Tuesday, June 18, 2024

ಆರೋಪಿ ಮಗನ ಅರೆಸ್ಟ್‌ ಸುದ್ದಿ ಕೇಳಿ ತಂದೆ ಸಾವು: ನಟ ದರ್ಶನ್​​ಗೆ ಮರಣದಂಡನೆ ವಿಧಿಸುವಂತೆ ಒತ್ತಾಯ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಿತ್ರದುರ್ಗದ ಆರೋಪಿ ಅನು ಅಲಿಯಾಸ್ ಅನುಕುಮಾರ್ ಪೊಲೀಸರಿಗೆ ಶರಣಾಗಿದ್ದ. ಅನುಕುಮಾರ್ ಬಂಧನದ ವಿಚಾರ ತಿಳಿಯುತ್ತಿದ್ದಂತೆ ಅವರ ತಂದೆ ಚಂದ್ರಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಿಹಿನೀರ ಹೊಂಡ ಏರಿಯಾದ ಅನುಕುಮಾರ್​ 7ನೇ ಆರೋಪಿಯಾಗಿದ್ದ. ಮನೆಮಗ ಬಂಧನವಾದ ಸುದ್ದಿ ಕೇಳಿ ಚಂದ್ರಪ್ಪಗೆ ಲೋ ಬಿಪಿ ಆಗಿದೆ. ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಒಂದು ಕಡೆ ಮಗ ಜೈಲು ಪಾಲು ಮತ್ತೊಂದು ಕಡೆ ಮನೆಯ ಹಿರಿಯರ ಸಾವಿನಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್​ನ ಕರಾಳ ಮುಖ ಬಿಚ್ಚಿಟ್ಟ ನಿರ್ಮಾಪಕ ಭರತ್!

ನಟ ದರ್ಶನ್​​ಗೆ ಮರಣದಂಡನೆ ವಿಧಿಸುವಂತೆ ಒತ್ತಾಯ:

ಚಿತ್ರದುರ್ಗ ರೇಣುಕಾಸ್ವಾಮಿ ಬರ್ಬರವಾಗಿ ಹತ್ಯೆಗೆ ಜಿಲ್ಲಾ ವೀರಶೈವ ಸಮಾಜ ಅಸಮಾಧಾನ ಹೊರ ಹಾಕಿದೆ. ಬರ್ಬರವಾಗಿ ಹತ್ಯೆಗೈದ ನಟ ದರ್ಶನ್ ಮತ್ತು ಸಹಚರರ ವರ್ತನೆ ಖಂಡನಾರ್ಹ. ಕೊಲೆಗೈದವರಿಗೆ ಮರಣ ದಂಡನೆಯಂತಹ ಶಿಕ್ಷೆ ನೀಡುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಘಟಕ ಒತ್ತಾಯಿಸಿದ್ದಾರೆ.

ಪಾತಕಿಗಳು ಕೊಲೆಗೈದ ಕ್ರೂರಕೃತ್ಯ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಇಂತಹ ಕ್ರೂರ ಕೃತ್ಯಗಳು ಮರಕಳಿಸದಂತೆ ಆಗಬೇಕು. ನೊಂದ ಕುಟುಂಬಕ್ಕೆ ಪರಮಾತ್ಮ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

‘ದರ್ಶನ್​​ಗೆ ನೋ ಸ್ಪೆಷಲ್​ ಟ್ರೀಟ್ಮೆಂಟ್​’- ಸಿಎಂ ವಾರ್ನಿಂಗ್​:

ನಟ ದರ್ಶನ್ ಪ್ರಕರಣದಲ್ಲಿ‌ ವಿಐಪಿ ಟ್ರೀಟ್​​ಮೆಂಟ್ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಬೆಳಿಗ್ಗೆ ಕಾನೂನು ಸುವ್ಯವಸ್ಥೆ ಬಗ್ಗೆ ಬ್ರೀಫ್ ಮಾಡಲು ಹೋದಾಗ ಉನ್ನತ ಮಟ್ಟದ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದು ಕೊಂಡಿದ್ದಾರೆ.

ಯಾಕೆ ಸ್ಪೆಷಲ್ ಟ್ರಿಟ್ಮೆಂಟ್ ಕೊಡ್ತಿದ್ದಿರಾ? ಆರೋಪಿಗೆ ನೀಡಬೇಕಾದ ಟ್ರಿಟ್ಮೆಂಟ್ ಕೊಡಿ. ಯಾವುದೇ ಸ್ಪೆಷಲ್ ಟ್ರಿಟ್ಮೆಂಟ್ ಬೇಡ, ಮಾಧ್ಯಮಗಳಲ್ಲಿ ಪೊಲೀಸ್ ಠಾಣೆ ಮುಚ್ಚಿದ್ದಾರೆ ಅಂತ ಸುದ್ದಿ ಆಗ್ತಿದೆ. ಟಿವಿ ಪೇಪರ್​ಗಳಲ್ಲಿ ಬರ್ತಿದೆ. What is personal interest ಎಂದು ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಆರೋಪಿಯನ್ನ ಆರೋಪಿಯಾಗಿ ನೋಡಿ. ನೋ ಸ್ಪೆಷಲ್ ಟ್ರಿಟ್ಮೆಂಟ್, ಒನ್ಲಿ ಅಕ್ಯೂಸಡ್ ಟ್ರಿಟ್ಮೆಂಟ್ ಕೊಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES