Wednesday, January 22, 2025

ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೂ ಆಯುಷ್ಮಾನ್‌ ಭಾರತ್‌ ವಿಸ್ತರಣೆ: ಸಚಿವೆ ನಿರ್ಮಲಾ ಸೀತಾರಾಮನ್ 

ಹೊಸದಿಲ್ಲಿ: ಆಯುಷ್ಮಾನ್ ಭಾರತ್ ಅಡಿಯಲ್ಲಿ ಆರೋಗ್ಯ ರಕ್ಷಣೆಯನ್ನು ಎಲ್ಲಾ ಆಶಾ, ಅಂಗನವಾಡಿ  ಕಾರ್ಯಕರ್ತೆಯರಿಗೂ ವಿಸ್ತರಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

2024ರ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ಅವರು ಈ ಅಂಶವನ್ನು ಪ್ರಸ್ತಾಪಿಸಿದರು.

ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ-ಜನ ಆರೋಗ್ಯ ಯೋಜನೆ ವಿಶ್ವದಲ್ಲೇ ಅತಿ ದೊಡ್ಡ ಸಾರ್ವಜನಿಕ ನಿಧಿಯ ಆರೋಗ್ಯ ವಿಮಾ ಯೋಜನೆಯಾಗಿದ್ದು, ದ್ವಿತೀಯ ಮತ್ತು ತೃತೀಯ ಆರೈಕೆಗಾಗಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ.ಗಳನ್ನು ಒದಗಿಸುತ್ತದೆ. ಕಳೆದ ವರ್ಷ ಡಿಸೆಂಬರ್ 27ರವರೆಗೆ 12 ಕೋಟಿ ಕುಟುಂಬಗಳಿಗೆ ಸೇರಿದ 55 ಕೋಟಿ ಜನ ಈ ಯೋಜನೆಗೆ ಒಳಪಟ್ಟಿದ್ದರು.

ಇದನ್ನೂ ಓದಿ: ಮಧ್ಯಮ ವರ್ಗದವರಿಗಾಗಿ ವಸತಿ ಯೋಜನೆ: ನಿರ್ಮಲಾ ಸೀತಾರಾಮನ್

ಕಳೆದ ವರ್ಷ ಡಿಸೆಂಬರ್ 27ರವರೆಗೆ 12 ಕೋಟಿ ಕುಟುಂಬಗಳ 55 ಕೋಟಿ ಜನರು ಈ ಯೋಜನೆಗೆ ಒಳಪಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES