Wednesday, January 22, 2025

ವರ್ತೂರು ಸಂತೋಷ್​ ಜೊತೆ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ಬಿಗ್​ ಬಾಸ್​ ಸ್ಪರ್ಧಿ ತನಿಷಾ !

ಬೆಂಗಳೂರು : ಬಿಗ್ ಬಾಸ್​ ಕನ್ನಡ ಸೀಸನ್​ 2024 ರಲ್ಲಿ ರಾಜ್ಯದ ಜನತೆಯನ್ನು ರಂಜಿಸಿದ್ದ ಸ್ಪರ್ಧಿಗಳಾದ ವರ್ತೂರು ಸಂತೋಷ್​ ಹಾಗು ತನಿಷಾ ಇತ್ತೀಚೆಗೆ ಬಾರಿ ಸುದ್ದಿಯಲ್ಲಿದ್ದು ಇಬ್ಬರ ನಡುವಿನ ಆತ್ಮೀಯತೆಗೆ ಕುರಿತು ಚರ್ಚೆ ನಡೆಯುತ್ತಿದೆ, ಇಬ್ಬರು ಮದುವೆಯಾಗಲಿದ್ದಾರೆಂಬ ಮಾತುಗಳು ಕೂಡ ಕೇಳಿ ಬರುತ್ತಿದೆ ಈ ಊಹಾಪೋಹಗಳಿಗೆ  ತನಿಷಾ ಸ್ಪಷ್ಟನೆ ನೀಡಿದ್ದಾರೆ.

ಬಿಗ್ ಬಾಸ್ ಮನೆಯಿಂದ ಆಚೆ ಬಂದ ಬಳಿಕ ತನಿಷಾ ವರ್ತೂರು ಸಂತೋಷ್ ಅವರ ಜೊತೆ ಕಾಣಿಸಿಕೊಂಡಿದ್ದರು. ವರ್ತೂರು ಅವರ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದರು. ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಫ್ಯಾನ್ಸ್ ಗಳ ಊಹಿಸಿದ್ದರು. ಕೆಲ ಫ್ಯಾನ್ಸ್​​ಗಳು ವರ್ತೂರು ಹಾಗೂ ತನಿಷಾ ಇಬ್ಬರು ಮದುವೆಯಾಗಬೇಕೆಂದು ಬಯಸಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಹಾಸನದಲ್ಲಿ ಜೆಡಿಎಸ್‌ ಗೆಲ್ಲಬೇಕು!- ಹೆಚ್​.ಡಿ ಕುಮಾರಸ್ವಾಮಿ

ಇತ್ತೀಚೆಗೆ ತನಿಷಾ ಅವರು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ವರ್ತೂರು ಅವರೊಂದಿಗಿನ ಆತ್ಮೀಯತೆ ಬಗ್ಗೆ ಪ್ರಶ್ನೆ ಕೇಳಲಾಗಿದ್ದು, ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

ವರ್ತೂರು ಅವರಿಗೆ ಅವರದ್ದೇ ಆದ ಜೀವನ ಇದೆ. ಅವರೂ ಮದುವೆಯಾದ ಮೇಲೂ, ನಾನು ಮದುವೆಯಾದ ಮೇಲೂ ಇಬ್ಬರೂ ಹೀಗೆ ಫ್ರೆಂಡ್ ಆಗಿ ಇರುತ್ತೇವೆ. ನಮ್ಮ ಸ್ನೇಹ ಹೀಗೆಯೇ ಇರುತ್ತದೆ. ಅದನ್ನು ನೋಡಿ ಫ್ಯಾನ್ಸ್​​ಗಳು ಖುಷಿ ಆಗಿರಬೇಕು” ಎಂದು ನಗುತ್ತಾ ವಿಚಾರಕ್ಕೆ ತೆರೆ ಎಳೆದಿದ್ದಾರೆ.

RELATED ARTICLES

Related Articles

TRENDING ARTICLES