Sunday, September 29, 2024

ಪ್ರಜ್ವಲ್​ ಬಂಧನಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಹಾಸನದಲ್ಲಿ ಬೃಹತ್​​ ಪ್ರತಿಭಟನೆ

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆಗಳ ಪೆನ್​ಡ್ರೈವ್​ ಪ್ರಕರಣವನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು ಹಾಸನದಲ್ಲಿ ರಾಜ್ಯ ಮಟ್ಟದ ಹೋರಾಟ ನಡೆಸಲಾಗುತ್ತಿದೆ. ಹಾಸನದ ಹೇಮಾವತಿ ಪ್ರತಿಮೆಯಿಂದ ಹಾಸನ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ ಕಾಮಾಂಧ ಪ್ರಜ್ವಲ್​ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

ಪ್ರತಿಭಟನೆಯಲ್ಲಿ 113 ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದು ಪ್ರಜ್ವಲ್ ಬಂಧಿಸಿ, ಸಂತ್ರಸ್ತೆಯರನ್ನ ರಕ್ಷಿಸಿ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ಪ್ರತಿಭಟನೆಯಲ್ಲಿ ಮಾಜಿ ಸಂಸದೆ ಸುಭಾಷಿಣಿ ಅಲಿ ಭಾಗಿಯಾಗಿದ್ದಾರೆ.

ಕಾಮಾಂಧ ಪ್ರಜ್ವಲ್​ ವಿರುದ್ಧ ಸಿಡಿದೆದ್ದ ನಾರಿ‘ಶಕ್ತಿ’:

ಕಾಮಾಂಧ ಪ್ರಜ್ವಲ್​ ರೇವಣ್ಣ ವಿರುದ್ಧ ನಾರಿಶಕ್ತಿ ಆಕ್ರೋಶ ಹೊರಹಾಕಿದೆ. ಪ್ರಜ್ವಲ್​​ ಬಂಧನಕ್ಕೆ ಆಗ್ರಹಿಸಿ ಹಾಸನದಲ್ಲಿ ಮಹಿಳಾ ಸಂಘಟನೆಗಳು ಬೃಹತ್ ರ್ಯಾಲಿ ನಡೆಸಿವೆ. ಸಂಸದ ಪ್ರಜ್ವಲ್‌ ಅರೆಸ್ಟ್ ಆಗಲೇಬೇಕು. ಬಂಧಿಸಿ ಬಂಧಿಸಿ ಕಾಮುಕ ಪ್ರಜ್ವಲ್​ನನ್ನು ಬಂಧಿಸಿ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಸಂತ್ರಸ್ತರೇ ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ, ರೇವಣ್ಣ ಕುಟುಂಬದ ಪಾಳೇಗಾರಿಕೆ ನಡೆಯೋದಿಲ್ಲವೆಂದು ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದ್ದಾರೆ.

ಇದನ್ನೂ ಓದಿ: ವಿಧಾನಪರಿಷತ್​ ಚುನಾವಣೆ: ಇಂದು ನಾಳೆಯೊಳಗೆ ಅಧಿಕೃತ ಪಟ್ಟಿ ಬಿಡುಗಡೆ ಸಾಧ್ಯತೆ

407 ಟೆಂಪೋದಲ್ಲಿ ಹೋರಾಟಕ್ಕೆ ಆಗಮಿಸಿದ ಜನ:

ಹಾಸನದಲ್ಲಿ ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ಜೋರಾಗಿದೆ. ಹಾಸನದ ಎನ್.ಆರ್.ಸರ್ಕಲ್​ನಲ್ಲಿ ನಡೆಯುತ್ತಿರುವ ಹೋರಾಟಕ್ಕೆ 2 ಟೆಂಪೋದಲ್ಲಿ ಆಗಮಿಸಿದ ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಗ್ರಾಮೀಣ ಭಾಗದಿಂದ 407 ಟೆಂಪೋದಲ್ಲಿ ಜನರು ಬಂದು ಹೋರಾಟದಲ್ಲಿ ಭಾಗಿಯಾಗಿದ್ದಾರೆ.

ಪ್ರಜ್ವಲ್ ಆಗಮನ.. ಪೊಲೀಸ್​​ ಅಲರ್ಟ್​​:

ಇಂದು ಪ್ರಜ್ವಲ್ ರೇವಣ್ಣ ಆಗಮನ ಹಿನ್ನೆಲೆ ಹಿರಿಯ ಪೊಲೀಸ್​​ ಅಧಿಕಾರಿಗಳು ಮತ್ತು SIT ಮುಖ್ಯಸ್ಥರಾದ ಎಡಿಜಿಪಿ ಬಿ.ಕೆ‌ .ಸಿಂಗ್ ಸಭೆ ನಡೆಸಿದ್ದಾರೆ. ಎಸ್ಐಟಿ ಮುಖ್ಯಸ್ಥ ಎಡಿಜಿಪಿ ಬಿ.ಕೆ‌.ಸಿಂಗ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾಸ್​​ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.
ಏರ್​​​ಪೋರ್ಟ್​ನಲ್ಲಿ ಯಾವ ರೀತಿಯಾಗಿ ತಯಾರಿ ಮಾಡಬೇಕೆಂದು ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES