Sunday, September 29, 2024

ಪ್ರಜ್ವಲ್​ ರೇವಣ್ಣ ಪ್ರಕರಣದಿಂದ ಪಕ್ಷಕ್ಕೆ ಯಾವುದೇ ಎಫೆಕ್ಟ್​ ಆಗಲ್ಲ: ಜಿ.ಟಿ ದೇವೇಗೌಡ

ಹಾಸನ: ಪ್ರಜ್ವಲ್‌ ರೇವಣ್ಣ ಬಂಧನ ವಿಚಾರಕ್ಕೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಡಿ.ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅವರನ್ನು ಅಮಾನತು ಮಾಡಿದ್ದೇವೆ.
ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿದ್ದೇವು. ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ನಾವು ಸೇರಿ ಎಲ್ಲರೂ ಒತ್ತಾಯಿಸಿದ್ದೆವು.
ಈಗ ಪ್ರಜ್ವಲ್‌ ರೇವಣ್ಣ ಬಂಧನ ಆಗಿದೆ. ಅಲ್ಲಿಗೆ ನಮ್ಮ ಕೆಲಸ ಮುಗಿಯಿತು. ಎಸ್‌ಐಟಿ ತನಿಖೆಯನ್ನು ಮುಂದುವರೆಸುತ್ತೆ ಎಂದರು.

ಇದನ್ನೂ ಓದಿ: ವಿದೇಶದಿಂದ ಬಂದ ಪ್ರಜ್ವಲ್​ನನ್ನ ಮಹಿಳಾ ಅಧಿಕಾರಿಗಳೇ ಬಂಧಿಸಿದ್ದೇಕೆ?

ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಕುಮಾರಸ್ವಾಮಿ ಮೊದಲೇ ಹೇಳಿದ್ದರು. ಪ್ರಜ್ವಲ್‌ ರೇವಣ್ಣ ಜೊತೆಗೆ ಪೆನ್‌ಡ್ರೈವ್ ಹಂಚಿದವರ ಬಂಧನವಾಗಬೇಕು. ತನಿಖೆಯಿಂದ ಸಂಪೂರ್ಣ ಉತ್ತರ ಹೊರ ಬರಲಿ. ಸಂತ್ರಸ್ತರೆಯ ಪರವಾಗಿ ಜೆಡಿಎಸ್‌ ಪಕ್ಷ ನೂರಕ್ಕೆ ನೂರು ಇರುತ್ತೆ. ಎಸ್‌ಐಟಿ ತನಿಖೆ ಹೊರಬರುವವರೆಗೂ ನಾವೇನು ಹೇಳಲು ಆಗಲ್ಲ.

ಈ ಪ್ರಕರಣದಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನಮಗೆ ಯಾವುದೇ ಮುಜುಗರ ಇಲ್ಲ. ಪ್ರಜ್ವಲ್‌ ರೇವಣ್ಣ ತಪ್ಪು ಮಾಡಿದ್ರೆ ಶಿಕ್ಷೆ ಕೊಡಿ ಅಂತ ಹೇಳಿದ್ದೀವಿ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES