Thursday, May 2, 2024

ಮುಸ್ಲಿಮರು ಕೂಡ ಮೋದಿಗೆ ವೋಟು ಹಾಕ್ತಾರೆ : ಕೆ.ಎಸ್. ಈಶ್ವರಪ್ಪ

ನವದೆಹಲಿ : ರಾಮಮಂದಿರವನ್ನು ಕಟ್ಟಿರುವ ಜಾಗ ಸರಿಯಾಗಿಲ್ಲ ಎಂದಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್​ಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ರಾಷ್ಟ್ರೀಯ ಮಂದಿರ. ಕಾಂಗ್ರೆಸ್​ ನಾಯಕರು ರಾಮಮಂದಿರ ಕಟ್ಟಿದ ಮೇಲೆ ಏನೇನು ಹೇಳ್ತಾರೆ. ದೇಶದ 140 ಕೋಟಿ ಜನರನ್ನು ಒಟ್ಟಿಗೆ ಸೇರಿಸುವ ಮಂದಿರ ರಾಮಮಂದಿರ ಎಂದು ತಿಳಿಸಿದ್ದಾರೆ.

ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರ ಹೆಸರು ಹೇಳಿಕೊಂಡು ಕಾಂಗ್ರೆಸ್​ನವರು ಅಧಿಕಾರಕ್ಕೆ ಬಂದರು. ಆದ್ರೆ, ಅವರಿಗೆ ನ್ಯಾಯ ಸಿಕ್ಕಿರಲಿಲ್ಲ. ಮೋದಿ ಪ್ರಧಾನಿಯಾದ ಬಳಿಕ ಈ ಮೂರು ವರ್ಗಕ್ಕೆ ನ್ಯಾಯ ಸಿಗ್ತಿದೆ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರು ಕೂಡ ಬಿಜೆಪಿಗೆ ವೋಟು ಹಾಕ್ತಾರೆ ಎಂದು ಹೇಳಿದ್ದಾರೆ.

28ಕ್ಕೆ 28 ಸ್ಥಾನ ಗೆಲ್ಲಲು ನಮಗೆ ಸ್ಫೂರ್ತಿ

ಇದೊಂದು ಐತಿಹಾಸಿಕ ಅಧಿವೇಶನವಾಗಿದೆ. ಜೆ.ಪಿ. ನಡ್ಡಾ, ಅಮಿತ್ ಶಾ ಹಾಗೂ ಪ್ರಧಾನಿ ಮೋದಿಯವರ ಭಾಷಣ ಕಾರ್ಯಕರ್ತರಿಗೆ ಪ್ರೇರಣೆ ಕೊಟ್ಟಿದೆ. 10 ವರ್ಷದಲ್ಲಿ ಸಂಘಟನೆ ಅಭಿವೃದ್ಧಿ, ಬಿಜೆಪಿ ಗೆಲುವು, ಕೇಂದ್ರ ಸರ್ಕಾರದ ಕೆಲಸಗಳು ಅವರ ಭಾಷಣಗಳಲ್ಲಿ ಇತ್ತು. ಈ ಬಾರಿ ಕರ್ನಾಟಕದಲ್ಲಿ 28ಕ್ಕೆ 28 ಸ್ಥಾನ ಗೆಲ್ಲಲು ನಮಗೆ ಸ್ಫೂರ್ತಿ ಕೊಟ್ಟಿದೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES