Saturday, May 4, 2024

ಪಿ.ಸಿ. ಮೋಹನ್ ನಾಮಪತ್ರ ಸಲ್ಲಿಕೆ : ಯಡಿಯೂರಪ್ಪ, ಅಶೋಕ್, ರೆಡ್ಡಿ ಸಾಥ್

ಬೆಂಗಳೂರು : ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಪಿ.ಸಿ. ಮೋಹನ್ ಅವರು ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಸೂಚಕರಾಗಿ ಮಾಜಿ ಸಿಎಂ ಡಾ.ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಆರ್. ಅಶೋಕ್, ಶಾಸಕ ಜನಾರ್ದನ ರೆಡ್ಡಿ, ಲಿಂಬಾವಳಿ ಈ ವೇಳೆ ಪಿ.ಸಿ. ಮೋಹನ್​ ಅವರಿಗೆ ಸಾಥ್ ನೀಡಿದರು.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು, ಕಳೆದ ಮೂರು ಬಾರಿ, 15 ವರ್ಷದಿಂದ ಬೆಂಗಳೂರು ಕೇಂದ್ರ ಪ್ರತಿನಿಧಿಸುತ್ತಿದ್ದೇನೆ. ನಾಲ್ಕನೇ ಬಾರಿ ಅವಕಾಶ ನೀಡಿರೋದಕ್ಕೆ ಧನ್ಯವಾದಗಳು. 1ಲಕ್ಷದ 16 ಕೋಟಿ ಅನುದಾನ ತಂದಿದ್ದೇನೆ. ಪ್ರಧಾನಿ ಮೋದಿ ಅವರು ಅನೇಕ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ ಎಂದರು.

ಮೆಟ್ರೋ ರೀಚ್-1 & 2 ಬಹಳಷ್ಟು ದೂರ ಕ್ರಮಿಸಿದೆ. ಮೆಟ್ರೋ ಅಭಿವೃದ್ಧಿಗೆ 20 ಸಾವಿರ ಕೋಟಿ ತಂದಿದ್ದೇನೆ. ನಗರಾಭಿವೃದ್ಧಿಗೆ ಹಣ ತಂದಿದ್ದೇನೆ. ಮೆಟ್ರೋ ವಿಸ್ತರಣೆ ಮಾಡಲಾಗಿದೆ. ಮತ್ತಷ್ಟು ಕೆಲಸ ಮಾಡಬೇಕು ಅಂತ ಇಚ್ಛೆ ಇದ್ದು, ಮತ್ತೊಮ್ಮೆ ಅವಕಾಶ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದರು ಹೇಳಿದರು.

3ನೇ ಬಾರಿ ನರೇಂದ್ರ ಮೋದಿ ಪ್ರಧಾನಿ ಆಗ್ತಾರೆ

ನಾಯಕರುಗಳ ಜೊತೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ. ಡೋರ್ ಟು ಡೋರ್ ಕಾಂಪೇನ್ ಮಾಡುತ್ತಿದ್ದಾರೆ. ದೇಶದಲ್ಲಿ ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿ ಆಗ್ತಾರೆ. ನಾನು ಈಗಾಗಲೇ ಬೆಂಗಳೂರಿಗೆ ಸಾಕಷ್ಟು ಅನುದಾನವನ್ನು ಕೇಂದ್ರದಿಂದ ತಂದಿದ್ದೇನೆ ಎಂದು ತಿಳಿಸಿದರು.

ಮೋದಿ ಸಾಧನೆ ಮುಂದಿಟ್ಟುಕೊಂಡು ವೋಟು ಕೇಳ್ತೀನಿ

ಸಬ್ ಅರ್ಬನ್ ರೈಲು ಬೆಂಗಳೂರಿಗೆ ತರಲು ಯಶಸ್ವಿ ಆಗಿದ್ದೇನೆ. ಸ್ಮಾರ್ಟ್ ಸಿಟಿ, ಪ್ರಧಾನಮಂತ್ರಿ ಆವಾಜ್ ಯೋಜನೆ ಅನುದಾನ ತರಲಾಗಿದೆ. 10 ವರ್ಷಗಳ ಪ್ರಧಾನಿ ಮೋದಿ ಸಾಧನೆ ಹಾಗೂ ನಾನು ಸಂಸದನಾಗಿ ಮಾಡಿದ ಕೆಲಸ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತೇನೆ ಎಂದು ಪಿ.ಸಿ. ಮೋಹನ್ ಹೇಳಿದರು.

RELATED ARTICLES

Related Articles

TRENDING ARTICLES