ಶಾಲಾ ಮಕ್ಕಳಿಗಾಗಿ ಅಂಡರ್ ಪಾಸ್​ ನಿರ್ಮಿಸುವಂತೆ ಮನವಿ!

ದೊಡ್ಡಬಳ್ಳಾಪುರ: ತಾಲ್ಲೂಕಿನ ಮೋಪರಹಳ್ಳಿಯ ಜನ, ಜಾನುವಾರುಗಳು, ಶಾಲಾಮಕ್ಕಳು ಸುಗಮವಾಗಿ ಚಲಿಸಲು ಅಂಡರ್ ಪಾಸ್ ಬೇಕು ಎಂದು ಮೋಪರಹಳ್ಳಿಯ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳಿಗೆ ಮನವಿ ಮಾಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೊಸಕೋಟೆ – ದಾಬಸ್ ಪೇಟೆ ರಸ್ತೆಯನ್ನು ಅಗಲೀಕರಣ ಮಾಡುತ್ತಿದ್ದು, ರಸ್ತೆಯ ಕಾಮಗಾರಿಯು ಮೋಪರಹಳ್ಳಿಯಲ್ಲಿ ಮಾರ್ಗವಾಗಿ ಹಾದುಹೋಗುತ್ತಿದೆ. ಈ ಗ್ರಾಮದಲ್ಲಿರುವ ಶಾಲಾ ಮಕ್ಕಳು ಶಾಲೆಗೆ ಬರಲು ಮತ್ತು ಹೋಗಲು ರೈತರು, ಜನ ಜಾನುವಾರುಗಳು ಪಕ್ಕದ ಜಮೀನುಗಳಿಗೆ ಹೋಗಿಬರಲು ಕಷ್ಟವಾಗುತ್ತಿದೆ, ಅಲ್ಲದೆ ಈ ರಸ್ತೆಯಲ್ಲಿ ಅಪಘಾತಗಳು ಆಗುತ್ತಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ಮಾಡಿ ಅಂಡರ್ ಪಾಸ್ ರಸ್ತೆಯನ್ನು ಮಾಡಿಸಿ ಶಾಲಾ ಮಕ್ಕಳಿಗೆ, ರೈತರಿಗೆ, ಜನ ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮೋಪರಹಳ್ಳಿ ಗ್ರಾಮಸ್ಥರು ಹೇಳಿದರು.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ನಮಾಜ್‌ ಬ್ರೇಕ್‌ ರದ್ದು!

ಈ ಸಂದರ್ಭದಲ್ಲಿ ಮೋಪರಹಳ್ಳಿ ಗ್ರಾಮಸ್ಥರಾದ ರವಿಕುಮಾರ್, ಎಂ.ಪಿ ನಾಗರಾಜ್, ಮುನಿಆಂಜಿನಪ್ಪ, ಸುರೇಶ, ವೆಂಕಟೇಶ್, ರಾಮಪ್ಪ, ಹನುಮಂತಗೌಡ, ರಾಮಾಂಜಿನಪ್ಪ, ಆನಂದ, ಮುನಿರಾಜ, ನಾಗೇಶ, ಚನ್ನಕೃಷ್ಣ, ಮಾರಪ್ಪ, ಮುರಳಿ ಎಂ,ಹನುಮಂತಗೌಡ,ರಾಮಾಂಜಿನಪ್ಪ, ಗಂಗರಾಜ, ರಮೇಶ, ನಾರಾಯಣಪ್ಪ. ಮುನಿಆಂಜಿನಪ್ಪ, ಆಂಜಿನಪ್ಪ, ರಮೇಶ್, ಹನುಮರಾಜ, ಹರೀಶ, ರಾಮಾಂಜಿನಪ್ಪ, ಮತ್ತಿತರರು ಹಾಜರಿದ್ದರು.

RELATED ARTICLES

Related Articles

TRENDING ARTICLES