Saturday, September 28, 2024

ರೇಣುಕಾಸ್ವಾಮಿ ಕೊಲೆಯಾದ ಜಾಗದಲ್ಲಿ ನಟ ದರ್ಶನ್​ ಅಂಡ್​ ಗ್ಯಾಂಗ್‌ ಸ್ಥಳ ಮಹಜರು

ಬೆಂಗಳೂರು: ಬೆಂಗಳೂರಿನ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಸತತ 2 ಗಂಟೆಗಳ ಕಾಲ ಪೊಲೀಸರು ಸ್ಥಳ ಮಹಜರು ನಡೆಸಿದರು. ಬಂಧಿತರಾದ ದರ್ಶನ್​, ಪವಿತ್ರಾ ಗೌಡ ಸೇರಿದಂತೆ 13 ಆರೋಪಿಗಳನ್ನ ಕರೆತಂದು ಪೊಲೀಸರು ಹಲವಾರು ಮಹತ್ತರ ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ.

ಈ ವೇಳೆ ಎಲ್ಲಾ ಆರೋಪಿಗಳ ಮಧ್ಯೆ ದರ್ಶನ್ ಒಂದೂವರೆ ಗಂಟೆಗೂ ಹೆಚ್ಚು ಕಾಲ ಕೈಕಟ್ಟಿ ನಿಂತಿದ್ದು, ಎಲ್ಲಾ ಆರೋಪಿಗಳ ಬಳಿಯೂ ಪೊಲೀಸರು ಕೃತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಇನ್ನೂ, ಸ್ಥಳ ಮಹಜರು ವೇಳೆ ಶೆಡ್‌ನಲ್ಲಿ FSL ಟೀಮ್​ ಕೂಡ ಉಪಸ್ಥಿತಿಯಿದ್ದು, ಆರೋಪಿಗಳ ಹೇಳಿಕೆ ಆಧರಿಸಿ FSL ತಂಡದ ಪರಿಶೀಲನೆ ನಡೆಸಿದರು. ಬಳಿಕ ಆರೋಪಿಗಳು ಬಳಸಿದ್ದ ಮಾರಕಾಸ್ತ್ರಗಳ ಟೆಕ್ನಿಕಲ್​ ಎವಿಡೆನ್ಸ್​ ಪಡೆದ ಪೊಲೀಸರು ಮಾರಕಾಸ್ತ್ರಗಳ ಮೇಲಿನ ಫಿಂಗರ್​ ಪ್ರಿಂಟ್​ ಸೇರಿ ಎಲ್ಲಾ ಸಾಕ್ಷ್ಯಗಳನ್ನ ಸಂಗ್ರಹಿಸಿದರು.

ಇದನ್ನೂ ಓದಿ:ನಟ ದರ್ಶನ್​, ಪವಿತ್ರಾ ಗೌಡರನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶ

ಶೆಡ್​ನ ಹಲ್ಲೆ ನಡೆಸಿದ ಸ್ಥಳದಲ್ಲಿದ್ದ ರಕ್ತದ ಕಲೆಗಳ ಸ್ಯಾಂಪಲ್​ ಸಂಗ್ರಹಿಸಿ, ಎಲ್ಲಾ ಆಯಾಮಗಳಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇನ್ನು, ಸ್ಥಳ ಮಹಜರು ಬಳಿಕ ದರ್ಶನ್ ಹಾಗೂ ಆರೋಪಿಗಳನ್ನ ಪೊಲೀಸರು ಜೈಲಿಗೆ ಕರೆದೊಯ್ದರು.

ಇಂದು ಚಿತ್ರದುರ್ಗದಲ್ಲೂ ಸ್ಥಳ ಮಹಜರು ಸಾಧ್ಯತೆ:

ದರ್ಶನ್ ಮತ್ತು ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದು ಆರೋಪಿಗಳನ್ನ ಸ್ಥಳ ಮಹಜರಿಗೆ ಚಿತ್ರದುರ್ಗಕ್ಕೆ ಕರೆದೊಯ್ಯುವ ಸಾಧ್ಯತೆಯಿದೆ.

ಕಳೆದ ಎಂಟನೇ ತಾರೀಖು ರೇಣುಕಾಸ್ವಾಮಿಯನ್ನ ಕಿಡ್ನಾಪ್ ನಡೆದಿತ್ತು. ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿಕೊಂಡು ಬೆಂಗಳೂರಿಗೆ ಕರೆ ತಂದು ಪಟ್ಟಣಗೆರೆಯ ಶೆಡ್​​ ನಲ್ಲಿ ಕೂಡಿ ಹಾಕಿ ಹಲ್ಲೆ ನಿನ್ನೆ ಬೆಂಗಳೂರಿನಲ್ಲಿ ಪೊಲೀಸರು ಸ್ಥಳ ಮಹಜರು ಪ್ರಕ್ರಿಯೆ ಮುಗಿಸಿದ್ದಾರೆ. ಇಂದು ಚಿತ್ರದುರ್ಗದಲ್ಲೂ ಸ್ಥಳ ಮಹಜರು ನಡೆಸಲು ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ.

ಇಂದು ಖಾಕಿ ಕೈ ಸೇರಲಿದೆ ಪೋಸ್ಟ್​ ಮಾರ್ಟಂ ರಿಪೋರ್ಟ್:

ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಇಂದು ಪೋಸ್ಟ್​ ಮಾರ್ಟಂ ರಿಪೋರ್ಟ್​ ಪೊಲೀಸರ ಕೈ ಸೇರಲಿದೆ. ಹತ್ಯೆ ಪ್ರಕರಣಕ್ಕೆ ಪೋಸ್ಟ್ ​ಮಾರ್ಟಂ ವರದಿ ಸಾಕ್ಷಿಯಾಗಲಿದೆ. ರೇಣುಕಾ ಸ್ವಾಮಿ ದೇಹದಲ್ಲಿ 15 ಕಡೆಗಳಲ್ಲಿ ಗಾಯದ ಗುರುತು ಕಂಡುಬಂದಿದೆ. ಮರ್ಮಾಂಗದ ಮೇಲೆ ಹಲ್ಲೆ ಮಾಡಿರೋದು ರಿಪೋರ್ಟ್​ನಲ್ಲಿ ದೃಢವಾಗಿದೆ. ರೇಣುಕಾ ಸ್ವಾಮಿ ದೇಹಕ್ಕೆ ಆಘಾತವಾಗಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ್ದ. ಮರ್ಮಾಂಗದಿಂದ ರಕ್ತ ಸೋರಿಕೆಯಾಗಿರೋದು ಕೂಡ ದೃಢವಾಗಿದೆ.

RELATED ARTICLES

Related Articles

TRENDING ARTICLES