Friday, May 17, 2024

ಕನ್ನಡ ಕಡ್ಡಾಯಕ್ಕೆ ರಾಜ್ಯಪಾಲರ ಅಂಕಿತ: ಮಾ.1ರ ಬಳಿಕ ಮತ್ತೆ ಹೋರಾಟದ ಎಚ್ಚರಿಕೆ ನೀಡಿದ ಕರವೇ

ಬೆಂಗಳೂರು: ಉದ್ಯಮಗಳಲ್ಲಿನ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸುವ ವಿಧಾನಮಂಡಲ ಅಧಿವೇಶನದಲ್ಲಿ ಅನುಮೋದನೆ ಪಡೆಯಲಾಗಿದ್ದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ 2024ಕ್ಕೆ ಸಂಬಂಧಿಸಿದಂತೆ ರಾಜ್ಯಪತ್ರ ಪ್ರಕಟಿಸಲಾಗಿದೆ.

ಕನ್ನಡ ನಾಮಫಲಕ ಕಡ್ಡಾಯಗೊಳಿಸುವ ಸಂಬಂಧ ಕಳೆದ ತಿಂಗಳು ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ನಂತರ ಕನ್ನಡ ನಾಮಫಲಕ ಅಳವಡಿಕೆಯನ್ನು ಕಾನೂನು ಬದ್ಧ ವಾಗಿಸಲು ಫೆ.13ರಂದು ವಿಧಾನಸಭೆಯಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ 2024 ಮಂಡಿಸಿ ಅನುಮೋದನೆ
ಪಡೆಯಲಾಗಿತ್ತು. ಇದೀಗ ತಿದ್ದುಪಡಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ರಾಜ್ಯಪತ್ರ ಪ್ರಕಟಿಸಲಾಗಿದೆ.

ತಿದ್ದುಪಡಿ ವಿಧೇಯಕದಿಂದಾಗಿ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಮತ್ತು ಮಂಜೂರಾತಿ ಪಡೆದ ವಾಣಿಜ್ಯ, ಕೈಗಾರಿಕೆ, ಟ್ರಸ್ಟ್‌ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನರಂಜನಾ ಕೇಂದ್ರಗಳು, ಹೋಟೆಲ್‌ಗಳು ಸೇರಿದಂತೆ ಇನ್ನಿತರ ಉದ್ದಿಗೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಶೇ. 60ರಷ್ಟು ಪ್ರದರ್ಶಿಸಬೇಕು ಹಾಗೂ ನಾಮಫಲಕದ ಮೇಲ್ಬಾಗದಲ್ಲಿ ಅದನ್ನು ಅಳವಡಿಸಬೇಕಾಗುತ್ತದೆ.

ಇದನ್ನೂ ಓದಿ: ಬಡ ಹಳ್ಳಿ ಯುವತಿ ಈಗ ನ್ಯಾಯಾಧೀಶೆ!: ಸಾಧನೆಗೆ ಜನತೆ ಮೆಚ್ಚುಗೆ

60% ಕನ್ನಡ ನಾಮಪಲಕ ಕಡ್ಡಾಯ ಅಳವಡಿಕೆ ಎರಡು ದಿನ‌ ಬಾಕಿ! ಮತ್ತೆ ಹೋರಾಟಕ್ಕೆ ಕರವೇ ತಯಾರಿ:

ಉದ್ಯಮಿಗಳು ತಮ್ಮ ಅಂಗಡಿ ಮುಂಗಟ್ಟುಗಳ ಮುಂದೆ ರಾಜ್ಯದ ಅಧಿಕೃತ ಭಾಷೆ ಕನ್ನಡಕ್ಕೆ  ಶೇ.60% ಮೀಸಲಿಟ್ಟು ನಾಮಫಕಗಳನ್ನು ಅಳವಡಿಸಲು ಇನ್ನು ಎರಡು ದಿನಗಳಷ್ಟೆ ಬಾಕಿ ಇದೆ.

ಕನ್ನಡ ನಾಮಫಲಕಗಳ ಅಳವಡಿಕೆಗಾಗಿಯೇ ಕರವೇ ಹೋರಾಟ ನಡೆಸಿದ ಬೆನ್ನಲೇ ಕನ್ನಡ ನಾಮ ಫಲಕ ಅಳವಡಿಸಲು ಫೆಬ್ರವರಿ 28ರ ವರೆಗೆ ಕರವೇ ಗಡುವು ನೀಡಿತ್ತು. ಎಚ್ಚರಿಕೆ ಕರೆಗೆ ಒಗೊಟ್ಟ ಕೆಲ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂಬಾಗದಲ್ಲಿ ಕನ್ನಡ ನಾಮ ಫಲಕಗಳ ಆಳವಡಿಕೆ ಮಾಡಿದ್ದಾರೆ.

ಆದರೇ, ಇನ್ನು ಹಲವು ಅಂಗಡಿಗಳ ಮಾಲೀಕರು ಎಚ್ಚರಿಕೆ ನೀಡಿದರು ಬಗ್ಗದೇ ತಮ್ಮ ಅಂಗಡಿ ಮುಂಗಟ್ಟುಗಳ ಮುಂದೆ ಅನ್ಯ ಭಾಷೆಗಳ ನಾಮ ಫಲಕಗಳನ್ನು ಮುಂದುವರೆಸಿದ್ದಾರೆ. ಹೋರಾಟದ ಬಿಸಿ ತಟ್ಟಿದರು ಉದ್ದಟತನ ಮೆರೆಯುತ್ತಿದ್ದಾರೆ. ನಾಳೆಯ ಒಳಗೆ ಕನ್ನಡ ನಾಮಫಲಕ ಅಳವಡಿಸದೆ ಹೋದರೆ ಮತ್ತೆ ಹೋರಾಟದ ಎಚ್ಚರಿಕೆ ನೀಡಿದ ಕರವೇ, ಮಾರ್ಚ್‌ 1ರ ಬಳಿಕ ಬಿಸಿ ಮುಟ್ಟಿಸಲು ಕರವೇ ಸಜ್ಜಾಗಿದೆ.

RELATED ARTICLES

Related Articles

TRENDING ARTICLES