Tuesday, June 18, 2024

ಮಲ್ಲಿಕಾರ್ಜುನ್ ಮಿಸ್ಸಿಂಗ್ ಕೇಸ್ ಸುತ್ತ ಅನುಮಾನಗಳ ಹುತ್ತ: ರೇಣುಕಾಸ್ವಾಮಿಯಂತೆ ಕೊಲೆಯಾದ್ನಾ ದರ್ಶನ್ ಆಪ್ತ..?

ದರ್ಶನ್ ಆ್ಯಂಡ್ ಗ್ಯಾಂಗ್ ರೇಣುಕಾಸ್ವಾಮಿ ಅನ್ನೋ ಯುವಕನನ್ನ ಅಪಹರಿಸಿ ಕೊಂದ ರೀತಿ. ಮತ್ತವನ ಬಾಡಿಯನ್ನ ಮೋರಿಯಲ್ಲಿ ಬೀಸಾಡಿ ಸಾಕ್ಷನಾಶಕ್ಕೆ ಮುಂದಾಗಿರೋದನ್ನ ನೋಡಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಇವರು ಸಾಮಾನ್ಯರಲ್ಲ ಪಕ್ಕಾ ಕೊಲೆಗಾರರು ಅನ್ನೋ ತೀರ್ಮಾನಕ್ಕೆ ಬಂದುಬಿಟ್ಟಿದ್ದಾರೆ. ಅಂತೆಯೇ ಇವರು ಈ ಹಿಂದೆಯೂ ಇಂಥಾ ಅಪರಾಧಗಳನ್ನ ಮಾಡಿರಬಹುದಾ ಅನ್ನೋ ಅನುಮಾನ ಹುಟ್ಟಿಕೊಂಡಿದೆ.

ಇದೇ ಕೇಸ್​​ನಲ್ಲಿ ಬಂದಿತನಾಗಿರೋ ವಿನಯ್ ಎಂಬಾತ ಫೋಟೋಗ್ರಾಫರ್​ವೊಬ್ಬರ ಮೇಲೆ ಹಲ್ಲೆ ನಡೆಸಿರೋ ವಿಡಿಯೋವನ್ನ ಪವರ್​ ಟಿವಿ ಜನರ ಮುಂದಿಟ್ಟಿದೆ. ಈ ಖತರ್ನಾಕ್ ಗ್ಯಾಂಗ್​ಗೆ  ಕಾನೂನಿನ ಭಯವೇ ಇರಲಿಲ್ಲ ಅನ್ನೋದು ಜಗಜ್ಜಾಹೀರಾಗಿದೆ.

ಖುದ್ದು ದರ್ಶನ್ ಕೂಡ ಅನೇಕರ ಮೇಲೆ ಹಲ್ಲೆ ಮಾಡಿರೋ ಆರೋಪಗಳಿವೆ. ಅದ್ರಲ್ಲೂ ದರ್ಶನ್​​ರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಬಗ್ಗೆ ಅನೇಕ ಅನುಮಾನಗಳು ಹುಟ್ಟಿಕೊಂಡಿವೆ. ಬರೊಬ್ಬರಿ 6 ವರ್ಷಗಳಿಂದ ಕಣ್ಮರೆಯಾಗಿರೋ ಮಲ್ಲಿಕಾರ್ಜುನ್ ನಿಜಕ್ಕೂ ಬದುಕಿದ್ದಾನಾ, ಇಲ್ವಾ ಅನ್ನೋ ಡೌಟ್ ಶುರುವಾಗಿದೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್​ನ ಕರಾಳ ಮುಖ ಬಿಚ್ಚಿಟ್ಟ ನಿರ್ಮಾಪಕ ಭರತ್!

ತೂಗುದೀಪ ಸಂಸ್ಥೆಯ ಹಣ ಲಪಟಾಯಿಸಿದ್ದ ಆರೋಪ, ಮೋಸ ಮಾಡಿದ ಮ್ಯಾನೇಜರ್​ಗೂ ಗತಿ ಕಾಣಿಸಿದ್ನಾ ದಾಸ..?

ಯೆಸ್, ಮಲ್ಲಿಕಾರ್ಜುನ್ ಮೇಲೆ ತೂಗುದೀಪ ಸಂಸ್ಥೆಯ ಹಣ ನುಂಗಿಹಾಕಿದ ಆರೋಪಗಳಿವೆ. ಈತ ದರ್ಶನ್​ರ 10 ಕೋಟಿಗೂ ಅಧಿಕ ಹಣವನ್ನ ಲಪಟಾಯಿಸಿದ್ದ ಅನ್ನೋ ಆರೋಪಗಳಿವೆ. ಜಸ್ಟ್ ತನ್ನ ಗೆಳತಿಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾಸ್ವಾಮಿಗೆ ದರ್ಶನ್ ಕೊಡಬಾರದ ಟಾರ್ಚರ್ ಕೊಟ್ಟಿದ್ದಾನೆ. ಇನ್ನೂ 10 ಕೋಟಿಯಷ್ಟು ದೊಡ್ಡ ಮೊತ್ತ ಲಪಟಾಯಿಸಿದ ಮಲ್ಲಿಕಾರ್ಜುನ್​ನ ಏನು ಮಾಡಿರಬಹುದು ಅಂತ ಗಾಂಧಿನಗರದ ಮಂದಿ ಮಾತನಾಡ್ತಾ ಇದ್ದಾರೆ.

ಅಸಲಿಗೆ ಈ ಮಲ್ಲಿಕಾರ್ಜುನ್ ಗದಗ ಮೂಲದವನು. ಮಲ್ಲಿಕಾರ್ಜುನ್ ಸಂಕನಗೌಡರ್ ಅನ್ನೋದು ಈತನ ಪೂರ್ತಿ ಹೆಸರು. ಈತ ಗಾಂಧಿನಗರಕ್ಕೆ ಬಂದಿದ್ದು ಯಶ್ ನಟನೆಯ ‘ಮೊದಲ ಸಲ’ ಅನ್ನೋ ಚಿತ್ರ ನಿರ್ಮಿಸುವ ಮೂಲಕ. ಯೋಗೀಶ್ ನಾರಾಯಣ್ ಅನ್ನುವವರ ಜೊತೆಗೆ ಈ ಚಿತ್ರವನ್ನ ನಿರ್ಮಿಸಿದ್ದ ಮಲ್ಲಿಕಾರ್ಜುನ್ ಈ ಚಿತ್ರದ ಮುಹೂರ್ತಕ್ಕೆ ದರ್ಶನ್​​ರನ್ನೇ ಗೆಸ್ಟ್ ಆಗಿ ಕರೆಯಿಸಿದ್ದ.

ಈ ಚಿತ್ರ ಆ್ಯವರೇಜ್ ಯಶಸ್ಸು ಕಾಣ್ತು. ದೊಡ್ಡ ಮಟ್ಟದ ಲಾಭ ಏನೂ ಮಲ್ಲಿಗೆ ಸಿಗಲಿಲ್ಲ. ಈ ಸಿನಿಮಾದ ಬಳಿಕ ದರ್ಶನ್​ ಕ್ಯಾಂಪ್ ಸೇರಿಕೊಂಡ ಮಲ್ಲಿ, ತೂಗುದೀಪ ಯುನಿಟ್, ತೂಗುದೀಪ ಪ್ರೊಡಕ್ಷನ್ಸ್​​ನ ಕೆಲಸಗಳನ್ನ ನೋಡಿಕೊಳ್ತಾ ದರ್ಶನ್ ಪಾಲಿಗೆ ಆಪ್ತನಾದ.

ಇದನ್ನೂ ಓದಿ: ದರ್ಶನ್ ಅಂಧ​ ಅಭಿಮಾನಿಗಳಿಗೆ ದೊಣ್ಣೆ ಏಟು : ನಟ ಪ್ರಥಮ್​

ತೂಗುದೀಪ ಸಂಸ್ಥೆ ನಿರ್ಮಿಸಿದ ಬುಲ್ ಬುಲ್ ಸಿನಿಮಾಗೆ ಅಸೋಸೊಯೇಟ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದ ಈ ಮಲ್ಲಿ. ಬಳಿಕ ತೂಗುದೀಪ್ ಡಿಸ್ಟ್ರಿಬ್ಯೂಶನ್ ಶುರುವಾದ ಮೇಲೆ ಅದರ ವ್ಯವಹಾರಗಳನ್ನ ಮಲ್ಲಿಕಾರ್ಜುನ್​ಗೆ ವಹಿಸಿಕೊಟ್ಟಿದ್ರು ದರ್ಶನ್.

ತೂಗುದೀಪ ಡಿಸ್ಟ್ರಿಬ್ಯೂಶನ್​ನಿಂದ ಉಗ್ರಂ ಸೇರಿದಂತೆ ಅನೇಕ ದೊಡ್ಡ ಚಿತ್ರಗಳನ್ನ ರಿಲೀಸ್ ಮಾಡಲಾಗಿತ್ತು. ಈ ಸಂಸ್ಥೆಯ ಕೋಟಿ ಕೋಟಿ ವ್ಯವಹಾರ ನೋಡಿಕೊಳ್ತಾ ಇದ್ದ ಮಲ್ಲಿ ಜೊತೆಗೆ ದರ್ಶನ್​ ಮ್ಯಾನೇಜರ್ ಕೆಲಸವನ್ನೂ ಮಾಡ್ತಾ ಇದ್ದ. ಅಷ್ಟರ ಮಟ್ಟಿಗೆ ಈತನನ್ನ ನಂಬಿದ್ರು ದರ್ಶನ್.

ಪ್ರೇಮಬರಹ ಚಿತ್ರದ ವ್ಯವಹಾರದಲ್ಲಿ ಮೋಸ, ದೂರು: ರಾತ್ರೋರಾತ್ರಿ ನಾಪತ್ತೆಯಾದ ಮಲ್ಲಿ.. ಹೋಗಿದ್ದೆಲ್ಲಿ..?

ಹೌದು 2008ರಲ್ಲಿ ಅರ್ಜುನ್ ಸರ್ಜಾ ತಮ್ಮ ನಿರ್ಮಾಣದ ಪ್ರೇಮಬರಹ ಚಿತ್ರದ ವಿತರಣೆ ಹಕ್ಕುಗಳನ್ನ ಇದೇ ತೂಗುದೀಪ ಸಂಸ್ಥೆಗೆ ಕೊಟ್ಟಿದ್ರು. 1 ಕೋಟಿ ರೂಪಾಯಿ ಥಿಯೇಟರ್​ನಿಂದ ಶೇರ್ ಬಂದಿತ್ತು. ಅದನ್ನ ಕೊಡುವಂತೆ ಸರ್ಜಾ ಮಲ್ಲಿಕಾರ್ಜುನ್​​ಗೆ ಕೇಳ್ತಾ ಇದ್ರು. ಆದ್ರೆ ಈತ ಆ ಹಣವನ್ನ ನುಂಗಿ ಹಾಕಿದ್ದ. ಈ ವಿಚಾರವಾಗಿ ಅರ್ಜುನ್ ಸರ್ಜಾ ಪೊಲೀಸ್ ದೂರು ದಾಖಲಿಸಿದ್ರು. ಈ ವಿಚಾರ ಗೊತ್ತಾಗಿ ದರ್ಶನ್ ಮಲ್ಲಿ ಮೇಲೆ ಗರಂ ಆಗಿದ್ರು. ಅಷ್ಟರಲ್ಲಿ ಮಲ್ಲಿ ರಾತ್ರೋರಾತ್ರಿ ನಾಪತ್ತೆಯಾಗಿಬಿಟ್ಟ.

