ಬೆಂಗಳೂರು: ಏರ್ಪೋರ್ಟ್ ನಿಂದ ಬೆಂಗಳೂರಿನ ಯಾವುದೇ ಜಾಗಕ್ಕೆ ಸಂಚರಿಸಿದರೂ ಐದು ಸಾವಿರೂ ಗಳನ್ನು ಚಾರ್ಜ್ ಮಾಡಿ ವಸೂಲಿ ಮಾಡುತ್ತಿದ್ದ ಓಲಾ ಡ್ರೈವರ್ ನನ್ನು ಏರ್ಪೋರ್ಟ್ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಭರತ್. ಬಂಧಿತ ಡ್ರೈವರ್, ರಾತ್ರಿ ವೇಳೆ ತನ್ನ ಕಾರನ್ನು ಬಾಡಿಗೆಗೆ ಓಡಿಸಲು ಇಳಿಯುತ್ತಿದ್ದ ಭರತ್, ಆ್ಯಪ್ ಮೂಲಕ ಬುಕ್ ಆಗುತ್ತಿದ್ದ ಪ್ಯಾಸೆಂಜರ್ಗಳನ್ನು ಪಿಕಪ್ ಮಾಡುವ ವೇಳೆ ಇನ್ನೇನು ಪ್ಯಾಸೆಂಜರ್ಗಳು ಕಾರು ಹತ್ತುವ ಸಮಯಕ್ಕೆ ಆ್ಯಪ್ ನಲ್ಲಿ ಟ್ರಿಪ್ ಕ್ಯಾನ್ಸಲ್ ಮಾಡುತ್ತಿದ್ದ, ನಂತರ ಅನುಮಾನ ಬಾರದಂತೆ ಓಟಿಪಿ ಕೇಳಿ ಸುಮ್ಮನಾಗುತ್ತಿದ್ದ.
ಇದನ್ನೂ ಓದಿ: ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ : ಮಾಜಿ ಪಾಲಿಕೆ ಸದಸ್ಯನ ವಿರುದ್ದ ದೂರು!
ಪ್ರಯಾಣಿಕರನ್ನು ಅವರು ಹೇಳಿದ ಜಾಗಕ್ಕೆ ಬಿಟ್ಟ ಬಳಿಕ, ಮೊದಲೇ ತೆಗೆದಿಟ್ಟುಕೊಂಡಿದ್ದ 5194 ರೂಗಳ ಚಾರ್ಚ್ ನ ಸ್ಕ್ರೀನ್ ಶಾಟ್ ತೋರಿಸುತ್ತಿದ್ದ, ಬೆಲೆ ನೋಡಿ ಪ್ರಶ್ನಿಸುತ್ತಿದ್ದ ಪ್ರಯಾಣಿಕರನ್ನು ದುಡ್ಡು ಕೊಡಲೇ ಬೇಕು, ಏನಾದರೂ ಸಮಸ್ಯೆ ಇದ್ದರೇ ಕಸ್ಟಮರ್ ಕೇರ್ಗೆ ಕರೆ ಮಾಡಿ ಕೇಳಿಕೊಳ್ಳಿ ಎನ್ನುತ್ತಿದ್ದ. ರಾತ್ರಿ ವೇಳೆ ಕಸ್ಟಮರ್ ಕೇರ್ ಕೆಲಸ ಮಾಡುವುದಿಲ್ಲ ಎಂದು ತಿಳಿಯದ ಪ್ರಯಾಣಿಕರು ಕರೆ ಮಾಡಿದರೂ ಪ್ರಯೋಜನವಾಗುತ್ತಿರುಲಿಲ್ಲ, ಪ್ರಯಾಣಿಕರ ಜೊತೆ ಜಗಳವಾಡುತ್ತಿದ್ದ, ಬೇರೆ ದಾರಿ ತಿಳಿಯದೇ ಹಣ ಪ್ರಯಾಣಿಕರು ಹಣ ಕೊಟ್ಟು ಹೋಗುತ್ತಿದ್ದರು.
ಆರೋಪಿ ಭರತ್ ವಿರುದ್ದ ಆರೋಪಗಳು ಕೇಳಿಬಂದ ಹಿನ್ನೆಲೆ ಏರ್ಪೋರ್ಟ್ ಪೊಲೀಸರಿಂದ ಇದೀಗ ಆರೋಪಿ ಭಾರತ್ ಗೆ ಹುಡುಕಾಟ ನಡೆಯುತ್ತಿದೆ.