Friday, September 20, 2024

ಹರಿಪ್ರಸಾದ್ ಅವರಂಥ ದೇಶ ವಿರೋಧಿಗಳು ಕಾಂಗ್ರೆಸ್​ನಲ್ಲಿ ಹಾಸುಹೊಕ್ಕಾಗಿದ್ದಾರೆ : ಬಿಜೆಪಿ

ಬೆಂಗಳೂರು : ಬಿ.ಕೆ. ಹರಿಪ್ರಸಾದ್ ಅವರಂಥ ದೇಶ ವಿರೋಧಿ ಮನಸ್ಥಿತಿಗಳು ಕಾಂಗ್ರೆಸ್‌ನ ಎಲ್ಲಾ ಹಂತಗಳಲ್ಲೂ ಹಾಸುಹೊಕ್ಕಾಗಿದೆ ಎಂದು ಬಿಜೆಪಿ ಟೀಕಿಸಿದೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, ಪಾಕಿಸ್ತಾನದ ಬಗ್ಗೆ ಕಾಂಗ್ರೆಸ್‌ ಒಲವು ಮತ್ತು ನಿಲುವು ಏನು ಎಂಬುದನ್ನು ಬಿ.ಕೆ. ಹರಿಪ್ರಸಾದ್‌ ಸದನದಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ಕುಟುಕಿದೆ.

ಬಿಜೆಪಿ ಪಾಲಿಗಷ್ಟೇ ಪಾಕಿಸ್ತಾನ ಶತ್ರುರಾಷ್ಟ್ರ. ಕಾಂಗ್ರೆಸ್​ ನಾಯಕರ ಪಾಲಿಗೆ ಪಾಕಿಸ್ತಾನ ನೆರೆಯ ರಾಷ್ಟ್ರ. ಈ ಮೂಲಕ ಜವಾಹರಲಾಲ್‌ ನೆಹರೂ-ಮೊಹಮ್ಮದ್‌ ಆಲಿ ಜಿನ್ನಾ ಅವರ ಆಪ್ತ ಸಂಬಂಧ ಈಗಿನ ತಲೆಮಾರಿಗೂ ಮುಂದುವರಿದಿರುವುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಛೇಡಿಸಿದೆ.

ಕಾಂಗ್ರೆಸ್​ ದೇಶ ದ್ರೋಹಿಗಳ ಪರ ನಿಂತಿದೆ

ವಿಧಾನಸೌಧದಲ್ಲೇ ಪಾಕಿಸ್ಥಾನ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ಪರ ನಿಂತಿದೆ. ಅಲ್ಲದೆ ನಾಲ್ಕು ಬಾರಿ ಭಾರತದ ಮೇಲೆ ಯುದ್ಧ ಸಾರಿದ ಪಾಕಿಸ್ಥಾನವನ್ನು ಶತ್ರು ರಾಷ್ಟ್ರವಲ್ಲ ಎನ್ನುವ ಕಾಂಗ್ರೆಸ್ಸಿಗರ ಮನಸ್ಥಿತಿಯನ್ನು ನಿಂದಿಸಲು ಹೊರಟರೆ ಪದಗಳ ಅಭಾವವೇ ಉಂಟಾಗುತ್ತದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

RELATED ARTICLES

Related Articles

TRENDING ARTICLES