Friday, September 20, 2024

ಜಾತಿಗಣತಿ ವರದಿ ವೈಜ್ಞಾನಿಕವಾಗಿ ನಡೆದಿಲ್ಲ : ವಿನಯ್ ಕುಲಕರ್ಣಿ

ಬೆಂಗಳೂರು : ಜಾತಿಗಣತಿಗೆ ನಮ್ಮ ವಿರೋಧ ಇಲ್ಲ. ಆದರೆ, ಈ ವರದಿ ವೈಜ್ಞಾನಿಕವಾಗಿ ನಡೆದಿಲ್ಲ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲಾ ವರದಿ ನೋಡಿದ್ದೇವೆ, ನಮಗೆ ಗೊತ್ತಿದೆ ಎಂದು ತಿಳಿಸಿದರು.

ವರದಿ ಸ್ವೀಕಾರ ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯರಿಗೆ ಈ ಹಿಂದೆಯೇ ಒತ್ತಾಯಿಸಿದ್ದೇವೆ. ಈಗಲೂ ಒತ್ತಾಯ ಮಾಡ್ತೀವಿ. ಲಿಂಗಾಯತ ಸಮುದಾಯದ ಒಳ ಪಂಗಡಗಳನ್ನು ಸೇರಿಸಿಲ್ಲ. ಬೇರೆ ಸಮುದಾಯಗಳ ಬಗ್ಗೆ ನನಗೆ ಗೊತ್ತಿಲ್ಲ. ನಾವೆಲ್ಲಾ ಕೂತು ಚರ್ಚೆ ಮಾಡಿ ನಿರ್ಧಾರ ಮಾಡ್ತೀವಿ ಎಂದು ಹೇಳಿದರು.

ಜಾತಿಗಣತಿ ಸ್ವೀಕಾರ ವಿಚಾರದ ಬಗ್ಗೆ ಮಾಗಡಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಎಲ್ಲಾ ಸಮುದಾಯಕ್ಕೂ ಸಮಾನ ಅವಕಾಶ ಸಿಗಬೇಕು. ಆದರೆ, ಈ ಜನಗಣತಿಯಲ್ಲಿ ಕೆಲ ದೋಷಗಳಿವೆ. ನಾಲ್ಕು ಜನರ ಮನೆಗೆ ಹೋಗಿದ್ರೆ, ಇನ್ನೂ ಕೆಲವರ ಮನೆಗೆ ಹೋಗಿಲ್ಲ. ನಮ್ಮ ಸಂಬಂಧಿಕರ ಹಲವು ಮನೆಗಳಿಗೆ ಬಂದೇ ಇಲ್ಲ. ಹೀಗಾಗಿ, ಈ ರೀತಿಯ ಕೆಲ ಗೊಂದಲಗಳಿವೆ ಎಂದು ತಿಳಿಸಿದರು.

ವೈಜ್ಞಾನಿಕ ವರದಿ ಮಾಡಿ ಬಳಿಕ ಸ್ವೀಕರಿಸಬೇಕು

ವೀರಶೈವ ಲಿಂಗಾಯತ ಜಾತಿಯಲ್ಲಿ ಅನೇಕ ಉಪ ಪಂಗಡಗಳಿವೆ‌. 103 ಉಪ ಪಂಗಡಳಿರುವುದರಿಂದ ಅಧ್ಯಯನ ಮಾಡಬೇಕು. ಇದರ ವೈಜ್ಞಾನಿಕ ವರದಿ ಮಾಡಿ ಬಳಿಕ ಸ್ವೀಕರಿಸಬೇಕು. ಇದರಲ್ಲಿ ನಾವು ರಾಜಕೀಯ ಮಾಡಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

RELATED ARTICLES

Related Articles

TRENDING ARTICLES