ಆವತ್ತು ಅರ್ಜುನ್ ಸರ್ಜಾ ಕೊಟ್ಟಿರೋ ದೂರು ಇನ್ನೂ ನ್ಯಾಯಾಲಯದ ಅಂಗಳದಲ್ಲಿದೆ. ಕಳೆದ ಏಪ್ರಿಲ್​​ನಲ್ಲಿ ಮಲ್ಲಿಕಾರ್ಜುನ್ ವಿರುದ್ಧ ಎ.ಸಿ.ಎಂ.ಎಂ ನ್ಯಾಯಾಲಯ ಉದ್ಘೋಷಣೆ ಪತ್ರವನ್ನ ಪತ್ರಿಕೆಯಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿತ್ತು. ಇದಕ್ಕೂ ಸ್ಪಂದಿಸದ ಹಿನ್ನೆಲೆಯಲ್ಲಿ ಅವರ ವಿರುದ್ದ ಅರೆಸ್ಟ್ ವಾರೆಂಟ್ ಹೊರಡಿಸಲಾಗಿದೆ.

ಮಲ್ಲಿಕಾರ್ಜುನ್ ಮಿಸ್ಸಿಂಗ್ ಕೇಸ್ ಸುತ್ತ ಅನುಮಾನಗಳ ಹುತ್ತ ರೇಣುಕಾಸ್ವಾಮಿಯಂತೆ ಕೊಲೆಯಾದ್ನಾ ದರ್ಶನ್ ಆಪ್ತ..?

ಹೌದು, ದರ್ಶನ್ ರೇಣುಕಾ ಸ್ವಾಮಿಯನ್ನ ಬಡಿದು ಕೊಂದ ಮೇಲೆ ಮಲ್ಲಿಕಾರ್ಜುನ್ ಇರುವಿಕೆ ಬಗ್ಗೆಯೂ ಅನುಮಾನ ಹುಟ್ಟಿಕೊಂಡಿದೆ. ಯಾಕಂದ್ರೆ ಕಳೆದ 6 ವರ್ಷಗಳಿಂದಲೂ ಮಲ್ಲಿಕಾರ್ಜುನ್ ಕಾಣೆಯಾಗಿದ್ದಾನೆ. ಆತನ ಫ್ಯಾಮಿಲಿಗೂ ಆತ ಎಲ್ಲಿದ್ದಾನೆ ಅನ್ನೋದು ಗೊತ್ತಿಲ್ಲ. ಈತನ ಹೆಂಡತಿ ಮನೆ ಖಾಲಿಮಾಡಿಕೊಂಡು ಕೊಪ್ಪಳದ ತವರು ಮನೆಯಲ್ಲಿ ಮಗುವಿನ ಜೊತೆ ವಾಸ್ತವ್ಯ ಹೂಡಿದ್ದಾರೆ. ಮಲ್ಲಿಕಾರ್ಜುನ್ ನಾಪತ್ತೆಯಾಗುವ ಮುನ್ನ ಪತ್ನಿಗೆ ಒಂದು ಪತ್ರವನ್ನ ಬರೆದಿದ್ದರಂತೆ. ಆ ಪತ್ರದ ಸಾರಾಂಶ ಇಲ್ಲಿದೆ.

ಮಲ್ಲಿಕಾರ್ಜುನ್ ಪತ್ನಿಗೆ ಬರೆದ ಪತ್ರ :

ಓಂ

ಪ್ರೀತಿಯ ತೇಜಸ್ವಿನಿಗೆ..

ಮೊದಲನೆದಾಗಿ ದಯವಿಟ್ಟು ನನ್ನನ್ನು ಕ್ಷಮಿಸು

ನಾನು ನನ್ನ ವೈಯಕ್ತಿಕ ವ್ಯವಹಾರಕ್ಕಾಗಿ ತುಂಬಾ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇನೆ..

ನನ್ನ ಈ ಕೆಲಸದಿಂದ ನಾನು ಯಾರಿಗೂ ಮುಖ ತೋರಿಸಲಾಗದ ಪರಿಸ್ಥಿತಿಯಲ್ಲಿದ್ದೇನೆ.. ಆದ ಕಾರಣ ನಾನು ಎಲ್ಲೋ ಕಷ್ಟಪಟ್ಟು ದುಡಿದು ವಾಪಸ್ಸು ಬಂದು ಸಾಲ ತೀರಿಸಿ , ನನಗಂಟಿರೋ ಕಳಂಕಾನ ಹೋಗಲಾಡಿಸಿ ಮತ್ತೆ ಧೈರ್ಯವಾಗಿ ತಲೆಯತ್ತಿ ಎಲ್ಲರ ಮುಂದೆ ಜೀವನ ನಡೆಸಬೇಕೆಂದುಕೊಂಡಿದ್ದೇನೆ.. ಅಲ್ಲಿಯವರಿಗೆ ನಿಮ್ಮ ಎದುರಿಗೆ ಬರುವ ಶಕ್ತಿ ನನಗಿಲ್ಲ.. ನನ್ನನ್ನು ಯಾವುದೇ ಕಾರಣಕ್ಕೂ ಹುಡುಕುವ ಪ್ರಯತ್ನ ಮಾಡಬೇಡಿ..

ನನ್ನ ಸಮಸ್ಯೆಯಿಂದ ನಿನ್ನನ್ನು ಮಗನನ್ನು ಹಾಗೂ ಮನೆಯವರನ್ನೂ ಬಿಟ್ಟು ಹೋಗುವ ಪರಿಸ್ಥಿತಿ ಬಂದೊದಗಿದೆ. ದಯವಿಟ್ಟು ನನ್ನನ್ನು ಕ್ಷಮಿಸು..

                                                          

                                                    ಇಂತಿ ನಿನ್ನ ಪ್ರೀತಿಯ

                                                      ಮಲ್ಲಿಕಾರ್ಜುನ್ 

ಹೀಗೆ ಪತ್ರ ಬರೆದು ಓಡಿಹೋದ ಮಲ್ಲಿಕಾರ್ಜುನ್ ಇವತ್ತಿನವರೆಗೂ ಪತ್ತೆಯಿಲ್ಲ. ಅಷ್ಟಕ್ಕೂ ಮಲ್ಲಿಕಾರ್ಜುನ್ ಓಡಿಹೋದ್ರಾ ಅಥವಾ ಅವರನ್ನ ಯಾರಾದ್ರೂ ಕೊಲೆ ಮಾಡಿದ್ರಾ.. ಕೊಲೆ ಮಾಡಿ ಮೋರಿಗೆ ಎಸೆದು ಕೇಸ್ ಮುಚ್ಚಿಹಾಕಿಬಿಟ್ರಾ..? ಗೊತ್ತಿಲ್ಲ. ಆದ್ರೆ ಸದ್ಯ ದರ್ಶನ್ ರೇಣುಕಾಸ್ವಾಮಿಯನ್ನ ಕೊಲೆ ಮಾಡಿದ ಮೇಲೆ ಈ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಮಲ್ಲಿ ಎಲ್ಲಿ ಅಂತ ಹುಡುಕಿಕೊಂಡು ಹೋದ್ರೆ ಮತ್ತೊಂದು ಕೊಲೆ ಕೇಸ್ ಹೊರಗೆ ಬಂದ್ರೂ ಅಚ್ಚರಿಯೇನಿಲ್ಲ.

ಅಮೀತ್, ಫಿಲಂ ಬ್ಯೂರೋ. ಪವರ್ ಟಿವಿ

RELATED ARTICLES

Related Articles

TRENDING ARTICLES