Tuesday, June 18, 2024

ರೇಣುಕಾಸ್ವಾಮಿ ನಿವಾಸಕ್ಕೆ ಫಿಲ್ಮಂ ಚೇಂಬರ್​ ಪದಾಧಿಕಾರಿಗಳು ಭೇಟಿ: 5 ಲಕ್ಷ ಪರಿಹಾರ ನೀಡಿ ಸಾಂತ್ವನ

ಚಿತ್ರದುರ್ಗ: ದರ್ಶನ್‌ ಆ್ಯಂಡ್‌ ಗ್ಯಾಂಗ್‌ನಿಂದ ಹತ್ಯೆಗೀಡಾದ ರೇಣುಕಾಸ್ವಾಮಿ ನಿವಾಸಕ್ಕೆ ಫಿಲಂ ಚೇಂಬರ್‌ನ ಪದಾಧಿಕಾರಿಗಳು ಭೇಟಿ ಕೊಟ್ಟು ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಚಿತ್ರದುರ್ಗ VRS ಬಡಾವಣೆಯಲ್ಲಿರೋ ರೇಣುಕಾಸ್ವಾಮಿ ನಿವಾಸಕ್ಕೆ ಫಿಲ್ಮ್​ ಚೇಂಬರ್​ ಅಧ್ಯಕ್ಷ N.M. ಸುರೇಶ್​, ಸಾ.ರಾ. ಗೋವಿಂದು ಸೇರಿ ಪದಾಧಿಕಾರಿಗಳು ಭೇಟಿ ನೀಡಿದರು. ಈ ವೇಳೆ ಫಿಲಂ ಚೇಂಬರ್‌ ಪದಾಧಿಕಾರಿಗಳ ಮುಂದೆ ತಂದೆ, ತಾಯಿ, ಪತ್ನಿ ಕಣ್ಣೀರಿಟ್ಟರು.. ಜೊತೆಗೆ ರೇಣುಕಾಸ್ವಾಮಿ ಪತ್ನಿಗೆ ₹2.50 ಲಕ್ಷ, ತಂದೆಗೆ ₹2.50 ಲಕ್ಷದ ಚೆಕ್​ ವಿತರಿಸಿದರು.. ಇನ್ನು ಕುಟುಂಬಸ್ಥರ ಪರ ಚಿತ್ರರಂಗ ಇದೆ ಎಂದು ರೇಣುಕಾಸ್ವಾಮಿ ತಂದೆಗೆ ಅಭಯ ನೀಡಿದರು.

‘ರೇಣುಕಾಸ್ವಾಮಿ ಕುಟುಂಬದ ಜೊತೆ ಚಿತ್ರರಂಗ ಇದೆ’:

ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ‌ ಎಂ.ಎನ್‌.ಸುರೇಶ್, ತಂದೆ ತಾಯಿಯನ್ನ ನೋಡಿ ಬಹಳ ಬೇಜಾರು ಆಯ್ತು, ಮಾನವೀಯತೆಯ ಮೌಲ್ಯದಿಂದ ಬಂದಿದ್ದೇವೆ. ಚಿತ್ರರಂಗದ ಪರವಾಗಿ ಕ್ಷಮೆ ಸಹ ಕೇಳಿದ್ದೇವೆ. ಖಂಡಿತವಾಗಲೂ ನಿರಂತರವಾಗಿ ಅವರ ಕಷ್ಟಕ್ಕೆ ಸ್ಪಂದಿಸುತ್ತೇವೆ.ಇನ್ನು ಅಭಿಮಾನಿಗಳು ಸಂಯಮದಿಂದ ವರ್ತನೆ ಮಾಡಬೇಕು ಎಂದರು.

‘ಕಾನೂನಿಗಿಂತ ಯಾರೂ ದೊಡ್ಡವರಲ್ಲ’:

ಇನ್ನು ರೇಣುಕಾಸ್ವಾಮಿ ಕುಟುಂಬವನ್ನ ಭೇಟಿಯಾದ ಬಳಿಕ ಮಾತನಾಡಿದ ಸಾ.ರಾ.ಗೋವಿಂದ್‌, ಕೊಲೆಗೆ ಕಾರಣವಾದವರಿಗೆ ತಕ್ಕ ಶಿಕ್ಷೆ ಆಗಬೇಕೆಂದ ಕುಟುಂಬದವರು ತಿಳಿಸಿದ್ದಾರೆ. ನಾವು ಕಾನೂನಿನಗಿಂದ ದೊಡ್ಡ ವರಲ್ಲ ಇಡೀ ಚಿತ್ರರಂಗದವರ ಪರವಾಗಿ ಕ್ಷಮೆ ಕೇಳಲು ಬಂದಿದ್ದೇವೆ. ನೀವು ಧೈರ್ಯವಾಗಿ ಇರಿ ನಾವೆಲ್ಲ ನಿಮ್ಮ ಜೊತೆ ಇರುತ್ತೇವೆ ಎಂದರು.

ಇದನ್ನೂ ಓದಿ: ಮಲ್ಲಿಕಾರ್ಜುನ್ ಮಿಸ್ಸಿಂಗ್ ಕೇಸ್ ಸುತ್ತ ಅನುಮಾನಗಳ ಹುತ್ತ: ರೇಣುಕಾಸ್ವಾಮಿಯಂತೆ ಕೊಲೆಯಾದ್ನಾ ದರ್ಶನ್ ಆಪ್ತ..?

‘ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ’:

ಫಿಲ್ಮ್‌ ಚೇಂಬರ್‌ ಪದಾಧಿಕಾರಿಗಳು ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ನೀಡಿದ ವೇಳೆ ರೇಣುಕಾಸ್ವಾಮಿ ತಂದೆ ಪದಾಧಿಕಾರಿಗಳ ಮುಂದೆ ಕಣ್ಣೀರಿಟ್ರು..‘ನನ್ನ ಮಗನಿಗೆ ದೊಡ್ಡ ಮಟ್ಟದ ಚಿತ್ರಹಿಂಸೆ ನೀಡಿ ಸಾಯಿಸಿದ್ದಾರೆ’‘ಯಾವ ಟೆರರಿಸ್ಟ್​​ಗೂ ಹೀಗೆ ಸಾಯಿಸಲ್ಲ ಹಾಗೇ ಕೊಲೆ ಮಾಡಿದ್ದಾರೆ’ ‘ಸಿಕ್ಕ ಸಿಕ್ಕ ಕಡೆ ಹಿಗ್ಗಾಮುಗ್ಗಾ ಹೊಡೆದು ಸಾಯಿಸಿದ್ದಾರೆ, ‘ಮಗ ತಪ್ಪು ಮಾಡಿದ್ರೆ ಪೊಲೀಸ್ ಠಾಣೆಗೆ ದೂರು ನೀಡಬಹುದಿತ್ತು’ ಇಂಥ ಅಮಾನುಷ ಯಾಕೆಂದು ರೇಣುಕಾಸ್ವಾಮಿ ತಂದೆ ಅಳಲು ತೋಡಿಕೊಂಡ್ರು.

‘ದರ್ಶನ್‌ ಬ್ಯಾನ್‌ ಬಗ್ಗೆ ಮುಂದೆ ತೀರ್ಮಾನ ಕೈಗೊಳ್ಳುತ್ತೇವೆ’:

ಇನ್ನು ಫಿಲ್ಮ್‌ ಚೇಂಬರ್‌ ಪದಾಧಿಕಾರಿಗಳು ಭೇಟಿ ಬಳಿಕ ರೇಣುಕಾಸ್ವಾಮಿ ಸ್ವಾಮಿ ನಿವಾಸಕ್ಕೆ ಆಗಮಿಸಿ ಕುಟುಂಬಸ್ಥರಿಗೆ ಹಿರಿಯ ನಟ ಜಯಸಿಂಹ ಮುಸುರಿ ಸಾಂತ್ವನ ಹೇಳಿದ್ರು.. ಇದೇ ವೇಳೆ ದರ್ಶನ್‌ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬ್ಯಾನ್ ಎನ್ನೋ ಪದ ಎಲ್ಲೂ ಇಲ್ಲ.ಈ ಬಗ್ಗೆ ಕುಳಿತು ಚರ್ಚೆ ಮಾಡ್ತಿವಿ‌. ರ್ಮಾಪಕರು ಈಗಾಗಲೇ ಹಣ ಹಾಕಿದ್ದಾರೆ.ಚಿತ್ರಗಳು ಅರ್ಧಬರ್ದ ನಿಂತಿವೆ. ಕೊಲೆ ಪ್ರಕರಣ ಮುಗಿದ ಕೂಡಲೇ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

‘ಕಾನೂನಿನ ಮುಂದೆ ಎಲ್ಲರೂ ಸಮಾನರು’

ರೇಣುಕಾಸ್ವಾಮಿ ಕುಟುಂಬದ ಜೊತೆಗೆ ನಾವಿದ್ದೇವೆ ಎಂದು ಶಾಸಕ ವೀರೇಂದ್ರ ಪಪ್ಪಿ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಸಾಂತ್ವನ ನೀಡೋದಕ್ಕೆ ಅವರ ಮನೆಗೆ ಭೇಟಿ ನೀಡಿದ್ದೀವಿ. ತನಿಖೆ ಆಗ್ತಾ ಇರೋ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಅವರಿಗೆ ಸಮಾಧಾನ ಕೂಡಾ ಇದೆ. ಸರ್ಕಾರ ಮೇಲೆ ಕುಟುಂಬಸ್ಥರಿಗೆ ಪೂರ್ಣ ನಂಬಿಕೆ ಇದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು. ನಮ್ಮ ನೆಲದ ಕಾನೂನು ಎಂತೆತವರನ್ನ ಶಿಕ್ಷೆಗೆ ಒಳಪಡಿಸಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಮಾನವನಾಗಿ ಇನ್ನೊಬ್ಬರನ್ನ ಕೊಲೆ ಮಾಡುವ ಮಟ್ಟಕ್ಕೆ ಹೋಗಬಾರದು. ಹೀರೋ, ರಾಜಕಾರಣಿಗಳು, ಯಾರೇ ಆಗಿದ್ರು ಆಗೇ ಮಾಡಬಾರದು. ಇದೊಂದು ವೇಳೆ ವಿಷಾಧನೀಯ ಘಟನೆ. ನನ್ನ ಕೈಲಾದ ಸಹಾಯ ಮಾಡಿದ್ದೀನಿ.
ಶಾಮಿಯಾನದ ಬಗ್ಗೆ ಅಧಿಕಾರಿಗಳ ನಿರ್ಧಾರ ನನಗೆ ಗೊತ್ತಿಲ್ಲ. ನಮ್ಮ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡ್ತಾ ಇದ್ದಾರೆ. ಕುಟುಂಬದವರಿಗೆ ತನಿಖೆ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದರು.

RELATED ARTICLES

Related Articles

TRENDING ARTICLES