Friday, May 3, 2024

Kolar Loksabha Election 2024 Survey : ಕೋಲಾರ ಕ್ಷೇತ್ರದಲ್ಲಿ ಯಾರಿಗೆ ಜಯ? ಯಾರಿಗೆ ಸೋಲು?

ಲೋಕಸಭಾ ಚುನಾವಣೆ ಹಿನ್ನೆಲೆ ನಿಮ್ಮ ಪವರ್ ಟಿವಿ ರಾಜ್ಯದ 28 ಕ್ಷೇತ್ರಗಳಲ್ಲಿನ ಜನರಿಗಾಗಿ ಅವರ ನೆಚ್ಚಿನ ಪಕ್ಷ ಅಥವ ಅಭ್ಯರ್ಥಿಯ ಪರ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಲು ಕಾಲ್ ಮಾಡಿ ಓಟ್​ ಮಾಡಿ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಸಮೀಕ್ಷೆಯನ್ನು ನಡೆಸುತ್ತಿದ್ದು ಈ ಕಾರ್ಯಕ್ರಮಕ್ಕೆ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಹಮ್ಮಿಕೊಳ್ಳಲಾಗಿದ್ದ ‘ಕಾಲ್​ ಮಾಡಿ ಓಟ್ ಮಾಡಿ’ ಕಾರ್ಯಕ್ರಮದಲ್ಲಿ ಮಧ್ಯಾಹ್ನ 1.30 ರಿಂದ ಸಂಜೆ 5.30ರ ವರೆಗೆ ನಡೆದ ಸಮೀಕ್ಷೆಯಲ್ಲಿ ಸಾವಿರಾರು ಕರೆಗಳನ್ನು ಮಾಡುವ ಮೂಲಕ ಮತದಾರರು ಪಾಲ್ಗೊಂಡರು.

ಕ್ಷೇತ್ರದ ಪರಿಚಯ :

ಕೋಲಾರ ಲೋಕಸಭಾ ಕ್ಷೇತ್ರ

ಹಾಲಿ ಸಂಸದ: ಎಸ್. ಮುನಿಸ್ವಾಮಿ

========================

ಜೆಡಿಎಸ್​ ಅಭ್ಯರ್ಥಿ : ಜೆಡಿಎಸ್​ : ಎಂ. ಮಲ್ಲೇಶ್ ಬಾಬು,

ಕಾಂಗ್ರೆಸ್ : ಕೆ.ವಿ. ಗೌತಮ್​

2019 ಬಲಾಬಲ   :

ಎಸ್.ಮುನಿಸ್ವಾಮಿ : ಬಿಜೆಪಿ : 7,09,165 : 56.35%

ಕೆ.ಹೆಚ್. ಮುನಿಯಪ್ಪ : ಕಾಂಗ್ರೆಸ್ : 4,99,144 : 39.66%

ನೋಟ ಮತಗಳು  (ಯಾರಿಗೂ ಮತವಿಲ್ಲ)13,889 :           1.1%

ಚಲಾವಣೆಯಾದ ಒಟ್ಟು ಮತಗಳು : 12,59,093 : ಶೇ. 77.25

ಗೆಲುವಿನ ಅಂತರ : 2,10,021 : ಶೇ. 16.29

ಮತದಾರರು

ಪುರುಷರು    :       8,49,489

ಮಹಿಳೆಯರು :      8,68,184

ಒಟ್ಟು ಮತದಾರರು : 17,17,884

( ತೃತೀಯ ಲಿಂಗಿಗಳು : 211)

ಜಾತಿವಾರು ಮತ ಲೆಕ್ಕ :

