Tuesday, June 18, 2024

ಹತ್ಯೆ ಬಳಿಕ ಕಿಡ್ನಾಪ್​ ಮಾಡಿದವರಿಗೆ ದರ್ಶನ್​ ಹೇಳಿದ್ದೇನು?: ಆಡಿಯೋ ವೈರಲ್​

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಬಳಿಕ ನಟ ದರ್ಶನ್​​ ಕಿಡ್ನಾಪ್​ ಮಾಡಿದವರ ಜೊತೆಗೆ ಡೀಲ್​ ಮಾತನಾಡಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಇದಕ್ಕೆ ಪೂರಕವಾದ ಆಡಿಯೋ ಒಂದು ಪವರ್​ ಟಿವಿಗೆ ಲಭ್ಯವಾಗಿದೆ.

ನಟ ದರ್ಶನ್ ಮತ್ತು ಗ್ಯಾಂಗ್​ನಿಂದ ಹತ್ಯೆಯಾದ ರೇಣುಕಾ ಸ್ವಾಮಿಯನ್ನ ಚಿತ್ರದುರ್ಗದಿಂದ ಕರೆದುಕೊಂಡು ಹೋಗಿದ್ದು 5 ಆರೋಪಿಗಳು ಅಂತಾ ಗೊತ್ತಾಗಿದೆ. ರವಿ, ಜಗದೀಶ್​, ರಾಘವೇಂದ್ರ, ಅನು ಮತ್ತು ರಾಜ ಎಂದು ಹೇಳಲಾಗಿದೆ.

ಈ ಕುರಿತ ಆಡಿಯೋ ಪವರ್​ ಟಿವಿಗೆ ಲಭ್ಯವಾಗಿದ್ದು, ಈ ಸಂಭಾಷಣೆಯಲ್ಲಿ ಶನಿವಾರ ಮಧ್ಯಾಹ್ನ ರೇಣುಕಾ ಸ್ವಾಮಿ ಜೊತೆ ಈ ಆರೋಪಿಗಳು ಬೆಂಗಳೂರು ತಲುಪಿದ್ರು. ಇವರು ನೇರವಾಗಿ ಶೆಡ್​​ಗೆ ಬರುವ ವೇಳೆಗೆ ಅಲ್ಲಿ ದರ್ಶನ್​ ಗ್ಯಾಂಗ್​ ಮೊಕ್ಕಾಂ ಹೂಡಿತ್ತು. ಬಳಿಕ ಗ್ಯಾಂಗ್ ಸೇರಿಕೊಂಡಿದ್ರಂತೆ ನಟ ದರ್ಶನ್. ಆತ ಬರೋವರೆಗೂ ರೇಣುಕಾ ಸ್ವಾಮಿ ಜೊತೆ ಕಿಡ್ನ್ಯಾಪ್ ಟೀಮ್​ ಶೆಡ್​ ಹೊರಗಡೆಯಲ್ಲೇ ನಿಂತಿತ್ತಂತೆ. ದರ್ಶನ್ ಶೆಡ್ ಬಂದ ಕೂಡಲೇ ರೇಣುಕಾ ಸ್ವಾಮಿಯನ್ನು ರಾಘವೇಂದ್ರ ಒಳಗೆ ಕರೆದುಕೊಂಡು ಹೋಗಿದ್ದ.

ಇದನ್ನೂ ಓದಿ: ದರ್ಶನ್ ಗ್ಯಾಂಗ್​ನ ಕರಾಳ ಮುಖ ಬಿಚ್ಚಿಟ್ಟ ನಿರ್ಮಾಪಕ ಭರತ್!

ಶೆಡ್ ನಲ್ಲಿ ರೇಣುಕಾ ಸ್ವಾಮಿ ಹತ್ಯೆಯಾದ ಬಳಿಕ ರವಿ, ಜಗ್ಗ, ರಾಜು, ಅನು ಅವರನ್ನ ರಾಘವೇಂದ್ರ ಒಳಗೆ ಕರೆದಿದ್ನಂತೆ. ಹತ್ಯೆ ಮಾಡಿದ ಬಳಿಕ ಪೊಲೀಸರಿಗೆ ಅಪ್ರೂವಲ್ ಆಗುವಂತೆ ಕಿಡ್ನಾಪ್​ ಮಾಡಿದ್ದವರನ್ನ ಕೇಳಿದ್ರಂತೆ ದರ್ಶನ್. ಸರೆಂಡರ್ ಆದ್ರೆ ಹಣ ಕೊಡ್ತೀನಿ, ಜಾಮೀನಿನ ಮೇಲೆ ಹೊರಗೆ ಕರೆ ತರ್ತಿನಿ ಎಂದು ರವಿ, ಅನು, ಜಗ್ಗಿ, ರಾಜುಗೆ ಆಫರ್ ಕೊಟ್ಟಿದ್ದರಂತೆ ದರ್ಶನ್.

ಈ ಆಫರ್​ ಗೆ ಒಪ್ಪದೇ ಇವರು ತಮ್ಮ ಕಾರ್ ಬಾಡಿಗೆ ಹಣ ಪಡೆದು ವಾಪಸ್​ ಮರಳಿದ್ರಂತೆ. ಆದರೆ, ಕೊಲೆ ಕೇಸ್​ ಮಾಧ್ಯಮಗಳಲ್ಲಿ ಬರ್ತಿದ್ದ ಹಾಗೇ ಎಸ್ಕೇಪ್​ ಆಗಿದ್ದವರು ಬಳಿಕ ಬಂದು ಸರೆಂಡರ್​ ಆಗಿದ್ದಾರೆ. ಇಡೀ ಘಟನೆಯ ಬಗ್ಗೆ ಅನು ತನಗೆ ಪರಿಚಿತ ತಬಾರಕ್​ ಎಂಬವರ ಜೊತೆ ಮಾತನಾಡಿದ್ದ. ಆ ಬಗ್ಗೆ ತಬಾರಕ್​ ಆಡಿಯೋ ಒಂದು ವೈರಲ್​ ಆಗ್ತಿದೆ.

RELATED ARTICLES

Related Articles

TRENDING ARTICLES