Tuesday, May 21, 2024

ಮನೆಯೊಳಗೆ ಬಂದ ಚಿರತೆಯನ್ನು ಬಂಧಿಸಿ ಗ್ರೇಟ್​ ಎಸ್ಕೇಪ್ ಆದ ಬಾಲಕ​!

ಮಹಾರಾಷ್ಟ್ರ: ಮನೆಯೊಳಗೆ ಏಕಾಏಕಿ ಚಿರತೆ ನುಗ್ಗಿದರೆ ಹೇಗಾಗಬೇಡ ನೀವೇ ಯೋಚಿಸಿ, ಅಂತದ್ದೇ ಪ್ರಕರಣವೊಂದು ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ನಡೆದಿದೆ.

ಬಾಲಕನೋರ್ವ ಮನೆಯೊಳಗೆ ಒಬ್ಬನೇ ಮೊಬೈಲ್ ಹಿಡಿದು ಆಟವಾಡುತ್ತಿದ್ದಾಗ ಚಿರತೆಯೊಂದು ಪ್ರವೇಶಿಸಿದೆ, ಇದನ್ನು ಕಂಡ ಬಾಲಕ ಒಂದು ಚೂರೂ ಹೆದರದೆ ಚಾಣಾಕ್ಷತನದಿಂದ ಚಿರತೆಯನ್ನು ಮನೆಯೊಳಗೆ ಬಂಧಿಸಿದ್ದಾನೆ. ಬಾಲಕ ಮನೆಯೊಳಗೆ ಸೋಫಾದ ಮೇಲೆ ಕುಳಿತು ಮೊಬೈಲ್ ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ. ಈ ವೇಳೆ ಚಿರತೆ ನೇರವಾಗಿ ಮನೆಯೊಳಗೆ ಪ್ರವೇಶಿಸಿದೆ. ಆದರೆ ಬಾಗಿಲ ಬಳಿಯಲ್ಲೇ ಇದ್ದ ಬಾಲಕನನ್ನು ನೋಡಲಿಲ್ಲ. ಹಾಗಾಗಿ ನೇರವಾಗಿ ಒಳಗಿನ ಕೊಠಡಿಗೆ ಪ್ರವೇಶ ಮಾಡಿದೆ. ಇದನ್ನು ಕಂಡ ಬಾಲಕ ಚಿರತೆ ಒಳಗಿನ ಕೊಠಡಿಗೆ ಪ್ರವೇಶ ಮಾಡುತ್ತಿದ್ದಂತೆ ನಿಧಾನವಾಗಿ ಮನೆಯಿಂದ ಹೊರ ಬಂದ ಬಾಲಕ ಮನೆಯ ಮುಖ್ಯ ಬಾಗಿಲನ್ನು ಮುಚ್ಚಿದ್ದಾನೆ.

ಇನ್ನೂ ಓದಿ: ಮಗುವನ್ನು ಅಪಹರಿಸಲು ಯತ್ನ: ಹಿಗ್ಗಾ ಮುಗ್ಗಾ ಥಳಿತ

ಆ ಬಳಿಕ ನೆರೆಹೊರೆಯವರಲ್ಲಿ ವಿಚಾರ ತಿಳಿಸಿದ್ದಾನೆ. ಕೂಡಲೇ ಎಚ್ಚೆತ್ತ ಅಕ್ಕಪಕ್ಕದವರು ಮನೆಯ ಬಳಿ ಬಂದು ಬಾಗಿಲು ಭದ್ರಪಡಿಸಿದ್ದಾರೆ. ಆ ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಅಪಾಯದ ಸಂದರ್ಭದಲ್ಲಿ ಬಾಲಕ ತೋರಿದ ಚಾಣಾಕ್ಷತನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

RELATED ARTICLES

Related Articles

TRENDING ARTICLES