Friday, May 3, 2024

180 ಉದ್ಯೋಗಿಗಳನ್ನು ವಜಾಗೊಳಿಸಿದ ಏರ್‌ ಇಂಡಿಯಾ

ಮುಂಬೈ: ಟಾಟಾ ಗ್ರೂಪ್‌ ಒಡೆತನದ, ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಏರ್‌ ಇಂಡಿಯಾ ಕಂಪನಿಯು 180 ಸಿಬ್ಬಂದಿಯನ್ನು ವಜಾಗೊಳಿಸಿದೆ.

ಕಳೆದ ಕೆಲವು ವಾರಗಳಲ್ಲಿಯೇ ಏರ್‌ ಇಂಡಿಯಾ ಸಂಸ್ಥೆಯು 180 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದು, ಇದಕ್ಕೆ ಕೆಲ ಕಾರಣಗಳನ್ನೂ ನೀಡಿದೆ. ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಲ್ಲಿ ಜಗತ್ತಿನ ನೂರಾರು ಕಂಪನಿಗಳು ನೌಕರರನ್ನು ವಜಾಗೊಳಿಸಿದರೂ ಟಾಟಾ ಗ್ರೂಪ್‌ ಮಾತ್ರ ಹೆಚ್ಚಿನ ನೌಕರರನ್ನು ವಜಾಗೊಳಿಸಿರಲಿಲ್ಲ. ಈಗ ದಿಢೀರನೆ 180 ನೌಕರರನ್ನು ವಜಾಗೊಳಿಸಿದೆ.

ನಷ್ಟದಲ್ಲಿರುವ ಏರ್ ಇಂಡಿಯಾವನ್ನು ಜನವರಿ 2022 ರಲ್ಲಿ ಟಾಟಾ ಗ್ರೂಪ್ ಸ್ವಾಧೀನಪಡಿಸಿಕೊಂಡಿತು ಮತ್ತು ಅಂದಿನಿಂದ, ವ್ಯವಹಾರ ಮಾದರಿಯನ್ನು ಸುಗಮಗೊಳಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಏರ್ ಇಂಡಿಯಾ ವಕ್ತಾರರು ಶುಕ್ರವಾರ ಫಿಟ್‌ಮೆಂಟ್ ಪ್ರಕ್ರಿಯೆಯ ಭಾಗವಾಗಿ, ವಿಮಾನದಲ್ಲಿ ಕಾರ್ಯನಿರ್ವಹಿಸದ ವಿಭಾಗಗಳಲ್ಲಿದ್ದ ಉದ್ಯೋಗಿಗಳಿಗೆ ಸಾಂಸ್ಥಿಕ ಅಗತ್ಯತೆಗಳು ಮತ್ತು ವೈಯಕ್ತಿಕ ಅರ್ಹತೆಯ ಆಧಾರದ ಮೇಲೆ ಪಾತ್ರಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

 

ಸ್ವಯಂ ನಿವೃತ್ತಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳದಿರುವುದು ಹಾಗೂ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳದ ಕಾರಣದಿಂದಾಗಿ 180 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಏರ್‌ ಇಂಡಿಯಾ ತಿಳಿಸಿದೆ. ವಿಮಾನದಲ್ಲಿ ಹಾರಾಟ ನಡೆಸದ ಸಿಬ್ಬಂದಿಯನ್ನು ಮಾತ್ರ ವಜಾಗೊಳಿಸಲಾಗಿದೆ. ವಿಮಾನದ ಪೈಲಟ್‌ಗಳು ಅಥವಾ ಗಗನಸಖಿಯರನ್ನು ವಜಾಗೊಳಿಸಿಲ್ಲ ಎಂದು ಕಂಪನಿಯ ಮೂಲಗಳು ತಿಳಿಸಿವೆ.

RELATED ARTICLES

Related Articles

TRENDING ARTICLES