Saturday, May 11, 2024

ಸ್ಟೋನಿಸ್ ಅದ್ಭುತ ಆಟ, ಗುಜರಾತ್​ಗೆ 164 ರನ್ ಟಾರ್ಗೆಟ್

ಬೆಂಗಳೂರು : ಮಾರ್ಕಸ್ ಸ್ಟೋನಿಸ್ ಅವರ ಅದ್ಭುತ ಇನ್ನಿಂಗ್ಸ್‌ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ಸ್ಪರ್ಧಾತ್ಮಕ ಟಾರ್ಗೆಟ್​ ಕಲೆಹಾಕಿದೆ.

ಲಕ್ನೋನಾ ಏಕನಾ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್​ ಗಳಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಪರ ಕೆ.ಎಲ್. ರಾಹುಲ್ ಹಾಗೂ ಕ್ವಿಂಟನ್ ಡಿ ಕಾಕ್ ಇನ್ನಿಂಗ್ಸ್​ ಆರಂಭಿಸಿದರು. ಆದರೆ, ಡಿ ಕಾಕ್ ಬೇಗನೆ ಪೆವಿಲಿಯನ್​ ಕಡೆ ಮುಖ ಮಾಡಿದರು. ಬಳಿಕ ಬಂದ ದೇವದತ್ ಪಡಿಕ್ಕಲ್ ಸಹ ನಿರಾಸೆ ಮೂಡಿದರು.

ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಲಕ್ನೋಗೆ ಮಾರ್ಕಸ್ ಸ್ಟೋನಿಸ್ ಹಾಗೂ ರಾಹುಲ್ ಆಸರೆಯಾದರು. 62 ಎಸೆತಗಳಲ್ಲಿ 73 ರನ್​ ಜೊತೆಯಾಟ ಆಡಿದರು. ಸ್ವಲ್ಪ ನಿಧಾನಗತಿಯ ಬ್ಯಾಟಿಂಗ್​ನಿಂದ ಲಕ್ನೋ ರನ್​ ವೇಗ ಕುಂಠಿತವಾಯಿತು. ಅಂತಿಮವಾಗಿ ಲಕ್ನೋ 163 ರನ್​ ಗಳಿಸಿ ಇನ್ನಿಂಗ್ಸ್​ ಮುಗಿಸಿತು.

ಸ್ಟೋನಿಸ್ 58, ರಾಹುಲ್ 33 ರನ್

ಲಕ್ನೋ ಪರ ಮಾರ್ಕಸ್ ಸ್ಟೋನಿಸ್ 58, ಕೆ.ಎಲ್. ರಾಹುಲ್ 33, ನಿಕೋಲಸ್ ಪೂರನ್ ಅಜೇಯ 32, ಆಯುಷ್ ಬಡೋನಿ 20, ಕೃನಾಲ್ ಪಾಂಡ್ಯ ಅಜೇಯ 2 ರನ್ ಗಳಿಸಿದರು. ಗುಜರಾತ್ ಪರ ಉಮೇಶ್ ಯಾದವ್ ಹಾಗೂ ದರ್ಶನ್ ನಲ್ಕಂಡೆ ತಲಾ 2 ವಿಕೆಟ್, ರಶೀದ್ ಖಾನ್ ಒಂದು ವಿಕೆಟ್ ಪಡೆದರು. ಗುಜರಾತ್ ಗೆಲ್ಲಲು 164 ರನ್​ ಗಳಿಸಬೇಕಿದೆ.

RELATED ARTICLES

Related Articles

TRENDING ARTICLES