Sunday, September 29, 2024

SIT ವಿಚಾರಣೆಗೆ ಹಾಜರಾದ ರೇವಣ್ಣ ಪತ್ನಿ: ಪ್ರಜ್ವಲ್​ ನನ್ನು ಕಂಡು ಗಳಗಳನೆ ಕಣ್ಣೀರಿಟ್ಟ ಭವಾನಿ

ಬೆಂಗಳೂರು: ಮೈಸೂರಿನ ಕೆ.ಆರ್​ ನಗರ ಸಂತ್ರಸ್ತೆ ಕಿಡ್ನಾಪ್​ ಪ್ರಕರಣದಲ್ಲಿ SIT ಮುಂದೆ ವಿಚಾರಣೆಗೆ ಹಾಜರಾದ ಆರೋಪಿ ಭವಾನಿ ರೇವಣ್ಣ ತಮ್ಮ ಮಗನನ್ನು ಕಂಡು ಗಳಗಳನೆ ಕಣ್ಣೀರಿಟ್ಟಿರುವ ಘಟನೆ ಇಂದು ನಡೆದಿದೆ.

ಕಿಡ್ನಾಪ್​ ಪ್ರಕರಣದಲ್ಲಿ ಆರೋಪಿಯಾಗಿರುವ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್​ ಮೊರೆ ಹೋಗಿದ್ದರು, ಈ ಅರ್ಜಿ ವಿಚಾರಣೆ ಇಂದು ನಡೆಯಿತು. ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲವು ಮಂಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಇಂದು ಮಧ್ಯಾಹ್ನ 1ಗಂಟೆ ವೇಳೆಗೆ SIT ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು.

ಇದನ್ನೂ ಓದಿ: ಭವಾನಿ ರೇವಣ್ಣಗೆ ತಾತ್ಕಾಲಿಕ ರಿಲೀಫ್​: ಮಧ್ಯಂತರ ನಿರೀಕ್ಷಣಾ ಜಾಮೀನು ಮಜೂರು

ನ್ಯಾಯಾಲಯದ ಸೂಚನೆ ಮೇರೆಗೆ SIT ಮುಂದೆ ವಿಚಾರಣೆಗೆ ಭವಾನಿ ರೇವಣ್ಣ ಹಾಜರಾದರು. SIT ಅಧಿಕಾರಿಗಳು ಸತತ ಒಂದು ಗಂಟೆಗೂ ಹೆಚ್ಚು ಕಾಲ ಭವಾನಿ ವಿಚಾರಣೆ ನಡೆಸಿದರು. ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸದ ಭವಾನಿ, ಈ ಕಿಡ್ನಾಪ್​ಗೂ ನನಗೂ ಯಾವುದೇ ಸಂಬಂಧ ಇಲ್ಲ. ನಾನು ಮೊದಲು ನನ್ನ ಮಗನನ್ನು ನೋಡಬೇಕು ಎಂದು ಬೇಡಿಕೊಂಡಿದ್ದಾರೆ.

ಈ ವೇಳೆ ಮಗನನ್ನು ನೋಡಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದರು. ಮಗನನ್ನು ಕಂಡ ತಾಯಿ ಒಂದೇ ಸಮನೆ ಗಳ ಗಳನೆ ಅತ್ತು ಕಣ್ಣೀರಿಟ್ಟಿದ್ದಾರೆ. ಇತ್ತ ತಾಯಿ ಕಣ್ಣೀರಿಡುತ್ತಿದ್ದಂತೆ ಪ್ರಜ್ವಲ್​ ರೇವಣ್ಣ ಕೂಡ ಅತ್ತು ನೀರಾಗಿದ್ದಾರೆ.

RELATED ARTICLES

Related Articles

TRENDING ARTICLES