Sunday, May 12, 2024

‘ಯುವ’ ಸಿನಿಮಾಗೆ ಕಥೆ ಇಲ್ಲ ಅನ್ನೋರಿಗೆ ತಲೆ ಇಲ್ಲ.. ಇದು ಪ್ರಸ್ತುತ ಸಮಾಜದ ಕೈಗನ್ನಡಿ

ಫಿಲ್ಮಿಡೆಸ್ಕ್​ : ಯುವ ಯುಗಾರಂಭವಾಗಿದೆ. ದೊಡ್ಮನೆಯ ಹೊಸ ಭವಿಷ್ಯ ಯುವರಾಜ್​ಕುಮಾರ್, ಪ್ರೀ ರಿಲೀಸ್ ಇವೆಂಟ್​​ನಲ್ಲಿ ನುಡಿದಂತೆ ನಡೆದಿದ್ದಾರೆ. ಹಿಂದೆ ನಡೆದಿರೋದಕ್ಕೆಲ್ಲಾ ಬಡ್ಡಿ ಸಮೇತ ವಾಪಸ್ ಕೊಡೋ ಭರವಸೆ ಮೂಡಿಸಿದ್ದಾರೆ. ಫ್ಯಾಮಿಲಿ ಹಿಟ್ ಅನಿಸಿಕೊಳ್ತಿರೋ ಯುವ, ಸಕ್ಸಸ್​​ ಜಾತ್ರೆ ಜೊತೆ ಹರಸಿದವ್ರಿಗೆ ಧನ್ಯವಾದ ಅರ್ಪಿಸಿದೆ. ಅದ್ರ ಕಂಪ್ಲೀಟ್ ರಿಪೋರ್ಟ್​ ಇಲ್ಲಿದೆ.

ಯುವ.. ನಿನ್ನೆಯಷ್ಟೇ ತೆರೆಕಂಡ ಈ ಸಿನಿಮಾ ನಿರೀಕ್ಷೆಯಂತೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ತಿದೆ. ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದ ಪ್ರೀ- ರಿಲೀಸ್ ಇವೆಂಟ್​​ನಲ್ಲಿ ನಟ ಯುವರಾಜ್​ಕುಮಾರ್ ಏನೆಲ್ಲಾ ಡೈಲಾಗ್ಸ್ ಹೊಡೆದಿದ್ರೋ, ಅದೆಲ್ಲಾ ನಿಜವಾಗಿಸ್ತಿದ್ದಾರೆ. ಒಂದೊಂದು ಫ್ರೇಮ್​ನಲ್ಲೂ ಅವ್ರ ಹಾರ್ಡ್​ ವರ್ಕ್​, ಡೆಡಿಕೇಷನ್ ಎದ್ದು ಕಾಣಿಸ್ತಿದೆ.

ರಾಜರತ್ನ ಡಾ. ಪುನೀತ್ ರಾಜ್​ಕುಮಾರ್​ರನ್ನೇ ರೋಲ್ ಮಾಡೆಲ್ ಆಗಿ ಸ್ವೀಕರಿಸಿದ್ದ ಯುವ, ಅಕ್ಷರಶಃ ಈ ಸಿನಿಮಾದಲ್ಲಿ ಅಪ್ಪು ನೆರಳಂತೆ ಕಾಣಸಿಗ್ತಾರೆ. ಒಂದೊಂದು ಡೈಲಾಗ್​ಗೂ ಪ್ರೇಕ್ಷಕ ಹುಚ್ಚೆದ್ದು ಕುಣೀತಾನೆ. ಡ್ಯಾನ್ಸ್​ ನೋಡಿದ್ರೆ ಒಮ್ಮೆ ಕಂಪ್ಲೀಟ್ ಬಾಡಿಯನ್ನ ಶೇಕ್ ಮಾಡೇ ಮಾಡ್ತಾನೆ. ಅಷ್ಟರ ಮಟ್ಟಿಗೆ ಫೈಟ್ಸ್ & ಡ್ಯಾನ್ಸ್ ಇಂಪ್ಯಾಕ್ಟ್ ಆಗಿವೆ. ಇನ್ನು ಅಪ್ಪನ ಕಹಳೆಯ ಕಥೆ ಎಂಥವ್ರಿಗೂ ಕನೆಕ್ಟ್ ಆಗಲಿದೆ.

ಇದನ್ನೂ ಓದಿ: ನನಗೂ ಮದುವೆ ಆಗೋ ಆಸೆ.. ಮಕ್ಕಳು ಬೇಕು.. ಆದರೆ..: ವಿಜಯ್ ದೇವರಕೊಂಡ

ಮೊದಲ ದಿನವೇ ಯುವನನ್ನ ಅದ್ದೂರಿಯಾಗಿ ರಿಸೀವ್ ಮಾಡಿಕೊಂಡ ಕನ್ನಡಿಗರು, ಬಾಕ್ಸ್ ಆಫೀಸ್​​ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುವಂತೆ ಮಾಡಿದ್ದಾರೆ. ಒಬ್ಬ ಹೊಸ ಪ್ರತಿಭೆಗೆ ಇಂತಹ ದೊಡ್ಡ ಮಟ್ಟದ ಪ್ರಶಂಸೆಗಳು ಸಿಗ್ತಿರೋದು ಖುಷಿಯ ವಿಚಾರ. ಚಿತ್ರತಂಡ ಕೂಡ ಸಕ್ಸಸ್ ಪಾರ್ಟಿ ಮಾಡಿ, ಪೋಟೋ ಸಮೇತ ಕರುನಾಡ ಮಂದಿಗೆ ಕೃತಜ್ಞತೆ ತಿಳಿಸಿದೆ.

ಫ್ಯಾಮಿಲಿ ಬ್ಲಾಕ್​ಬಸ್ಟರ್ ಹಿಟ್ ಅನಿಸಿಕೊಂಡಿರೋ ಯುವ ಚಿತ್ರದಲ್ಲಿ ಕಥೆಯೇ ಇಲ್ಲ ಅಂತ ಒಂದಷ್ಟು ಮಂದಿ ಕತೆ ಹೊಡೀತಿದ್ದಾರೆ. ಆದ್ರೆ ಅದು ಪ್ರಸ್ತುತ ಸಮಾಜದ ಕೈಗನ್ನಡಿ ಅನ್ನೋದನ್ನ ಅರಿಯಬೇಕಿದೆ. ಭಾವನಾತ್ಮಕವಾಗಿ ಸಿನಿಮಾ ಕಾಡಲಿದೆ. ಸಂತೋಷ್ ಆನಂದ್​ರಾಮ್ ಕಥೆ ಬರೆದು, ಅದನ್ನ ಪ್ರಸ್ತುತ ಪಡಿಸಿರೋ ವಿಧಾನ ನಿಜಕ್ಕೂ ಸೂಪರ್ಬ್​.

ಬಡ್ಡಿ ಸಮೇತ ವಾಪಸ್ ಕೊಡ್ತೀನಿ ಅಂದಿದ್ದ ಯುವ ಅದನ್ನ ಮಾಡ್ತಿದ್ದಾರೆ. ದೊಡ್ಮನೆಯ ಪರಂಪರೆಯನ್ನ ಉಳಿಸೋ ಪವರ್​ಫುಲ್ ಹೀರೋ ಅನ್ನೋ ಬಲವಾದ ಸಂದೇಶ ಸಾರಿದ್ದಾರೆ. ಹೊಸ ಹೀರೋಗಳು ಬರದೇ ಇದ್ದರೆ ಆರೋಗ್ಯಕರ ಬೆಳವಣಿಗೆ ನಿರೀಕ್ಷೆ ಮಾಡೋಕೆ ಆಗಲ್ಲ. ಆ ನಿಟ್ಟಿನಲ್ಲಿ ಯುವ ಸ್ಯಾಂಡಲ್​ವುಡ್​ನ ಭವಿಷ್ಯದ ಸೂಪರ್ ಸ್ಟಾರ್ ಅನ್ನೋ ಹಿಂಟ್ ಸಿಕ್ಕಿದೆ. ಗಂಧದಗುಡಿಗೆ ಇದಕ್ಕಿಂತ ಖುಷಿಯ ವಿಚಾರ ಮತ್ತೇನಿದೆ ಅಲ್ಲವೇ..?

ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES