Saturday, May 4, 2024

ATM ನಲ್ಲಿ ಅಗ್ನಿ ಅವಘಡ, 5 ಲಕ್ಷ ಹಣ ಭಸ್ಮ

ಚಿಕ್ಕಮಗಳೂರು: ನಗರದ IG ರಸ್ತೆಯ ಸಾರಗೋಡು ಆರ್ಕೆಡ್​ನಲ್ಲಿರುವ ಕರ್ನಾಟಕ ಬ್ಯಾಂಕ್​ನ ಶಾಖೆಯ ಕೆಳಭಾಗದಲ್ಲಿರುವ ATM ಬೆಂಕಿಗೆ ಆಹುತಿಯಾಗಿದೆ.

ಎಟಿಎಂ ಯಂತ್ರದಲ್ಲಿದ್ದ 5 ಲಕ್ಷ ಹಣ ಸೇರಿದಂತೆ 15 ಲಕ್ಷ ಮೌಲ್ಯದ ಎಟಿಎಂ ಯಂತ್ರ ಸಂಪೂರ್ಣ ಭಸ್ಮವಾಗಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಎಟಿಎಂಗೆ ಬೆಂಕಿ ತಗುಲಿರುವ ಸಾಧ್ಯತೆ ಇದೆ. ಎಟಿಎಂಗೆ ಬೆಂಕಿ ಹೊತ್ತಿಕೊಂಡ ವಿಚಾರವನ್ನು ಹೈದರಾಬಾದ್ ಬ್ಯಾಂಕ್ ಕಂಟ್ರೋಲ್ ರೂಮ್​ ಅಗ್ನಿಶಾಮಕ ದಳಕ್ಕೆ ತಿಳಿಸಿದೆ.

ಇದನ್ನೂ ಓದಿ: ಭೀಕರ ಅಪಘಾತ : ಕಾರಿನಲ್ಲಿದ್ದ ಬಾಲಕಿ ಸಜೀವ ದಹನ, ನಾಲ್ವರ ಸ್ಥಿತಿ ಗಂಭೀರ

ಮಾಹಿತಿ ಬಂದ ಕೂಡಲೆ ಸ್ಥಳಕ್ಕೆ ಧಾವಿಸಿದ ಚಿಕ್ಕಮಗಳೂರು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES