Tuesday, April 30, 2024

ರಂಜಾನ್ ದಿನವೇ ಸಲ್ಮಾನ್ ಖಾನ್ ಅಭಿಮಾನಿಗಳ ಮೇಲೆ ಲಾಠಿಚಾರ್ಜ್

ಬೆಂಗಳೂರು : ನಟ ಸಲ್ಮಾನ್​ ಖಾನ್​ ಅವರನ್ನು ನೋಡಲು ಮನೆ ಬಳಿ ಬಂದ ಅಭಿಮಾನಿಗಳ ಮೇಲೆ ಮುಂಬೈ ಪೊಲೀಸರು ಲಾಠಿಚಾರ್ಜ್​ ಮಾಡಿದ್ದಾರೆ.

ಇಂದು ರಂಜಾಬ್ ಹಬ್ಬ. ಎಲ್ಲೆಡೆ ಈದ್ಆಚರಣೆ ಮಾಡಲಾಗುತ್ತಿದೆ. ಸಿನಿಮಾ ಮಂದಿ ಕೂಡ ಶೂಟಿಂಗ್​ಗೆ ಬ್ರೇಕ್ ಹಾಕಿ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ. ಹೀಗಾಗಿ, ನಟ ಸಲ್ಮಾನ್ ಖಾನ್ ಮನೆ ಬಳಿ ಅಭಿಮಾನಿಗಳು ಬಂದಿದ್ದರು.

ಮನೆ ಬಳಿ ಅಭಿಮಾನಿಗಳ ದಂಡೇ ಬಂದಿದ್ದರಿಂದ ಸಾಮಾನ್ಯವಾಗಿ ಟ್ರಾಫಿಕ್​ ಜಾಮ್​ ಉಂಟಾಗಿದೆ. ಪರಿಸ್ಥಿತಿ ಸುಧಾರಿಸಲು ಪೊಲೀಸರು ಅಭಿಮಾನಿಗಳ ಮೇಲೆ ಲಘು ಲಾಠಿಚಾರ್ಜ್​ ಮಾಡಿದ್ದಾರೆ. ಈ ವೇಳೆ ಕೆಲ ಮಹಿಳಾ ಅಭಿಮಾನಿಗಳೂ ಲಾಠಿ ಏಟು ತಿಂದಿದ್ದಾರೆ.

ನಟ ಸಲ್ಮಾನ್​ ಖಾನ್ ಮುಂಬೈನ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ನಲ್ಲಿ ರಂಜಾನ್ ಆಚರಿಸಿದ್ದಾರೆ. ಈ ವರ್ಷವೂ ಈದ್​ ಪ್ರಯುಕ್ತ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮನೆ ಬಳಿ ಜಮಾಯಿಸಿದ್ದರು. ಎಷ್ಟು ಹೊತ್ತು ಕಾದರೂ ಅಭಿಮಾನಿಗಳಿಗೆ ಸಲ್ಲು ದರ್ಶನ ನೀಡಿಲ್ಲ. ಇತ್ತ, ಅಭಿಮಾನಿಗಳ ಸಂಖ್ಯೆ ಹೆಚ್ಚಾದಂತೆ ಮನೆ ಬಳಿ ಟ್ರಾಫಿಕ್​ ಜಾಮ್​ ಉಂಟಾಗಿತ್ತು.

ವಾಹನಗಳ ಓಡಾಟಕ್ಕೆ ಅಭಿಮಾನಿಗಳಿಂದ ಅಡ್ಡಿಯೂ ಉಂಟಾಗಿತ್ತು. ಈ ಪರಿಸ್ಥಿತಿ ಸುಧಾರಿಸಲು ಪೊಲೀಸರು ಲಘು ಲಾಠಿಚಾರ್ಜ್​ ಮಾಡಿದ್ದಾರೆ. ಇದರಿಂದ ಕಾಲ್ತುಳಿತವೂ ಉಂಟಾಗಿದೆ. ಸಲ್ಲು ದರ್ಶನಕ್ಕೆ ಬಂದ ಫ್ಯಾನ್ಸ್​ಗೆ ಲಾಠಿ ಏಟು ಬಿದಿದ್ದೆ. ಲಾಠಿಚಾರ್ಜ್​ ಬಳಿಕ ಟ್ರಾಫಿಕ್ ಕ್ಲಿಯರ್ ಆಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಕೊನೆಗೂ ಅಭಿಮಾನಿಗಳಿಗೆ ದರ್ಶನ ಕೊಟ್ಟ ಸಲ್ಲು

RELATED ARTICLES

Related Articles

TRENDING ARTICLES