Monday, May 13, 2024

ಗ್ರಾಹಕರಿಗೆ ಕಹಿ ಸುದ್ದಿ: ಮೊಬೈಲ್ ರಿಚಾರ್ಜ್ ಶುಲ್ಕ ಶೇ.17 ಹೆಚ್ಚಳ?

ದೆಹಲಿ: ಲೋಕಸಭೆ ಚುನಾವಣೆ ಬಳಿಕ ಭಾರತೀಯ ಟೆಲಿಕಾಂಗ್​ ಗ್ರಾಹಕರಿಗೆ ಭರ್ಜರಿ ಕಹಿಸುದ್ದಿಯೊಂದು ಕಾದಿದೆ. ದೇಶದ ಪ್ರಮುಖ ನೆಟ್ವರ್ಕ್​ ಕಂಪೆನಿಗಳು ಟಾರಿಫ್​ ರೀಚಾರ್ಜ್​ ಬೆಲೆಯನ್ನು ಏರಿಕೆ ಮಾಡಲಿದೆ.

ಏರ್​ಟೆಲ್​, ಜಿಯೋ ಮತ್ತು ವಿಐ (ವೋಡೋಫೋನ್ ಐಡಿಯಾ) ಟ್ಯಾರಿಫ್ ಪ್ಲಾನ್‌ಗಳ ದರವನ್ನು ಶೇ. 15ರಿಂದ 17ರಷ್ಟು ಹೆಚ್ಚಳವಾಗಲಿವೆ ಎಂದು ದೂರಸಂಪರ್ಕ ಕ್ಷೇತ್ರದ ವರದಿಯೊಂದು ಹೇಳಿದೆ.

ಇದನ್ನೂ ಓದಿ : ಬಿಜೆಪಿ ಮುಖಂಡರು ನನ್ನನ್ನು ಉಚ್ಚಾಟನೆ ಮಾಡಲಿ ಎಂದು ಕಾಯುತ್ತಿದ್ದೇನೆ : ಕೆ.ಎಸ್​ ಈಶ್ವರಪ್ಪ

ಜೂ.4ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ಬಳಿಕ ಶೀಘ್ರದಲ್ಲೇ ದೂರಸಂಪರ್ಕ ಕಂಪೆನಿಗಳು ದರ ಹೆಚ್ಚಳ ಮಾಡಲಿವೆ. ಟ್ಯಾರಿಫ್ ಪ್ಲಾನ್‌ಗಳ ದರದಲ್ಲಿ ಶೇ.15 ರಿಂದ 17ರಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ. ಭಾರ್ತಿ ಏರ್‌ಟೆಲ್ ಅತೀ ದೊಡ್ಡ ಫಲಾನುಭವಿಯಾಗಲಿದೆ’ ಎಂದು ಆಂಟಿಕ್ಯು ಸ್ಟಾಕ್ ಬೋಕಿಂಗ್ ವರದಿ ತಿಳಿಸಿದೆ.

 

RELATED ARTICLES

Related Articles

TRENDING ARTICLES