Wednesday, May 22, 2024

ಭೀಕರ ಅಪಘಾತ : ಕಾರಿನಲ್ಲಿದ್ದ ಬಾಲಕಿ ಸಜೀವ ದಹನ, ನಾಲ್ವರ ಸ್ಥಿತಿ ಗಂಭೀರ

ಬೆಂಗಳೂರು : ತುಮಕೂರು ರಸ್ತೆಯ ನೆಲಮಂಗಲ​ ಬಳಿ ಭೀಕರ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಬಾಲಕಿಯೋರ್ವಳು ಸಜೀವ ದಹನವಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ.

ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಓಮಿನಿ ಕಾರಲ್ಲಿದ್ದ 14 ವರ್ಷದ ಬಾಲಕಿ ದಿವ್ಯಾ ಸಜೀವ ದಹನವಾಗಿದ್ದಾಳೆ.

ಸ್ವಿಫ್ಟ್ ಬೋಲೆನೋ ಹಾಗೂ ಓಮಿನಿ ನಡುವೆ ಅಪಘಾತ ಸಂಭವಿಸಿದೆ. ಮುಂದೆ ಚಲಿಸುತ್ತಿದ್ದ ಓಮಿನಿಗೆ ಸ್ವಿಫ್ಟ್ ಬೋಲೆನೋ ಕಾರು ಗುದ್ದಿದೆ. ಈ ವೇಳೆ ಓಮಿನಿ ಕಾರು ಪಲ್ಟಿಯಾಗಿ ಬೆಂಕಿ ತಗುಲಿದೆ. ಪರಿಣಾಮ ಓಮಿನಿ ಕಾರು ಧಗಧಗನೆ ಹೊತ್ತಿ ಉರಿದಿದೆ.

ಓಮಿನಿ ಕಾರಿನಲ್ಲಿ ಎಂಟು ಮಂದಿ ಪ್ರಯಾಣ ಮಾಡುತ್ತಿದ್ದರು. ಓಮಿನಿಯಲ್ಲಿದ್ದ ದಿವ್ಯಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸ್ವಿಫ್ಟ್ ಬೋಲೆನೋ ಕಾರಿನ ಡ್ರೈವರಿಗೆ ಕಾಲು ಮುರಿದಿದೆ. ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿಲ್ಲ. ಹೀಗಾಗಿ, ಸ್ಥಳೀಯರು ವಾಟರ್ ಟ್ಯಾಂಕ್ ಮೂಲಕ ಬೆಂಕಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಕೂಡಲೇ ಗಾಯಾಳುಗಳು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅಪಘಾತಗೊಳ್ಳಾಗದವರ ಮಾಹಿತಿ ಲಭ್ಯವಾಗಿಲ್ಲ. ಅಪಘಾತ ಸ್ಥಳದಲ್ಲಿ ಅಪಾರ ಜನರು ನೆರೆದಿದ್ದರು. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

RELATED ARTICLES

Related Articles

TRENDING ARTICLES