ಒಕ್ಕಲಿಗ : 3.80 ಲಕ್ಷ

ಕುರುಬ :  2.70 ಲಕ್ಷ

ಭೋವಿ :  2.10 ಲಕ್ಷ

ಮುಸ್ಲಿಂ : 1.80 ಲಕ್ಷ

ಬಣಜಿಗ : 1.05 ಲಕ್ಷ

ಎಸ್ಸಿ/ಎಸ್ಟಿ : 3.10 ಲಕ್ಷ

ಇತರರು     : 2.13 ಲಕ್ಷ

ಕಾಂಗ್ರೆಸ್ ಪ್ಲಸ್

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಜಾರಿ

8 ಅಸೆಂಬ್ಲಿ ಕ್ಷೇತ್ರಗಳಲ್ಲಿ ಐದರಲ್ಲಿ ಕಾಂಗ್ರೆಸ್ ಶಾಸಕರು

ಕ್ಷೇತ್ರದಲ್ಲಿ ಅಹಿಂದ ಮತಗಳು ಹೆಚ್ಚಾಗಿದ್ದು ‘ಕೈ’ಗೆ ಬಲ

ಸಂಸದ ಮುನಿಸ್ವಾಮಿ ವಿರುದ್ಧ ಇರುವ ಆಕ್ರೋಶ

ಕಾಂಗ್ರೆಸ್ ಮೈನಸ್

ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭಾರಿ ಭಿನ್ನಮತ

ಎರಡು ಬಣ ಗುದ್ದಾಟದಲ್ಲಿ 3ನೇ ವ್ಯಕ್ತಿಗೆ ಟಿಕೆಟ್​

ಹಿಂದುತ್ವದ ವಿಚಾರದಲ್ಲಿ ನಾಯಕರ ಹೇಳಿಕೆಗಳು

ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಆಗ್ತಿಲ್ಲ

ಮುನಿಯಪ್ಪ ಜೊತೆ ಹಲವು ನಾಯಕರ ಮುನಿಸು

ಜೆಡಿಎಸ್ ಪ್ಲಸ್

ಜೆಡಿಎಸ್​ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು

ಹಾಲಿ ಸಂಸದ ಮುನಿಸ್ವಾಮಿ ಹೊಂದಾಣಿಕೆ ಮತ್ತು ಬೆಂಬಲ

ಜೆಡಿಎಸ್ ಪಕ್ಷದ ಮೂವರು ಶಾಸಕರು ಆಯ್ಕೆ ಆಗಿರುವುದು

ಪ್ರಧಾನಿ ನರೇಂದ್ರ ಮೋದಿ ಅಲೆ ಮತ್ತು ಹಿಂದೂತ್ವದ ಮತ

ಜೆಡಿಎಸ್ ಮೈನಸ್

ಬಿಜೆಪಿ, ಜೆಡಿಎಸ್​ ಮೈತ್ರಿಗೆ ಸ್ಥಳೀಯ ಮಟ್ಟದಲ್ಲಿ ಗೊಂದಲ

ಬಿಜೆಪಿ ಗೆದ್ದಿದ್ದ ಕ್ಷೇತ್ರ ಬಿಟ್ಟುಕೊಟ್ಟಿದ್ದಕ್ಕೆ ನಾಯಕರಲ್ಲಿ ಬೇಸರ

ಹಾಲಿ ಸಂಸದರಿಂದ ಯಾವುದೇ ಮಹತ್ವದ ಯೋಜನೆ ಜಾರಿಯಿಲ್ಲ

ಪವರ್ ಟಿವಿ ಸರ್ವೆ ರಿಸಲ್ಟ್​

ಕೋಲಾರ ಲೋಕಸಭಾ ಕ್ಷೇತ್ರದಿಂದ ಕಾಲ್ ಮಾಡಿ ವೋಟ್ ಮಾಡಿ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೋಲಾರದಲ್ಲಿ ಯಾವ ಪಕ್ಷಕ್ಕೆ ಹೆಚ್ಚು ವೋಟ್ ಬಿದ್ದಿದೆ? ಮೈತ್ರಿ ಅಭ್ಯರ್ಥಿ ವಿಶ್ವಾಸಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್​ ಪಕ್ಷ? ಕಾಂಗ್ರೆಸ್ ಒಳ ಬೇಗುದಿ ಜೆಡಿಎಸ್ ಅಭ್ಯರ್ಥಿಗೆ ವರವಾಗುತ್ತಾ? ಇವೆಲ್ಲದಕ್ಕು ಉತ್ತರ ಇಲ್ಲಿದೆ.

ಕೋಲಾರ ಅಸೆಂಬ್ಲಿ ಕ್ಷೇತ್ರದಿಂದ ಒಟ್ಟು ಕರೆಗಳು – 7458

ಪುರುಷ ಮತದಾರರಿಂದ 6781, ಮಹಿಳಾ ಮತದಾರರಿಂದ 677 ಕರೆಗಳು

ಜೆಡಿಎಸ್ ಅಭ್ಯರ್ಥಿಗೆ ಮತಗಳು – 3808, ಕಾಂಗ್ರೆಸ್ ಅಭ್ಯರ್ಥಿಗೆ ವೋಟ್ಸ್​ – 3650

ಕೋಲಾರ ಕ್ಷೇತ್ರದಿಂದ ಇತರರಿಗೆ ಬಂದ ಮತಗಳು – 0

ಜೆಡಿಎಸ್ಗೆ ಬಂದ ಶೇಕಡಾವಾರು ಮತಗಳು – 51%

ಕಾಂಗ್ರೆಸ್ ಪಕ್ಷಕ್ಕೆ ಬಂದ ಶೇಕಡಾವಾರು ಮತಗಳು – 49%

ಇತರರಿಗೆ ಬಂದ ಶೇಕಡಾವಾರು ಮತಗಳು – 0

ಕಾಂಗ್ರೆಸ್ ವಿರುದ್ಧ ಜೆಡಿಎಸ್​​​​​ಗೆ 158 ಮತಗಳ ಮುನ್ನಡೆ

ಸದ್ಯದ ಟ್ರೆಂಡ್​ :

​​ಕೋಲಾರ ಲೋಕಸಭಾ ಫೈಟ್​ನಲ್ಲಿ ಜೆಡಿಎಸ್​ ಪರ ಜನರ ಒಲವು

ಕೋಲಾರದಲ್ಲಿ ಜೆಡಿಎಸ್​​ – ಕಾಂಗ್ರೆಸ್​ ನಡುವೆ ಪ್ರಬಲ ಪೈಪೋಟಿ

ಮೊದಲ ಬಾರಿ ಸಂಸದರಾಗುವತ್ತ ಮಲ್ಲೇಶ್ ಬಾಬು​​ ದಾಪುಗಾಲು

ಒಳಜಗಳ  ಬಗೆಹರಿದ್ರೆ ಕಾಂಗ್ರೆಸ್ ಅಭ್ಯರ್ಥಿಗೆ ಲಾಭವಾಗುವ ನಿರೀಕ್ಷೆ

ಇದು ಪವರ್ ಸರ್ವೆಯಲ್ಲಿ ಕೋಲಾರ ಮತದಾರರು ನೀಡಿರುವ ಸಂದೇಶ.

RELATED ARTICLES

Related Articles

TRENDING ARTICLES