Tuesday, May 21, 2024

ಕುಮಾರಣ್ಣ 217 ಕೋಟಿ ಕುಳ, ಪತ್ನಿ ಅನಿತಾ 63 ಕೋಟಿ ಸಾಲಗಾರ್ತಿ, HDK ಮೇಲಿರುವ ಪ್ರಕರಣಗಳೆಷ್ಟು?

ಮಂಡ್ಯ : ಲೋಕ ಸಮರದ ಕಣದಲ್ಲಿರುವ ಕಲಿಗಳೆಲ್ಲರೂ ಕೋಟ್ಯಾಧಿಪತಿಗಳು. ಕುಮಾರಣ್ಣ ಸಹ ಬರೋಬ್ಬರಿ 217 ಕೋಟಿ ಕುಳ. ಆದರೆ, ಕುಮಾರಣ್ಣ 19 ಕೋಟಿ ಸಾಲಗಾರ, ಪತ್ನಿ ಅನಿತಾ 63 ಕೋಟಿ ಸಾಲಗಾರ್ತಿ.

ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಇಂದು ಮಂಡ್ಯದಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಅಫಿಡೆವಿಟ್​​ನಲ್ಲಿ ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ.

ಕುಮಾರಸ್ವಾಮಿ ಬರೋಬ್ಬರಿ 217.21 ಕೋಟಿ ಆಸ್ತಿಗೆ ಒಡೆಯರಾಗಿದ್ದಾರೆ. ಕುಟುಂಬದ ಒಟ್ಟು ಚರಾಸ್ತಿ 102.23 ಕೋಟಿ ಇದೆ. ಕುಟುಂಬದ ಒಟ್ಟು ಸ್ಥಿರಾಸ್ತಿ 114.98 ಕೋಟಿ ಇದ್ದು, ಒಟ್ಟು 217.21 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಕಳೆದ ವರ್ಷಕ್ಕಿಂತ HDK ಆಸ್ತಿ ಮೌಲ್ಯ 50.07 ಕೋಟಿ ಹೆಚ್ಚಳವಾಗಿದೆ. 750 ಗ್ರಾಂ. ಚಿನ್ನಾಭರಣ, 12.5 ಕೆಜಿ ಬೆಳ್ಳಿ ಹಾಗೂ 2.60 ಲಕ್ಷ ಮೌಲ್ಯದ 4 ಕ್ಯಾರೆಟ್ ವಜ್ರ ಹೊಂದಿದ್ದಾರೆ. ಇನ್ನು ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಸಹ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಜ್ರ ಹೊಂದಿದ್ದಾರೆ. 2.41ಕೋಟಿ ರೂ. ಮೌಲ್ಯದ 3.8 ಕೆಜಿ ಚಿನ್ನಾಭರಣ, 13 ಲಕ್ಷ ರೂ. ಮೌಲ್ಯದ 17 ಕೆಜಿ ಬೆಳ್ಳಿ ಮತ್ತು 33 ಲಕ್ಷ ರೂ. ಮೌಲ್ಯದ 50 ಕ್ಯಾರೆಟ್ ಡೈಮಂಡ್ ಹೊಂದಿದ್ದಾರೆ.

ಪತ್ನಿ ಅನಿತಾ 63 ಕೋಟಿ ಸಾಲಗಾರ್ತಿ

ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಕೋಟ್ಯಾಂತರ ರೂಪಾಯಿ ಸಾಲವನ್ನು ಮಾಡಿದ್ದಾರೆ. ಅನಿತಾ ಕುಮಾರಸ್ವಾಮಿ 63.05 ಕೋಟಿ ರೂ. ಸಾಲ ಮಾಡಿಕೊಂಡಿದ್ದರೆ, ಕುಮಾರಸ್ವಾಮಿ ಅವರು ಬರೋಬ್ಬರಿ 19.12 ಕೋಟಿ ರೂ. ಸಾಲ ಪಡೆದಿದ್ದಾರೆ.

HDK ಮೇಲಿರುವ ಪ್ರಕರಣಗಳೆಷ್ಟು?

ಇನ್ನು ಕುಮಾರಸ್ವಾಮಿ ಅವರು ಲೋಕಾಯುಕ್ತ, ಕ್ರಿಮಿನಲ್, ಸಿವಿಲ್ ಪ್ರಕರಣ ಎದುರಿಸುತ್ತಿದ್ದಾರೆ. 3 ಪ್ರಕರಣಗಳು ಲೋಕಾಯುಕ್ತದಲ್ಲಿ ವಿಚಾರಣೆ ಹಂತದಲ್ಲಿವೆ ಎಂದು ತಮ್ಮ ಅಫಿಡೆವಿಟ್​ನಲ್ಲಿ ಉಲ್ಲೇಖಿಸಿದ್ದಾರೆ.

RELATED ARTICLES

Related Articles

TRENDING ARTICLES