Friday, May 17, 2024

ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ್ ಪತ್ನಿ ರುದ್ರಾಂಬಾ ನಿಧನ

ವಿಜಯಪುರ: ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಪತ್ನಿ ಎಂ.ಪಿ.ರುದ್ರಾಂಬಾ ಪ್ರಕಾಶ್ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ವಿಜಯಪುರ ಜಿಲ್ಲೆಯ ಹೂವಿನಹಡಗಲಿ ಅವರ ತೋಟದ ಮನೆಯಲ್ಲಿ‌‌ ಕೊನೆಯುಸಿರೆಳೆದಿರುವ ಇವರು, ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್‌ನ ಗೌರವಾಧ್ಯಕ್ಷರಾಗಿದ್ದ ಇವರಿಗೆ ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ, ರಂಗಭಾರತಿ ಅಧ್ಯಕ್ಷೆ ಎಂ.ಪಿ.ಸುಮಾ, ಎಂ.ಪಿ.ವೀಣಾ ಸೇರಿ ಮೂವರು ಪುತ್ರಿಯರು ಇದ್ದಾರೆ. ಅವರ ಪುತ್ರ ಹಾಗೂ ಹರಪನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ.ರವೀಂದ್ರ ಆರು ವರ್ಷದ ಹಿಂದೆ ನಿಧನರಾಗಿದ್ದರು.

ಇದನ್ನೂ ಓದಿ: ಇದೆಲ್ಲ ಷಡ್ಯಂತ್ರ, ಇದಕ್ಕೆಲ್ಲಾ ಹೆದರಿ ಓಡಿಹೋಗುವುದಿಲ್ಲ: ಹೆಚ್​.ಡಿ ರೇವಣ್ಣ

ಇಂದು ಮಧ್ಯಾಹ್ನ 3 ಗಂಟೆಗೆ ಎಂ.ಪಿ.ಪ್ರಕಾಶ್ ಸಮಾಧಿ ಬಳಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬದವರು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES