Sunday, December 22, 2024

ಹೇಗಿದೆ ಶಾರುಖ್ ಡಂಕಿ ಸಿನಿಮಾ?

ಫಿಲ್ಮಿಡೆಸ್ಕ್​: ಶಾರೂಖ್ ಖಾನ್ ನಟನೆಯ ರಾಜ್​ಕುಮಾರ್ ಹಿರಾನಿ ನಿರ್ದೇಶನದ ಬಹುನಿರೀಕ್ಷೆಯ ಡಂಕಿ ಗುರುವಾರವೇ ವರ್ಲ್ಡ್​​ ವೈಡ್ ತೆರೆಗೆ ಬಂದಿದೆ. ಡಂಕಿಗೆ ನಿರೀಕ್ಷೆಯಂತೆ  ವಿಶ್ವದಾದ್ಯಂತ  ಭರ್ಜರಿ ಓಪನಿಂಗ್ ಕೂಡ ಸಿಕ್ಕಿದೆ. ಹಾಗಾದರೆ ಈ ಬಹುನಿರೀಕ್ಷೆಯ ಸಿನಿಮಾ ಹೇಗೆ ಮೂಡಿಬಂದಿದೆ.? ಡಂಕಿಯನ್ನ ನೋಡಿದ ಪ್ರೇಕ್ಷಕರು ಹೇಳಿದ್ದೇನು..? ಇಲ್ಲಿದೆ ವರದಿ.

ಯೆಸ್, ಬಾಲಿವುಡ್ ಅಂಗಳದ ಬಹುನಿರೀಕ್ಷೆಯ ಡಂಕಿ ಸಿನಿಮಾ ಇವತ್ತು ವಿಶ್ವದಾದ್ಯಂತ ತೆರೆಗೆ ಬಂದಿದೆ.  ನಿರೀಕ್ಷೆಯಂತೆಯೇ ಡಂಕಿಗೆ ಭರ್ಜರಿ ಓಪನಿಂಗ್ ಕೂಡ ಸಿಕ್ಕಿದೆ. ಚಿತ್ರವನ್ನ ನೋಡಿದ ಫ್ಯಾನ್ಸ್ ರಾಜಕುಮಾರ್ ಹಿರಾನಿ ಮ್ಯಾಜಿಕ್ ಈ ಬಾರಿಯೂ ಮಿಸ್ ಆಗಿಲ್ಲ ಅಂತಿದಾರೆ. ಅಷ್ಟೇ ಅಲ್ಲ ಕಿಂಗ್ ಖಾನ್ ಶಾರೂಖ್ ಅಕೌಂಟ್​​ನಲ್ಲಿ ಹ್ಯಾಟ್ರಿಕ್ ಹಿಟ್ ಸೇರೋದು ಪಕ್ಕಾ ಅಂತಿದಾರೆ.

ಡಂಕಿ ಸಿನಿಮಾ  ಫಸ್ಟ್ ಹಾಫ್​ ನಲ್ಲಿ ಸಖತ್ ಫನ್ನಿ ದೃಶ್ಯಗಳಿವೆ. ವಿದೇಶಕ್ಕೆ ಹೊರಡಲು ಪರದಾಡೋ ನಾಲ್ವರು ಸ್ನೇಹಿತರು. ಅದಕ್ಕಾಗಿ ಅವರ ಇಂಗ್ಲೀಷ್ ಕಲಿಕೆಯ ಸಾಹಸ, ವೀಸಾ ಪಡೆಯೋದಕ್ಕೆ ಮಾಡೋ ಸರ್ಕಸ್, ಕೊನೆಗೆ ಕಳ್ಳಮಾರ್ಗದಲ್ಲಿ ಫಾರಿನ್ ಗೆ ಹೊರಡೋ ಹುಚ್ಚಾಟ ನೋಡುಗರನ್ನ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತೆ.

ಇದನ್ನೂ  ಓದಿ: ಹೆಣ್ಣು ಸಿಗದೆ ಅನಾಥಾಶ್ರಮದ ಯುವತಿರೊಂದಿಗೆ ಮದುವೆಯಾದ ಬ್ರಾಹ್ಮಣ ಯುವಕರು!

ಆದ್ರೆ ಸೆಕೆಂಡ್ ಹಾಫ್​ನುದ್ದಕ್ಕೂ ಒಂದು ಎಮೋಷನಲ್ ಕಥೆ ಇದೆ. ಇದು ಕೊಂಚ ಎಳೆದಂತೆ ಬಾಸವಾದ್ರೂ ಕಳ್ಳದಾರಿಯಲ್ಲಿ ಪರದೇಶಕ್ಕೆ ಹೊರಟವರ ಪರದಾಟವನ್ನ ಪರಿಣಾಮಕಾರಿಯಾಗಿ ಚಿತ್ರಿಸಿದೆ. ಚಿತ್ರದ ಕೊನೆಯಲ್ಲಿ ಒಂದು ಅದ್ಭುತ ಸಂದೇಶ ಇದೆ. ನಮ್ಮ ಜನ್ಮಭೂಮಿಯೇ ನಮಗೆ ಸ್ವರ್ಗ ಅನ್ನೋ ಸಂದೇಶ ಹೇಳ್ತಾರೆ ಎಸ್.ಆರ್.ಕೆ

ನಗಿಸ್ತಾ ನಗಿಸ್ತಾನೇ ಒಂದು ದೊಡ್ಡ ಸಂದೇಶ ದಾಟಿಸುವ ರಾಜಕುಮಾರ್ ಹಿರಾನಿ ಸ್ಟೈಲ್ ಇಲ್ಲೂ ಮುಂದುವರೆದಿದೆ. ಶಾರೂಖ್​ ಸ್ಟಾರ್​ಡಂ ಪಕ್ಕಕ್ಕಿಟ್ಟು ಸಾದಾ ಸೀದಾ ರಾಜಸ್ತಾನಿ ಪೋರ ಹಾರ್ಡಿಯಾಗಿ ಗಮನ ಸೆಳೀತಾರೆ. ವಿಕ್ಕಿ ಕೌಶಾಲ್ ಅಂತೂ ನಗಿಸ್ತಾನೆ ಅಳಿಸ್ತಾರೆ. ತಾಪ್ಸಿ ಪನ್ನು ಇಷ್ಟವಾಗ್ತಾರೆ.  ಹಿರಾನಿ ಸಿನಿಮಾಗಳಲ್ಲಿ ತುಸು ಹೆಚ್ಚೇ ಸ್ಕೋರ್ ಮಾಡುವ ಬೋಮನ್ ಹಿರಾನಿ ಮತ್ತೊಮ್ಮೆ ಮ್ಯಾಜಿಕ್ ಮಾಡಿದ್ದಾರೆ.

ಡಂಕಿಗೆ ಮೊದಲ ದಿನ ವರ್ಲ್ಡ್​ವೈಡ್ ಭರ್ಜರಿ ಓಪನಿಂಗ್ ಸಿಕ್ಕಿದ್ದು ಚಿತ್ರವನ್ನ ನೋಡಿದ ಪ್ರೇಕ್ಷಕರು ಮಾಸ್ಟರ್​​ಪೀಸ್ ಅಂತ ಕೊಂಡಾಡ್ತಾ ಇದ್ದಾರೆ. ಮೊದಲ ದಿನದ ಅಂತ್ಯಕ್ಕೆ ಡೊಮೆಸ್ಟಿಕ್ ಮಾರ್ಕೆಟ್​​ನಲ್ಲೇ ಡಂಕಿ 35 ರಿಂದ 40 ಕೋಟಿ ಗಳಿಸಬಹುದು ಅಂತ ಅಂದಾಜಿಸಲಾಗ್ತಾ ಇದೆ.

ಇನ್ನೂ ವೀಕೇಂಡ್ ರಜೆ ಜೊತೆಗೆ ಕ್ರಿಸ್ ಮಸ್ ರಜೆ ಕೂಡ ಇರೋದ್ರಿಂದ ಮುಂದಿನ ದಿನಗಳಲ್ಲಿ ಡಂಕಿ ಭರ್ಜರಿ ಗಳಿಕೆ ಮಾಡೋ ನಿರೀಕ್ಷೆಯೂ ಇದೆ. 130 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರೋ ಡಂಕಿ ಈಗಾಗ್ಲೇ ಪ್ರೀ ರಿಲೀಸ್​​ ಬ್ಯುಸಿನೆಸ್​ನಿಂದಲೇ ಲಾಭದಲ್ಲಿದೆ. ಸೋ ಡಂಕಿ ಹಿಟ್​ ಲಿಸ್ಟ್ ಸೇರೋದು ಫಿಕ್ಸ್. ಆ ಮೂಲಕ ರಾಜಕುಮಾರ್​ ಹಿರಾನಿ ತಮ್ಮ ಸೋಲಿಲ್ಲದ ಸರದಾರನ ಪಟ್ಟ ಹಾಗೇ ಇರಿಸಿಕೊಂಡಿದ್ದಾರೆ. ಶಾರೂಖ್ ಈ ವರ್ಷದ ಮೂರನೇ ಹಿಟ್ ಕೊಟ್ಟು ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ್ದಾರೆ.

ಅಮೀತ್, ಫಿಲಂ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES