Sunday, May 12, 2024

ಪಶು ಆಸ್ಪತ್ರೆಯ ಜಾಗದಲ್ಲಿ ಮೌಲಾನಾ ಆಜಾದ್ ಶಾಲೆ: ಜನರ ವಿರೋಧ

ಬೆಂಗಳೂರು : ಚಾಮರಾಜ ಪೇಟೆಯಲ್ಲಿನ ಸರ್ಕಾರಿ ಪಶುವೈದ್ಯ ಆಸ್ಪತ್ರೆಯನ್ನು ಮುಚ್ಚಿ, ಆ ಸ್ಥಳದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ಪ್ರಾರಂಭಿಸಲು ಸರ್ಕಾರ ಆದೇಶ ನೀಡಿದೆ.

ಚಾಮರಾಜಪೇಟೆ ವಿಧಾನಸಭಾಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ 2 ಎಕರೆ ಸರ್ಕಾರಿ ಜಾಗದ ಮೇಲೆ ಹಲವು ಪ್ರಭಾವಿಗಳಿಗೆ ಕಣ್ಣಿಟ್ಟಿದ್ದರು. ಅದರಲ್ಲೂ ಈ ಜಾಗವನ್ನು ಪಡೆಯಲು ವಸತಿ ಸಚಿವ ಜಮೀರ್ ಅಹಮದ್ ಹಿಂದಿನಿಂದಲೂ ಪ್ರಯತ್ನಿಸುತ್ತಿದ್ದರು. ಜಮೀರ್ ಅಹಮದ ಅವರ ಒತ್ತಡಕ್ಕೆ ಮಣಿದ ಸರ್ಕಾರ, ಪಶುವೈದ್ಯ ಆಸ್ಪತ್ರೆಗೆ ಸೇರಿದ 2 ಎಕರೆ ಪ್ರದೇಶವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಇಂದು ಕನ್ನಡ ನಾಮಫಲಕ ಹಾಕದಿದ್ರೆ ಅಂಗಡಿ ಬಂದ್​: BBMP

ಪಶುಪಾಲನ ಮತ್ತು ಪಶುವೈದ್ಯ ಇಲಾಖೆಗೆ ಸೇರಿದ ಈ ಜಾಗದಲ್ಲಿ ಪ್ರಸ್ತುತ ಪಶುವೈದ್ಯ ಆಸ್ಪತ್ರೆ ಇದ್ದು ಚಾಮರಾಜಪೇಟೆ ಸುತ್ತಮುತ್ತಲ ಪ್ರದೇಶದಲ್ಲಿನ ಪಶುಪಾಲಕರಿಗೆ ಅನುಕೂಲವಾಗಿತ್ತು. ಇದೀಗ ಇಲ್ಲಿರುವ ಪಶು ಆಸ್ಪತ್ರೆಯನ್ನು ಬೆಂಗಳೂರಿನ ಹೊರಭಾಗಕ್ಕೆ ಸ್ಥಳಾಂತರಿಸಿ, ಆ ಜಾಗದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆಯನ್ನು ನಿರ್ಮಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಸರ್ಕಾರದ ಈ ನಿರ್ಧಾರವನ್ನು ಸ್ಥಳೀಯರು ತೀವ್ರವಾಗಿ ವಿರೋಧಿಸಿದ್ದಾರೆ.

RELATED ARTICLES

Related Articles

TRENDING ARTICLES