Friday, June 7, 2024

ಪ್ರಜ್ವಲ್ ಬಗ್ಗೆ ರೇವಣ್ಣ ಏನೂ ಹೇಳಲಿಲ್ಲ : ಜಿ.ಟಿ. ದೇವೇಗೌಡ

ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ಯಾವುದೇ ಚರ್ಚೆ ಮಾಡಲಿಲ್ಲ. ಶಾಸಕ ಹೆಚ್.ಡಿ. ರೇವಣ್ಣ ಕೂಡ ಪ್ರಜ್ವಲ್ ಬಗ್ಗೆ ಏನೂ ಹೇಳಲಿಲ್ಲ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.

ರೇವಣ್ಣ ಭೇಟಿ ಬಳಿಕ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಳಿ ಮಾತನಾಡಿದ ಅವರು, ಇಂದು ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಇದೆ. ಕೋರ್ಟ್​ನಲ್ಲಿ ವಾದ ಪ್ರತಿವಾದ ನಡೆಯುತ್ತಿದೆ. ಇಂದು ಜಾಮೀನು ಸಿಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ನವೀನ್ ಗೌಡ ಮತ್ತು ಕಾರ್ತಿಕ ಗೌಡ ವಿಚಾರವಾಗಿ ಮಾತನಾಡಿ, ಎಸ್ಐಟಿ ಅಧಿಕಾರಿಗಳು ತನಿಖೆ ಮಾಡ್ತಾರೆ. ನಮಗೆ ಅವರ ಮೇಲೆ ನಂಬಿಕೆ ಇದೆ. ಸಿಬಿಐಗೆ ಕೊಡುವ ಅಗತ್ಯವಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ಪೊಲೀಸರ ಬಗ್ಗೆ ನಂಬಿಕೆ ಇದೆ ಅಂತಾರೆ. ನ್ಯಾಯಯುತವಾಗಿ ತನಿಖೆ ಮಾಡ್ತಾರೆ ಅಂತ ಪದೇ ಪದೆ ಸಿಎಂ ಹೇಳ್ತಿದ್ದಾರೆ ಎಂದಿದ್ದಾರೆ.

ಮಂಜುಗೆ ಪೆನ್​ಡ್ರೈವ್ ಪ್ರಕರಣ ಸುತ್ತಿಕೊಂಡಿದೆ

ಎಸ್ಐಟಿಯವರು ನೋಟಿಸ್ ಕೊಟ್ಟು ತನಿಖೆ ಮಾಡ್ತಿದ್ದಾರೆ. ಪೆನ್​ಡ್ರೈವ್ ಯಾರು ರಿಲೀಸ್ ಮಾಡಿದ್ರು, ಯಾರೂ ತಪ್ಪು ಮಾಡಿದ್ದಾರೆ. ಎಸ್ಐಟಿ ತನಿಖೆ ಮಾಡಿ ಎಲ್ಲವನ್ನೂ ಕಂಡು ಹಿಡಿದು ಸಿಎಂ ಹಿಸ್ಟರಿ ಕ್ರಿಯೇಟ್ ಮಾಡ್ಲಿ. ಅರಕಲಗೂಡು ಶಾಸಕ ಎ ಮಂಜುಗೆ ಪೆನ್​ಡ್ರೈವ್ ಪ್ರಕರಣ ಸುತ್ತಿಕೊಂಡಿದೆ ಎಂದು ಹೇಳಿದ್ದಾರೆ.

ಎಲ್ಲರದ್ದೂ ಹೊರಗಡೆ ಬರುತ್ತೆ, ಸ್ವಲ್ಪ ದಿನ ಕಾಯಬೇಕು

ಎಲ್ಲವೂ ಕೂಡ ತನಿಖೆ ಮೂಲಕ ಎಸ್ಐಟಿ ಪತ್ತೆ ಮಾಡುತ್ತಾರೆಂದು ಸಿಎಂ ಬೆನ್ನು ತಟ್ಟಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಮಗೂ ಕೂಡ ನಂಬಿಕೆ ಬಂದಿದೆ. ಪೆನ್​ಡ್ರೈವ್ ರಿಲೀಸ್ ಮಾಡಿದವರ ಬಗ್ಗೆ ತನಿಖೆ ಪ್ರಾರಂಭ ಮಾಡಿದ್ದಾರೆ. ಎಲ್ಲರದ್ದೂ ಹೊರಗಡೆ ಬರುತ್ತೆ, ಸ್ವಲ್ಪ ದಿನ ಕಾಯಬೇಕು ಎಂದು ಜಿ.ಡಿ. ದೇವೇಗೌಡ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES