Saturday, May 18, 2024

ರಾಜ್ಯಸಭೆಯಲ್ಲಿ ನಮಾಜ್‌ ಬ್ರೇಕ್‌ ರದ್ದು!

ದೆಹಲಿ: ಲೋಕಸಭೆಯ ಸಮಯಕ್ಕೆ ಅನುಗುಣವಾಗಿ ರಾಜ್ಯಸಭೆಯಲ್ಲಿ ಶುಕ್ರವಾರದ ಹೆಚ್ಚುವರಿ 30 ನಿಮಿಷದ ವಿರಾಮವನ್ನು ತೆಗೆದುಹಾಕಲಾಗಿದೆ ಎಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್‌ಕರ್‌ ತಿಳಿಸಿದ್ದಾರೆ.

ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್‌ಕರ್‌ ಅವರು ಡಿಸೆಂಬರ್ 8 ರಂದು ಸದನಕ್ಕೆ ಮಾಹಿತಿ ನೀಡಿದ್ದು, ಶುಕ್ರವಾರದ ಸದನದ ಸಮಯವನ್ನು ಲೋಕಸಭೆಯ ಸಮಯಕ್ಕೆ ಹೊಂದಿಸುವಂತೆ ಬದಲಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಈರುಳ್ಳಿ ಬೆನ್ನಲ್ಲೇ ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ!

ಸಾಮಾನ್ಯವಾಗಿ ಶುಕ್ರವಾರ ರಾಜ್ಯಸಭೆಯಲ್ಲಿ ಕಲಾಪ 2.30ಕ್ಕೆ ಆರಂಭವಾಗುತ್ತಿತ್ತು. ಆದರೆ, ಈ ಬಾರಿ 2 ಗಂಟೆಗೆ ನಿಗದಿ ಮಾಡಿರುವ ಬಗ್ಗೆ ಡಿಎಂಕೆ ಸಂಸದ ತಿರುಚಿ ಎನ್‌.ಶಿವ ಅವರು ಸದನದಲ್ಲಿ ಪ್ರಶ್ನೆ ಮಾಡಿದ್ದರು. ರಾಜ್ಯಸಭೆಯಲ್ಲಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ ಪ್ರಕಾರ, ಮುಸ್ಲಿಂ ರಾಜ್ಯಸಭಾ ಸದಸ್ಯರು ನಮಾಜ್ ಮಾಡಲು ಅನುವು ಮಾಡಿಕೊಡಲು ಶುಕ್ರವಾರದಂದು 30 ನಿಮಿಷಗಳ ಹೆಚ್ಚುವರಿ ಭೋಜನ ವಿರಾಮವನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದರು.

ರಾಜ್ಯಸಭೆಯ ಕಲಾಪಗಳು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 6ರವರೆಗೆ ನಡೆಯುತ್ತದೆ. ಮಧ್ಯಾಹ್ನ 1 ರಿಂದ 2ರವರೆಗೆ ಭೋಜನ ವಿರಾಮವಿರುತ್ತದೆ.

RELATED ARTICLES

Related Articles

TRENDING ARTICLES