್ದೇವೆ, ಬೇರೆ ಕಡೆ ಅವಕಾಶ ಇಲ್ಲ ಅಂತ ಅಲ್ಲಿ ಕೊಡ್ತಾ ಇದ್ದೇವೆ.. ಎಂಪಿ ಚುನಾವಣೆಯಲ್ಲಿ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ಸಿಗೆ ಲೀಡ್ ಆಗಿದೆ.. ಹೀಗಾಗಿ ಎಲ್ಲರೂ ಟಿಕೆಟ್ ಕೆಳ್ತಾನೆ ಇರ್ತಾರೆ.. ಅಲ್ಪಸಂಖ್ಯಾತ ಸಮುದಾಯ ‌ಮುಂಚೆಯಿಂದ ಕಾಂಗ್ರೆಸ್ ಜೊತೆಗೆ ಇದೆ..ಆದರಿಂದ ಟಿಕೆಟ್ ಬದಲಾವಣೆ ‌ಮಾಡುವುದು ಸರಿಯಲ್ಲ ಎಂದಿದ್ದಾರೆ.

RELATED ARTICLES

Related Articles

TRENDING ARTICLES