Tuesday, July 9, 2024

ಬಡ ಹೆಣ್ಣು ಮಕ್ಕಳ ಬಾಯಿಗೆ ಅನ್ನ ಇಡಬೇಕೇ ಹೊರತು ‘ಖಾಸಗಿ ಅಂಗ’ ಅಲ್ಲ: ನಟಿ ರಶ್ಮಿ ಗೌತಮ್​

ಹೈದರಾಬಾದ್: ಪ್ರಜ್ವಲ್​ ರೇವಣ್ಣ ಅಶ್ಲೀಲ ವೀಡಿಯೋಗಳ ಪೆನ್​ಡ್ರೈವ್​ ಸ್ಟೋಟಕ ಮಾಹಿತಿಯನ್ನು ಪವರ್ ​ಟಿವಿ ಪ್ರಸಾರ ಮಾಡುತ್ತಿದ್ದಂತೆ ದೇಶವ್ಯಾಪ್ತಿಯಾಗಿ ಪ್ರಜ್ವಲ್​ ವಿರುದ್ದ ವ್ಯಾಪಕ ಟೀಕೆಗಳು ಕೇಳಿ ಬರುತ್ತಿದೆ. ಇದಕ್ಕೆ ಸಂಬಂಧಿಸಿ ಟಾಲಿವುಡ್​ ನಟಿ, ನಿರೂಪಕಿ ರಶ್ಮಿ ಗೌತಮ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.​

ಟಾಲಿವುಡ್ ನಿರೂಪಕಿ ರಶ್ಮಿ ಗೌತಮ್ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಿ, ಅದಕ್ಕೆ ಕಾರಣರಾದವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಧ್ವನಿ ಎತ್ತುತ್ತಿರುತ್ತಾರೆ. ಇದರ ನಡುವೆ ಇತ್ತೀಚೆಗೆ ರಶ್ಮಿ ಅವರು ಮಾಡಿರುವ ಒಂದು ಪೋಸ್ಟ್ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಪ್ರಜ್ವಲ್​ ರೇವಣ್ಣ ಒಬ್ಬ ಸೆಕ್ಸ್​ ಕ್ರಿಮಿನಲ್​: ನಟಿ ಕಸ್ತೂರಿ ಶಂಕರ್

ಇತ್ತೀಚೆಗಷ್ಟೇ ಆಕೆ ಶೇರ್ ಮಾಡಿಕೊಂಡ ಇನ್ಸ್ಟಾಗ್ರಾಂ ಸ್ಟೋರಿ ವೈರಲ್ ಆಗಿದೆ. ವ್ಯಭಿಚಾರ ಮತ್ತು ಮಹಿಳೆಯರ ಕುರಿತಾದ ಈ ಪೋಸ್ಟ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ರಶ್ಮಿ ಅವರು ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಖ್ಯಾತ ಲೇಖಕಿ ರಾಚೆಲ್ ಮೊರಾನ್ ಬರೆದ ಕೋಟ್ ಅನ್ನು ಹಂಚಿಕೊಂಡಿದ್ದಾರೆ. ಮಹಿಳೆಯರು ಬಡತನದಲ್ಲಿರುವಾಗ ಮತ್ತು ಹಸಿವಿನಿಂದ ಬಳಲುತ್ತಿರುವಾಗ ನಾವು ಮನುಷ್ಯರಾಗಿ ಅವರ ಬಾಯಿಗೆ ಆಹಾರ ಇಡಬೇಕೆ ಹೊರತು ಡಿಕ್ (ಖಾಸಗಿ ಅಂಗ) ಅಲ್ಲ ಎಂಬ ರಾಚೆಲ್ ಮೊರಾನ್ ಅವರ ಕೋಟ್ ಅನ್ನು ಶೇರ್ ಮಾಡಿದ್ದಾರೆ.

ಈ ಪೋಸ್ಟ್​​ ಸದ್ಯ ಕರ್ನಾಟಕದ ಹಾಸನ ಎಂಪಿ ಪ್ರಜ್ವಲ್​ ರೇವಣ್ಣ ಅವರ ರಾಸಲೀಲೆಗಳಿಗೆ ಹೋಲಿಕೆ ಮಾಡಲಾಗುತ್ತಿದೆ. ಸಂಸದ ಪ್ರಜ್ವಲ್​ ರೇವಣ್ಣ ಅವರು ಅಮಾಯಕ ಹೆಣ್ಣುಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ರಶ್ಮಿ ಗೌತಮ್​ ಅವರು ಪೋಸ್ಟ್​ ಹಂಚಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪೋಸ್ಟ್​ ವೈರಲ್​ ಆಗುತ್ತಿದೆ.

RELATED ARTICLES

Related Articles

TRENDING ARTICLES