Tuesday, May 21, 2024

ಧನುಷ್-ರಶ್ಮಿಕಾ ಕಾಂಬಿನೇಷನ್ ಚಿತ್ರಕ್ಕೆ ಟೈಟಲ್ ಫಿಕ್ಸ್

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ಧನುಷ್ ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ಇದೀಗ ಟೈಟಲ್ ಫಿಕ್ಸ್ ಆಗಿದೆ.

ಹೌದು, ಶಿವರಾತ್ರಿಯಂದು ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದು,ಚಿತ್ರಕ್ಕೆ ಕುಬೇರ ಎಂದು ಟೈಟಲ್ ಇಡಲಾಗಿದೆ.ಈ ಚಿತ್ರವು ಕನ್ನಡವೂ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ತಯಾರು ಆಗಲಿದೆ.

ಸಿನಿಮಾದಲ್ಲಿ ಧನುಶ್​ ರದ್ದು ಭಿಕ್ಷುಕನ ಪಾತ್ರವಂತೆ. ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಇತ್ತೀಚೆಗಷ್ಟೆ ಈ ಸಿನಿಮಾದ ಚಿತ್ರೀಕರಣ ತಿರುಪತಿಯಲ್ಲಿ ನಡೆಯಿತು. ಸಿನಿಮಾದ ಟೈಟಲ್ ಟೀಸರ್ ಸಹ ಬಿಡುಗಡೆ ಆಗಿದ್ದು, ಶಿವ ಭಿಕ್ಷೆ ಬೇಡುತ್ತಿರುವ ಚಿತ್ರದ ಮುಂದೆ ಧನುಶ್ ನಿಂತಿರುವ ದೃಶ್ಯವನ್ನು ಟೀಸರ್​ನಲ್ಲಿ ತೋರಿಸಲಾಗಿದೆ. ಭಿಕ್ಷೆ ಬೇಡುತ್ತಿರುವ ಶಿವನಿಗೆ ಧನುಶ್​ರ ಪಾತ್ರವನ್ನು ಹೋಲಿಸಲಾಗಿದೆ.

ಸಿನಿಮಾದಲ್ಲಿ ಧನುಶ್ ಹಾಗೂ ರಶ್ಮಿಕಾ ಮಾತ್ರವೇ ಅಲ್ಲದೆ ತೆಲುಗಿನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಸಹ ಇದ್ದಾರೆ.ಈ ಸಿನಿಮಾವನ್ನು ತೆಲುಗಿನ ಜನಪ್ರಿಯ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದಾರೆ.

 

 

RELATED ARTICLES

Related Articles

TRENDING ARTICLES