Tuesday, June 18, 2024

ದರ್ಶನ್ ಗ್ಯಾಂಗ್​ನ ಕರಾಳ ಮುಖ ಬಿಚ್ಚಿಟ್ಟ ನಿರ್ಮಾಪಕ ಭರತ್!

ಬೆಂಗಳೂರು: ಜೈಲಿನಲ್ಲಿರುವ ದರ್ಶನ್​ ಅಂಡ್​ ಗ್ಯಾಂಗ್​ ಮತ್ತೊಂದು ಕರಾಳ ಮುಖವನ್ನು ​​ನಿರ್ಮಾಪಕ ಭರತ್ ಬಿಚ್ಚಿಟ್ಟಿದ್ದಾರೆ. ಕನ್ನಡ ಚಿತ್ರರಂಗದ ನಿರ್ಮಾಪಕ ಭರತ್ ತಮಗೆ ದರ್ಶನ್ ಹಾಗೂ ಅವರ ಗ್ಯಾಂಗ್ ನೀಡಿದ ಕಿರುಕುಳದ ಬಗ್ಗೆ ಇದೀಗ ಮಾತಾಡಿದ್ದಾರೆ.

ಭರತ್ ‘ಭಗವಾನ್ ಶ್ರೀ ಕೃಷ್ಣ ಪರಮಾತ್ಮ’ ಚಿತ್ರದ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾದಲ್ಲಿ ನಟಿಸುತ್ತಿದ್ದ ನಾಯಕ ದರ್ಶನ್​​ಗೆ ಆಪ್ತ ಗೆಳೆಯರಾಗಿದ್ದರು. ಆದರೇ, ಕಾರಣಾಂತರಗಳಿಂದ ಚಿತ್ರವನ್ನು ನಿಲ್ಲಿಸಬೇಕಾಯ್ತು. ನಾಯಕ ನಟ ತನ್ನ ಸ್ನೇಹಿತ ಎನ್ನುವ ಕಾರಣಕ್ಕೆ ಸಿನಿಮಾ ಕಂಪ್ಲೀಟ್ ಮಾಡುವಂತೆ ದರ್ಶನ್ ನನಗೆ ಜೀವ ಬೆದರಿಕೆ ಹಾಕಿದ್ದರು ಎಂದು ನಿರ್ಮಾಪಕ ಭರತ್ ಹೇಳಿದ್ದಾರೆ.

ಇದನ್ನೂ ಓದಿ:ಚನ್ನಪಟ್ಟಣ ಉಪಚುನಾವಣೆ: ಕಾಂಗ್ರೆಸ್​ ಅಭ್ಯರ್ಥಿ ಜೈಲುಪಾಲಾಗಿದ್ದಾನೆ: ಸಿಪಿ ಯೋಗೇಶ್ವರ್​

ಫೋನ್ ಮಾಡಿ ವಾರ್ನಿಂಗ್ ಕೊಡ್ತಿದ್ದ ದರ್ಶನ್ ವಿರುದ್ಧ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಭರತ್ ಹೇಳಿದ್ದರು. ಕೆಂಗೇರಿ ಪೊಲೀಸರು NCR ಮಾಡಿ ಕೇಸ್ ಮುಗಿಸಿದ್ರು. ಅಷ್ಟೇ ಅಲ್ಲದೇ ಕೇಸ್ ವಿಚಾರದಲ್ಲಿ ನನ್ನ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ನಾನು ಕೇಸ್ ಹಾಕಿದ್ದಾಗ ಸಾಕಷ್ಟು ಅಧಿಕಾರ ಬಳಸಿ ಕೇಸ್ ಮುಚ್ಚಿಸಿದ್ರು. ಅದಾದ ನಂತ್ರ ಎರಡು ಬಾರಿ ನನ್ನ ಮೇಲೆ ಅಟ್ಯಾಕ್ ಆಯ್ತು.

ನನಗೆ ಬೇರೆ ಯಾರು ಶತ್ರುಗಳಿಲ್ಲ ದಾಳಿ ಮಾಡಿದ್ರೆ ಅದು ದರ್ಶನ್ ಅವರ ಗ್ಯಾಂಗ್ ಮಾತ್ರ. ಇವರ ದಬ್ಬಾಳಿಕೆ, ಅರ್ಭಟದ ನಡುವೆ ಯಾರು ಬದುಕಲು ಆಗಲ್ಲ. ಇವತ್ತು ಆಗಿರುವ ಆ ಘಟನೆಗೆ ದರ್ಶನ್ ಸುತ್ತ ಇರುವ ವ್ಯಕ್ತಿಗಳೇ ಕಾರಣ ಎಂದು ನಿರ್ಮಾಪಕ ಭರತ್ ಹೇಳಿದರು.

RELATED ARTICLES

Related Articles

TRENDING ARTICLES