Saturday, May 18, 2024

ಹೆಲ್ಮೆಟ್​ ಹಾಕಿದ್ರೆ ಗುಲಾಬಿ, ಇಲ್ಲದಿದ್ರೆ ದಂಡದ ರಶೀದಿ; ಎಸ್​ಪಿ ವಿನೂತನ ಜನಜಾಗೃತಿ

ಹಾವೇರಿ: ದ್ವಿಚಕ್ರ ವಾಹನ ಸವಾರರಿಗೆ ಜಾಗೃತಿ ಮೂಡಿಸಲು ಹೊಸ ರೀತಿಯ ಆಲೋಚನೆಯನ್ನು ಹಾವೇರಿ ಜಿಲ್ಲೆಯ ಸಾರ್ವಜನಿಕರಿಗೆ ಅಂಶುಕುಮಾರ್ ಅರಿವು ಮೂಡಿಸುತ್ತಿದ್ದಾರೆ. 

ರಾಜ್ಯದಲ್ಲಿ ರಸ್ತೆ ಅಪಘಾತಗಳಲ್ಲಿ ಹೆಚ್ಚು ಸಾವು ಸಂಭವಿಸುತ್ತಿರುವ ಜಿಲ್ಲೆಗಳಲ್ಲಿ ಹಾವೇರಿಯೂ ಒಂದು. ಜಿಲ್ಲೆಯಲ್ಲಿ ಪ್ರತಿವರ್ಷ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿರುವ ಸಂಖ್ಯೆ 200ಕ್ಕೂ ಅಧಿಕ ಇದೆ. ಅದರಲ್ಲೂ ಹೆಚ್ಚಿನ ಸಾವು ಬೈಕ್ ಸವಾರರದ್ದಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾ‌ರ್ ಇದೀಗ ರಸ್ತೆ ಅಪಘಾತ ನಿಯಂತ್ರಿಸಲು ಮತ್ತು ಸಾವುಗಳನ್ನು ತಡೆಯಲು ಹೆಲ್ಮಟ್ ಜಾಗೃತಿ ಮೂಡಿಸಿದ್ದಾರೆ.

ಇದನ್ನೂ ಓದಿ: ವಿಶೇಷ ಚೇತನ ಅಭಿಮಾನಿ ಜೊತೆ ಭೀಮನ ಖಾಸ್​ಬಾತ್!

ಜಿಲ್ಲೆಯಲ್ಲಿ 60 ಜಾಗೃತಿ ಪಾಯಿಂಟ್
ಇದಕ್ಕಾಗಿ ಜಿಲ್ಲೆಯಲ್ಲಿರುವ ಸುಮಾರು 19 ಪೊಲೀಸ್ ಠಾಣೆಗಳಲ್ಲಿ 60 ಪಾಯಿಂಟ್ ಮಾಡಿ ಹೆಲ್ಮಟ್ ಜಾಗೃತಿ ಮೂಡಿಸುತ್ತಿದ್ದಾರೆ. 60 ಪಾಯಿಂಟ್‌ಗಳಲ್ಲಿ ಮುಂಜಾನೆ 9 ರಿಂದ 11 ಗಂಟೆಯವರೆಗೆ ಮತ್ತು ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಪೊಲೀಸ್ ಸಿಬ್ಬಂದಿ ಹೆಲ್ಮಟ್ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಸ್ವತಃ ರಸ್ತೆಗೆ ಇಳಿದಿರುವ ಎಸ್ಪಿ ಅಂಶುಕುಮಾರ್ ತಾವೇ ಹೆಲೆಟ್ ಪರಿಶೀಲನೆ ನಡೆಸುತ್ತಿದ್ದಾರೆ.

ಇವರುಆರಂಭದಲ್ಲಿ ಕೆಲ ದಿನ ಹೆಲೈಟ್ ಇಲ್ಲದೆ ಬರುತ್ತಿದ್ದ ಸವಾರರಿಗೆ ಎಚ್ಚರಿಕೆ ನೀಡಿ ಕಳಿಹಿಸುತ್ತಿದ್ದ ಪೊಲೀಸ್‌ ಇಲಾಖೆ ಸಿಬ್ಬಂದಿ ಇದೀಗ ಹೆಲ್ಕೆಟ್ ಇಲ್ಲದ ಸವಾರರಿಗೆ ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ. ವಿಶೇಷವಾಗಿ ಹೆಲ್ಕೆಟ್ ಹಾಕಿಕೊಂಡು ಬರುವ ಬೈಕ್ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ

 

 

 

RELATED ARTICLES

Related Articles

TRENDING ARTICLES