Sunday, September 29, 2024

ದುಬೈನ JLT ಟವರ್ ಅಪಾರ್ಟ್​ಮೆಂಟ್​​ನಲ್ಲಿ ಅಡಗಿರುವ ಪ್ರಜ್ವಲ್ ರೇವಣ್ಣ!

ಬೆಂಗಳೂರು: ವಿಕೃತಕಾಮಿ ಪ್ರಜ್ವಲ್​​​ ಅಡಗುದಾಣ ಪವರ್ ಟಿವಿ ಪತ್ತೆಹಚ್ಚಿದೆ. ದುಬೈನ ಮರೀನಾದಲ್ಲಿರುವ ಜೆಎಲ್​​ಟಿ ಟವರ್​​ನಲ್ಲಿ ಕಾಮಂಧ ಪ್ರಜ್ವಲ್​​​​​​​​ ಅಡಗಿಕುಳಿತಿದ್ದಾನೆ ಎಂಬ ಮಾಹಿತಿ ಪವರ್​​​ ಟಿವಿಗೆ ಸಿಕ್ಕಿದೆ.

ದುಬೈನ ಖಾಸಗಿ ಅಪಾರ್ಟ್​​ಮೆಂಟ್​​ನಲ್ಲಿ ಪ್ರಜ್ವಲ್​​​​ ವಾಸವಾಗಿದ್ದು, ಅಲ್ಲಿಯೇ ಪ್ರಜ್ವಲ್​​​​​ ಅಡಗಿ ಕುಳಿತಿದ್ದಾನೆ.  ಮೊದಲು ಪಾಮ್​ ಜುಮೇರಾದಲ್ಲಿ ಅಡಗಿದ್ದ ಪ್ರಜ್ವಲ್, ಕೆಲ ದಿನಗಳ ಬಳಿಕ ಲೊಕೇಶನ್ ಚೇಂಜ್​​​​ ಮಾಡಿ ಪಾಮ್ ಜುಮೇರಾದಿಂದ ಮರೀನಾದ ಜೆಎಲ್​​​​​​ಟಿ ಟವರ್​​​​​​​​ಗೆ ಶಿಫ್ಟ್​​ ಆಗಿದ್ದಾನೆ. ಸದ್ಯ ಪ್ರತಿಷ್ಠಿತ ಜೆಎಲ್​​ಟಿ ಟವರ್ ಅಪಾರ್ಟ್​ಮೆಂಟ್​​ನಲ್ಲಿ ಪ್ರಜ್ವಲ್ ಪತ್ತೆಯಾಗಿದ್ದಾನೆ.

ಪ್ರಜ್ವಲ್​​​​​ ರಕ್ಷಣೆಗೆ ಮೂವರು ಹುಡುಗರ ನಿಯೋಜನೆ:

ಹಾಸನ ಸಂಸದ ಪ್ರಜ್ವಲ್​​​​​ ರೇವಣ್ಣ ಬಂಧನ ಭೀತಿಯಲ್ಲಿ ವಿದೇಶದಲ್ಲಿ ಅಡಗಿ ಕುಳಿತಿದ್ದು ಈತನ ಸಹಾಯಕ್ಕೆ ಮತ್ತು ರಕ್ಷಣೆಗೆ ಹಾಸನದ ಮೂವರು ಹುಡುಗರ ನಿಯೋಜನೆ ಮಾಡಲಾಗಿದೆ ಎನ್ನುವ ಮಾಹಿತಿ ಪವರ್ ಟಿವಿಗೆ ಸಿಕ್ಕಿದೆ.

ಪ್ರಜ್ವಲ್ ರಕ್ಷಣೆಗೆ ಇರುವ ಆ ಮೂವರು ಹುಡುಗರು ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಮತ್ತು ಅವರ ಮೂಲಕವೇ ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬಂಧನ ಭೀತಿ: ದೇಶಕ್ಕೆ ಆಗಮಿಸುವ ಮುನ್ನವೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಪ್ರಜ್ವಲ್​ ರೇವಣ್ಣ

ಬಂಧನ ಭೀತಿ ಹಿನ್ನಲೆ; ಜಾಮೀನು ಕೋರಿ ಅರ್ಜಿ:  

ದುಬೈನಿಂದ ಬರುವ ಮುನ್ನವೇ ಪ್ರಜ್ವಲ್​ ಜಾಮೀನು ಮೊರೆ ಹೋಗಿದ್ದಾನೆ. ಬಂಧನ ಭೀತಿ ಹಿನ್ನಲೆ ಪ್ರಜ್ವಲ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾನೆ. ಇದರೋಂದಿಗೆ SIT ವಶಕ್ಕೆ ಪಡೆಯೋ ಮೊದಲೇ ಕೋರ್ಟ್​​ಗೆ ಹಾಜರಾಗ್ತಾನಾ? ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ ತನ್ನ ವಿರುದ್ಧದ 3 ಪ್ರಕರಣಗಳಲ್ಲಿ ಜಾಮೀನು ಕೋರಿ  ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಜ್ವಲ್​​​ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಗೆ ಸೂಚನೆ:

ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರ ಹಿನ್ನಲೆ ಆಕ್ಷೇಪಣೆ ಸಲ್ಲಿಕೆ ಮಾಡಲು SITಗೆ ಸೂಚನೆ ನೀಡಲಾಗಿದೆ.
ನಿರೀಕ್ಷಣಾ ಜಾಮೀನು‌ ಅರ್ಜಿಯ ಲೈಂಗಿಕ ಕಿರುಕುಳ, ಲೈಂಗಿಕ ಅತ್ಯಾಚಾರ ಹಾಗೂ ಕಿಡ್ನಾಪ್ ಕೇಸ್ ಮೂರಕ್ಕೂ ಆಕ್ಷೇಪಣೆ ಸಲ್ಲಿಕೆಗೆ ಸೂಚನೆ ನೀಡಲಾಗಿದೆ.

ಇನ್ನು ನಾಳೆಯೇ ನಿರೀಕ್ಷಣಾ ಜಾಮೀನು ವಿಚಾರಣೆ ನಡೆಸುವಂತೆ ಪ್ರಜ್ವಲ್ ರೇವಣ್ಣ ಪರ ವಕೀಲರ ಮನವಿ ಮಾಡಿದ್ದರು. ಇದಕ್ಕೆಲ್ಲ ಒಪ್ಪದ ನ್ಯಾಯಾಧೀಶರು ಆಗೆಲ್ಲ ಆಗೋದಿಲ್ಲ ನೋಡೋಣ ಎಂದು ಮೇ 31ಕ್ಕೆ ಅರ್ಜಿ ವಿಚಾರಣೆಯನ್ನು ಕಾಯ್ದಿರಿಸಿದ್ದಾರೆ.

RELATED ARTICLES

Related Articles

TRENDING ARTICLES