Thursday, September 19, 2024

ಬಾಂಬ್ ಸ್ಫೋಟ, ಭೂಕಂಪ ಆಗುತ್ತೆ, ಧಾರ್ಮಿಕ ಮುಖಂಡನ ಸಾವೂ ಆಗುತ್ತೆ : ಕೋಡಿ ಶ್ರೀ ಭವಿಷ್ಯ

ಕೋಲಾರ : ಬಾಂಬ್ ಸ್ಫೋಟ, ಭೂಕಂಪ ಆಗುತ್ತೆ. ಅಲ್ಲದೇ ಮತಾದಂತೆ‌ ಹೆಚ್ಚಾಗುತ್ತದೆ, ಧಾರ್ಮಿಕ ಮುಖಂಡನ ಸಾವು ಆಗುತ್ತದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಕೋಲಾರದ ಜಿಲ್ಲೆ‌ ಮಾಲೂರಿನಲ್ಲಿ ಮಾತನಾಡಿರುವ ಕೋಡಿ ಸ್ವಾಮೀಜಿ, ಜಾಗತಿಕ ಮಟ್ಟದಲ್ಲಿ ತೊಂದರೆ ಇದೆ. ಬೆಂಕಿ ಹಾವಳಿ, ನೀರಿನ ಹಾವಳಿ, ಯುದ್ದ‌ ಆಗುತ್ತೆ. ಅನೇಕ‌ ಸಾವು ನೋವುಗಳು ಆಗುತ್ತೆ ಎಂದು ಹೇಳಿದ್ದಾರೆ.

ಉಚಿತ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ನಡೆಯುತ್ತಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ನನ್ನಗಿಂತ ನಿಮಗೆ ಚೆನ್ನಾಗಿ ಗೊತ್ತು. ರಾಷ್ಟ್ರ ರಾಜಕಾರಣ ಸಹ ಯುಗಾದಿ ಮೇಲೆ ಗೊತ್ತಾಗುತ್ತದೆ. ಯುಗಾದಿ ನಂತರ‌ ಭವಿಷ್ಯ ಬರುವುದು. ಒಂದು ತಿಂಗಳು ಕಳೆದ ಮೇಲೆ ಮಳೆ, ಬೇಳೆ, ರಾಜಕೀಯ, ದುಡಿಮೆ, ವ್ಯಾಪಾರ ಎಲ್ಲಾ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

ಯುಗಾದಿ ಬಳಿಕ ಒಳ್ಳೆಯ ಮಳೆ ಹಾಗೂ ಬೆಳೆ

ಯುಗಾದಿ ಕಳೆದ ಬಳಿಕ ರಾಜ್ಯದಲ್ಲಿ ಒಳ್ಳೆಯ ಮಳೆ ಹಾಗೂ ಬೆಳೆಯಾಗುತ್ತದೆ ಎಂದು ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ. ರಾಜ್ಯ ರಾಜಕೀಯ ಬಗ್ಗೆ ಯುಗಾದಿ ಕಳೆದ ನಂತರ ಹೇಳುವೆ, ಇನ್ನು ಸಾಕಷ್ಟು ಸಮಯವಿದೆ ಎಂದು ಶಿವಾನಂದ ಶಿವಯೋಗಿ ಸ್ವಾಮೀಜಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES