Sunday, December 22, 2024

ಬುಲ್ ಡಾಗ್​ ಮೇಲೆ ಚಿರತೆ ದಾಳಿ!

ಹೊಸಕೋಟೆ : ತೋಟದಲ್ಲಿ ಕಟ್ಟಿಹಾಕಿದ್ದ ರೆಡ್​ ಬುಲ್​ ಡಾಗ್​ ಮೇಲೆ ಚಿರತೆಯೊಂದು ದಾಳಿ ಮಾಡಿ ತಿಂದು ಹೋಗಿರುವ ಘಟನೆ ಹೊಸಕೋಟೆ ತಾಲೂಕಿನ ಹಲಸಿಕ ಕಾಯಿಪುರ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಹಾಸನದಲ್ಲಿ ಜೆಡಿಎಸ್‌ ಗೆಲ್ಲಬೇಕು!- ಹೆಚ್​.ಡಿ ಕುಮಾರಸ್ವಾಮಿ

ಗ್ರಾಮದ ರೈತ ರಾಮಾಂಜಿ ಎನ್ನುವವರಿಗೆ ಸೇರಿದ ಸುಮಾರು 50 ಸಾವಿರ ಬೆಲೆ ಬಾಳುವ ಬುಲ್​ ಡಾಗ್​  ಇದಾಗಿದ್ದು ತೋಟದಲ್ಲಿ ಹಾಕಲಾಗಿದ್ದ ಬೀನ್ಸ್​ ಟಮೋಟ ಕಾವಲಿಗಾಗಿ ನಾಯಿಯನ್ನು ತೋಟದಲ್ಲಿ ಕಟ್ಟಿ ಹಾಕಲಾಗಿತ್ತು, ಕಳೆದ ರಾತ್ರಿ ಗ್ರಾಮದ ಪಕ್ಕದಲ್ಲರುವ ಅರಣ್ಯ ಪ್ರದೇಶದಿಂದ ಬಂದ ಚಿರತೆ  ನಾಯಿಯನ್ನು ಬಲಿ ಪಡೆದಿದೆ.

ಘಟನೆಯಿಂದ ಇಲ್ಲಿನ ಸ್ಥಳೀಯರು ಆತಂಕಕ್ಕೊಳಗಾಗಿದ್ದು ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES